ಎಚ್ ಡಿ ಕೋಟೆಯಲ್ಲಿ ಮತ್ತೊಂದು ಹುಲಿ ಸಾವು

June 24, 2019
7:01 PM

ಮಡಿಕೇರಿ/ಮೈಸೂರು:  ಮೈಸೂರು ಜಿಲ್ಲೆಯ  ಎಚ್ ಡಿ  ಕೋಟೆಯಲ್ಲಿ  ಸುಮಾರು 10 ವರ್ಷದ ಹೆಣ್ಣು ಹುಲಿಯೊಂದು  ಸಾವನ್ನಪ್ಪಿರುವುದು  ಸೋಮವಾರ ಬೆಳಕಿಗೆ ಬಂದಿದೆ. ಎರಡು ಹುಲಿಗಳ ನಡುವೆ ಕಾದಾಟವಾಗಿ ಗಾಯವಾಗಿ ಹುಲಿ ಸತ್ತಿರಬೇಕೆಂದು  ಈಗ ಶಂಕಿಸಲಾಗಿದೆ. ಎಚ್ ಡಿ ಕೋಟೆಯಿಂದ 15 ಕಿಮೀ ದೂರದ ಹೆಬ್ಬಾಳದಲ್ಲಿ ಹುಲಿ ಸಾವನ್ನಪ್ಪಿದೆ.

ಹುಲಿಗಳ ಕಾದಾಟದಿಂದಾಗಿ ಗಾಯಗೊಂಡು  ಆಹಾರ ಸೇವಿಸಲಾಗದೆ ಸತ್ತಿರಬಹುದು ಎಂದು ವೈದ್ಯರು ಶಂಕಿಸಿದ್ದು ಹೊಟ್ಟೆಯಲ್ಲಿ  ಆಹಾರ ಕಂಡುಬಾರದೇ ಇರುವುದು  ಶಂಕೆಯನ್ನು ಪುಷ್ಟಿಗೊಳಿಸಿದೆ.  ಬಂಡೀಪುರ ಹುಲಿ ಸಂರಕ್ಷಣಾ ಕೇಂದ್ರದಿಂದ 4 ಕಿಮೀ ದೂರದಲ್ಲಿ  ಹುಲಿ ಸಾವನ್ನಪ್ಪಿರುವುದು  ಬೆಳಕಿಗೆ ಬಂದಿದ್ದು  ಕೊಳೆತ ಸ್ಥಿತಿಯಲ್ಲಿ ಹುಲಿಯ ಶವ ಪತ್ತೆಯಾಗಿದೆ. ಕಳೆದ ವಾರವೂ ಹುಲಿ ಸಾವನ್ನಪ್ಪಿತ್ತು. ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ಕಳೆದ ಕೆಲವು ಸಮಯಗಳಿಂದ ಹುಲಿಗಳು ಸಾವನ್ನಪ್ಪುತ್ತಿರುವುದಕ್ಕೆ ಪರಿಸರ ಪ್ರೇಮಿಗಳು ಅನುಮಾನ ವ್ಯಕ್ತಪಡಿಸುತ್ತಾರೆ.

ಅರಣ್ಯ ಇಲಾಖೆಯ ಸಿಬಂದಿಗಳು ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ  ಡಿಸಿಎಫ್ ಡಾ.ಕೆ.ಸಿ.ಪ್ರಶಾಂತ್ ಕುಮಾರ್, ವಾರ್ಡನ್ ಕೃತಿಕಾ ಆಲನಹಳ್ಳಿ,  ಆರ್ ಎಫ್ ಒ  ಮಧು, ಪಶುವೈದ್ಯ ಡಾ.ಡಿ.ಎನ್.ನಾಗರಾಜು ಹಾಗೂ ಇನ್ನಿತರರು ಇದ್ದರು. ಹುಲಿಗಳ  ಸಾವಿಗೆ ನಿಖರ ಕಾರಣಗಳೇನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸಮುದ್ರ ಮಾರ್ಗದಲ್ಲಿ ಅಡಿಕೆ ಸಾಗಾಟ : ಒಡಿಶಾದ ಬಾಲಸೋರ್‌ನಲ್ಲಿ ₹2 ಕೋಟಿಗೂ ಅಧಿಕ ಅಡಿಕೆ ವಶ- ಅಡಿಕೆ ಜಾಲದ ಹಿಂದೆ ಬಿದ್ದಿರುವ ಪೊಲೀಸರು
September 19, 2026
11:28 AM
by: ದ ರೂರಲ್ ಮಿರರ್.ಕಾಂ
ಬರಪೀಡಿತ 101 ತಾಲೂಕುಗಳ ರೈತರಿಗೆ ಸಾಲ ಮರುಪಾವತಿಗೆ 12 ತಿಂಗಳ ವಿಸ್ತರಣೆ
September 17, 2026
7:20 AM
by: ದ ರೂರಲ್ ಮಿರರ್.ಕಾಂ
ಕೋಲಾರ ಸಮೀಪ 10 ಟನ್ ಸಿಂಥೆಟಿಕ್‌ ಅಡಿಕೆ ವಶ…!?
September 16, 2026
7:17 AM
by: ದ ರೂರಲ್ ಮಿರರ್.ಕಾಂ
ಮಳೆಗೆ ಬೆಂಗಳೂರು ತತ್ತರ – ಸಂಜೆ ಏಕಾಏಕಿ ಸುರಿದ ಧಾರಾಕಾರ ಮಳೆಗೆ ರಸ್ತೆಗಳು ಜಲಾವೃತ
September 15, 2026
10:09 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror