ತೋಟಗಾರಿಕಾ ಬೆಳೆಗಾರರ ಪರ ಲೋಕಸಭೆಯಲ್ಲಿ ಧ್ವನಿ – ಹವಾಮಾನ ಆಧಾರಿತ ಬೆಳೆ ವಿಮೆ ಮರುಪರಿಷ್ಕರಣೆಗೆ ಕ್ಯಾ. ಚೌಟ ಒತ್ತಾಯ

August 12, 2026
6:58 AM
ಅಡಿಕೆ, ತೆಂಗು, ಕೋಕೋ ಮತ್ತು ಸಾಂಬಾರು ಬೆಳೆಗಳಿಗೆ ಸ್ಥಳೀಯ ಹವಾಮಾನದಿಂದ ಉಂಟಾಗುವ ನೈಜ ನಷ್ಟವನ್ನು ಪರಿಗಣಿಸಿ RWBCIS ಯೋಜನೆಯನ್ನು ಮರುಪರಿಷ್ಕರಿಸಬೇಕು ಎಂದು ಕ್ಯಾ. ಬ್ರಿಜೇಶ್ ಚೌಟ ಲೋಕಸಭೆಯಲ್ಲಿ ಒತ್ತಾಯಿಸಿದ್ದಾರೆ. ಕೃಷಿ ವಿಜ್ಞಾನಿಗಳು–ವಿಮಾ ತಜ್ಞರ ಸಮಿತಿ, ಕರಾವಳಿ–ಮಲೆನಾಡಿನಲ್ಲಿ ಪ್ರಾಯೋಗಿಕ ಅನುಷ್ಠಾನ, ಟ್ರಿಗರ್ ಆಧಾರಿತ ಪಾವತಿಯಲ್ಲಿ ಪಾರದರ್ಶಕತೆ ಹಾಗೂ ರಾಜ್ಯಗಳಿಗೆ ಮಾದರಿ ಅಧಿಸೂಚನೆ ನೀಡುವಂತೆ ಅವರು ಸಲಹೆ ನೀಡಿದ್ದಾರೆ.

ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಹಾಗೂ ಮಲೆನಾಡು ಭಾಗದ ಅಡಿಕೆ, ತೆಂಗು, ಕೋಕೋ ಮತ್ತು ಸಾಂಬಾರು ಬೆಳೆಗಳಂತಹ ಬಹುವಾರ್ಷಿಕ ತೋಟಗಾರಿಕಾ ಬೆಳೆಗಳು ಎದುರಿಸುತ್ತಿರುವ ಸ್ಥಳೀಯ ಹವಾಮಾನ ಸವಾಲುಗಳಿಗೆ ತಕ್ಕಂತೆ ಪುನರ್ ರಚಿತ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ (RWBCIS)ಯನ್ನು ಮರುಪರಿಷ್ಕರಿಸಬೇಕು ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಒತ್ತಾಯಿಸಿದ್ದಾರೆ.

Advertisement

ಲೋಕಸಭೆಯಲ್ಲಿ ನಿಯಮ 377ರಡಿ ವಿಷಯ ಪ್ರಸ್ತಾಪಿಸಿದ ಅವರು, ಸಾಮಾನ್ಯ ಋತುಮಾನದ ಬೆಳೆಗಳಿಗೆ ಹೋಲಿಸಿದರೆ ಬಹುವಾರ್ಷಿಕ ತೋಟಗಾರಿಕಾ ಬೆಳೆಗಳು ವಿಭಿನ್ನ ರೀತಿಯ ಹವಾಮಾನ ಆಪತ್ತುಗಳನ್ನು ಎದುರಿಸುತ್ತವೆ ಎಂದು ಗಮನಸೆಳೆದಿದ್ದಾರೆ.

ಕರಾವಳಿ ಹಾಗೂ ಮಲೆನಾಡಿನ ತೋಟಗಳಲ್ಲಿ ನಿರಂತರ ಮಳೆ, ಹೆಚ್ಚಿನ ಆರ್ದ್ರತೆ, ರೋಗಬಾಧೆ ಮತ್ತು ಪಾತಿಯಲ್ಲಿ ನೀರು ನಿಲ್ಲುವಿಕೆ ಸೇರಿದಂತೆ ಸ್ಥಳೀಯ ಹವಾಮಾನ ವ್ಯತ್ಯಾಸಗಳಿಂದ ಬೆಳೆಗಳಿಗೆ ಗಂಭೀರ ಹಾನಿಯಾಗುತ್ತದೆ. ಆದರೆ ಹತ್ತಿರದ ಹವಾಮಾನ ಕೇಂದ್ರದಲ್ಲಿ ದಾಖಲಾಗುವ ಮಳೆ ಅಥವಾ ತಾಪಮಾನದ ಪ್ರಮಾಣ ನಿಗದಿತ ಮಿತಿಯನ್ನು ದಾಟದಿದ್ದರೂ, ವಾಸ್ತವವಾಗಿ ತೋಟಗಳಲ್ಲಿ ಬೆಳೆ ಸಂಪೂರ್ಣ ನಾಶವಾಗುವ ಪರಿಸ್ಥಿತಿ ಎದುರಾಗಬಹುದು ಎಂದು ಅವರು ಹೇಳಿದ್ದಾರೆ.

ಹೀಗಾಗಿ, ತೋಟಗಾರಿಕಾ ಬೆಳೆಗಳಿಗೆ ಉಂಟಾಗುವ ನೈಜ ನಷ್ಟದ ಸ್ವರೂಪವನ್ನು ಪರಿಗಣಿಸಿ ವಿಮಾ ಯೋಜನೆಗಳನ್ನು ರೂಪಿಸುವುದು ಅಗತ್ಯ ಎಂದು ಸಂಸದರು ಒತ್ತಾಯಿಸಿದ್ದಾರೆ.

ಕೃಷಿ ವಿಜ್ಞಾನಿಗಳು, ವಿಮಾ ತಜ್ಞರ ಸಮಿತಿ ರಚನೆಗೆ ಸಲಹೆ : RWBCIS ಯೋಜನೆಯ ಮರುಪರಿಷ್ಕರಣೆಗೆ ಕೃಷಿ ವಿಜ್ಞಾನಿಗಳು ಹಾಗೂ ವಿಮಾ ಆಡಿಟರ್‌ಗಳ ಜಂಟಿ ಸಮಿತಿ ರಚಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಈ ಸಮಿತಿಯು ಹವಾಮಾನ ಕೇಂದ್ರಗಳ ಸಾಂದ್ರತೆ, ಅಧಿಸೂಚಿತ ಘಟಕಗಳ ಗಾತ್ರ, ಮಳೆ ಮತ್ತು ಆರ್ದ್ರತೆಯ ಮೇಲ್ವಿಚಾರಣಾ ವ್ಯವಸ್ಥೆ, ವಿಮಾ ಮೊತ್ತ ಹಾಗೂ ಪರಿಹಾರ ಪಾವತಿಯ ಕಾಲಮಿತಿಯಂತಹ ಪ್ರಮುಖ ತಾಂತ್ರಿಕ ಅಂಶಗಳನ್ನು ಪರಿಶೀಲಿಸಿ ಹೊಸ ರೂಪುರೇಷೆ ಸಿದ್ಧಪಡಿಸಬೇಕು ಎಂದು ಅವರು ಹೇಳಿದ್ದಾರೆ.

ವಿವಿಧ ಸಂಸ್ಥೆಗಳ ಸಕ್ರಿಯ ಪಾಲ್ಗೊಳ್ಳುವಿಕೆಗೆ ಒತ್ತು :  ವಿಮಾ ಯೋಜನೆಯ ರೂಪುರೇಷೆ ಸಿದ್ಧಪಡಿಸುವ ಸಂದರ್ಭದಲ್ಲಿ ಐಸಿಎಆರ್ ಸಂಸ್ಥೆಗಳು, ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯಗಳು, ವಿಮಾ ಕಂಪನಿಗಳು, ಕರ್ನಾಟಕ ಸರ್ಕಾರ ಹಾಗೂ ಬೆಳೆಗಾರರ ಒಕ್ಕೂಟಗಳನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕ್ಯಾ. ಚೌಟ ಒತ್ತಾಯಿಸಿದ್ದಾರೆ.

ತೋಟಗಾರಿಕಾ ಬೆಳೆಗಳ ನೈಜ ಹವಾಮಾನ ನಷ್ಟವನ್ನು ಅರ್ಥಮಾಡಿಕೊಂಡು ವಿಮಾ ವ್ಯವಸ್ಥೆಯನ್ನು ರೂಪಿಸಲು ವಿಜ್ಞಾನಿಗಳು, ವಿಮಾ ಸಂಸ್ಥೆಗಳು, ಸರ್ಕಾರ ಮತ್ತು ಬೆಳೆಗಾರರ ಅನುಭವಗಳನ್ನು ಒಟ್ಟುಗೂಡಿಸುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಕರಾವಳಿ, ಮಲೆನಾಡಿನಲ್ಲಿ ಪ್ರಾಯೋಗಿಕ ಅನುಷ್ಠಾನ : ಹೊಸ ಹವಾಮಾನ ಆಧಾರಿತ ಬೆಳೆ ವಿಮಾ ವ್ಯವಸ್ಥೆಯನ್ನು ರಾಷ್ಟ್ರಮಟ್ಟದಲ್ಲಿ ಜಾರಿಗೆ ತರುವ ಮೊದಲು ಕರಾವಳಿ ಮತ್ತು ಮಲೆನಾಡಿನ ಆಯ್ದ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಬೇಕು ಎಂದು ಸಂಸದರು ಸಲಹೆ ನೀಡಿದ್ದಾರೆ.

ಈ ವ್ಯವಸ್ಥೆಯಲ್ಲಿ ಬೆಳೆ ನಷ್ಟದ ನೈಜ ಸ್ಥಿತಿಯನ್ನು ಆಧರಿಸಿ ಪರಿಹಾರ ನೀಡುವುದರ ಜೊತೆಗೆ, ವಿಮಾ ಪರಿಹಾರಕ್ಕೆ ಕಾರಣವಾಗುವ ಟ್ರಿಗರ್‌ಗಳು ಮತ್ತು ಪಾವತಿ ವ್ಯವಸ್ಥೆಯ ಮಾಹಿತಿಯನ್ನು ಪಾರದರ್ಶಕವಾಗಿ ಪ್ರಕಟಿಸಬೇಕು ಎಂದು ಅವರು ಹೇಳಿದ್ದಾರೆ.

ರಾಜ್ಯಗಳಿಗೆ ಮಾದರಿ ಅಧಿಸೂಚನೆ ನೀಡಲು ಒತ್ತಾಯ :  ಸೂಕ್ತ ತೋಟಗಾರಿಕಾ ಬೆಳೆಗಳನ್ನು ವಿಮಾ ವ್ಯಾಪ್ತಿಗೆ ತರಲು ರಾಜ್ಯ ಸರ್ಕಾರಗಳಿಗೆ ಮಾದರಿ ಅಧಿಸೂಚನೆ ಟೆಂಪ್ಲೇಟ್ ಹಾಗೂ ಸ್ಪಷ್ಟ ಕಾಲಮಿತಿಯನ್ನು ಕೇಂದ್ರ ಸರ್ಕಾರ ಒದಗಿಸಬೇಕು ಎಂದು ಕ್ಯಾ. ಚೌಟ ಸಲಹೆ ನೀಡಿದ್ದಾರೆ.

ಕರಾವಳಿ ಮತ್ತು ಮಲೆನಾಡಿನ ತೋಟಗಾರಿಕಾ ಬೆಳೆಗಾರರು ಎದುರಿಸುತ್ತಿರುವ ಹವಾಮಾನ ಬದಲಾವಣೆ ಹಾಗೂ ಸ್ಥಳೀಯ ಬೆಳೆ ನಷ್ಟದ ಸ್ವರೂಪವನ್ನು ಪರಿಗಣಿಸಿ, ಪ್ರಸ್ತುತ ವಿಮಾ ವ್ಯವಸ್ಥೆಯಲ್ಲಿ ಅಗತ್ಯ ಬದಲಾವಣೆಗಳನ್ನು ತರುವುದು ರೈತರ ರಕ್ಷಣೆಗೆ ಪ್ರಮುಖ ಹೆಜ್ಜೆಯಾಗಲಿದೆ ಎಂಬುದು ಅವರ ಒತ್ತಾಯವಾಗಿದೆ.

Dakshina Kannada MP Capt. Brijesh Chouta has urged the Union Agriculture Ministry in the Lok Sabha under Rule 377 to redesign the Restructured Weather Based Crop Insurance Scheme (RWBCIS) to suit the specific climate risks faced by perennial horticultural crops such as arecanut, coconut, cocoa and spices in coastal and Malnad regions. He highlighted that continuous rainfall, humidity, disease pressure and waterlogging can cause severe crop losses even when nearby weather stations do not record rainfall or temperature beyond the prescribed insurance triggers. He proposed a joint committee of agricultural scientists and insurance auditors, greater participation of ICAR institutions, universities, insurers, the Karnataka Government and growers’ organisations, and pilot implementation in selected coastal and Malnad districts before nationwide rollout.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ಅಕ್ರಮ ಆಮದು ಕಡಿವಾಣ – ರೋಸ್ಟೆಡ್ ಅಡಿಕೆಗೆ ₹351 ಕನಿಷ್ಠ ದರ – ಕಸ್ಟಮ್ಸ್‌ ನಿಗಾ ಎಂದ ಕೇಂದ್ರ
August 11, 2026
10:31 PM
by: ದ ರೂರಲ್ ಮಿರರ್.ಕಾಂ
ತೆಂಗು ಬೆಳೆಗೆ ವಿಮೆ : ಕೇಂದ್ರದ ಮಹತ್ವದ ಉತ್ತರ
August 11, 2026
9:56 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 11-08-2026 | ಕರ್ನಾಟಕದ ಹವಾಮಾನದಲ್ಲಿ ಮುಂದಿನ ದಿನಗಳಲ್ಲಿ ಏನು ಬದಲಾವಣೆ ?
August 11, 2026
9:12 PM
by: ಸಾಯಿಶೇಖರ್ ಕರಿಕಳ
ಬಿ.ಎಸ್‌ಸಿ. ಕೃಷಿ ನಂತರ ಏನು ? ಉದ್ಯೋಗ, ಉದ್ಯಮ ಮತ್ತು ಉನ್ನತ ಶಿಕ್ಷಣದ ಅತ್ಯುತ್ತಮ ಅವಕಾಶಗಳು ಇಲ್ಲಿವೆ
August 11, 2026
7:14 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror