ಎರಡನೇ ಹಂತದಲ್ಲಿ 20 ಕುಟುಂಬಗಳಿಗೆ ಆಹಾರ ಸಾಮಗ್ರಿ ವಿತರಣೆ

April 18, 2020
2:16 PM

ಮುಕ್ಕೂರು : ಕುಂಡಡ್ಕ-ಮುಕ್ಕೂರು ನೇಸರ ಯುವಕ ಮಂಡಲ ಮತ್ತು ಸಾರ್ವಜನಿಕ ಗಣೇಶೋತ್ಸವ ಸಮಿತಿ ಇದರ ಆಶ್ರಯದಲ್ಲಿ ದಾನಿಗಳ‌ ನೆರವಿನೊಂದಿಗೆ ಎರಡನೆ ಹಂತದಲ್ಲಿ 20 ಕುಟುಂಬಗಳಿಗೆ 12 ಅಗತ್ಯ ಆಹಾರ ಸಾಮಗ್ರಿಗಳ ಕಿಟ್  ವಿತರಿಸಲಾಯಿತು.

ಮುಕ್ಕೂರು, ಕುಂಡಡ್ಕ, ಕಾನಾವು, ಚೆನ್ನಾವರ, ಅನವುಗುಂಡಿ ಆಸುಪಾಸಿನ ಪ್ರದೇಶದಲ್ಲಿ ಈ ತನಕ ಆಹಾರ ಕಿಟ್ ಸಿಗದೆ ಇರುವ 19 ಕುಟುಂಬಗಳಿಗೆ ಹಾಗೂ ಇತರ 1 ಕುಟುಂಬಕ್ಕೆ ಅಗತ್ಯ ವಸ್ತುಗಳಿರುವ ಕಿಟ್ ವಿತರಿಸಲಾಯಿತು.

ಮನೆ ಮನೆಗೆ ಕಿಟ್ ವಿತರಣೆಗೆ ಚಾಲನೆ ನೀಡಿದ ಸಮಿತಿ ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ, ಜಾತಿ,‌ ಮತ, ಪಕ್ಷದ ಬೇಧಭಾವ ಇಲ್ಲದೆ ಸೇವಾ ಮನೋಭಾವದ ಪರಿಕಲ್ಪನೆಯೊಂದಿಗೆ ಹುಟ್ಟಿಕೊಂಡ ನೇಸರ ಯುವಕ ಮಂಡಲ ಮತ್ತು ಸಾರ್ವಜನಿಕ ಗಣೇಶೋತ್ಸವ ಸಮಿತಿ ಸಮಾಜಮುಖಿ ಚಿಂತನೆ ಪೂರಕವಾಗಿ ಈಗಾಗಲೇ ಹತ್ತಾರು ಚಟುವಟಿಕೆಗಳನ್ನು ಹಮ್ಮಿಕೊಂಡಿದೆ.ಸಮಾಜಪರ ಕಾರ್ಯಗಳಿಗೆ ಸದಾ ಬೆಂಬಲ ‌ನೀಡುವ ಈ ಊರಿನ ದಾನಿಗಳ‌ ಸಹಯೋಗದೊಂದಿಗೆ ಕೊರೊನಾ ಕಷ್ಟಕಾಲದಲ್ಲಿ ಮೊದಲ ಹಂತದಲ್ಲಿ 10 ಮತ್ತು ಎರಡನೇ ಹಂತದಲ್ಲಿ 20 ಕುಟುಂಬಗಳಿಗೆ ಸೇರಿದಂತೆ ಒಟ್ಟು 30 ಮನೆಗಳಿಗೆ ಕಿಟ್ ವಿತರಿಸಿದ್ದೇವೆ ಎಂದರು.

ಈ ಸಂದರ್ಭದಲ್ಲಿ ದಾನಿಗಳಾದ ಯತೀಶ್ ಕಾನಾವು ಜಾಲು, ಗೋಪಾಲಕೃಷ್ಣ ಭಟ್ ಕಾನಾವು, ರಾಧಾಕೃಷ್ಣ ರೈ ಕನ್ನೆಜಾಲು, ಮಹೇಶ್ ಕುಂಡಡ್ಕ, ರಾಮಚಂದ್ರ ಕೋಡಿಬೈಲು, ಜಯಪ್ರಕಾಶ್ ರೈ ಕನ್ನೆಜಾಲು, ಕುಂಬ್ರ ದಯಾಕರ ಆಳ್ವ, ನಿವೃತ್ತ ಶಿಕ್ಷಕ ಬಾಬು ಎನ್, ಗೋಪಾಲಕೃಷ್ಣ ಭಟ್ ಮನವಳಿಕೆ, ರಾಮಚಂದ್ರ ಬರೆಪ್ಪಾಡಿ, ಕುಸುಮಾಧರ ಪೂಜಾರಿ ಅಡ್ಯತಕಂಡ, ಪ್ರಸಾದ್ ಎನ್ ಕುಂಡಡ್ಕ, ರಮೇಶ್ ಪೂಜಾರಿ ಮುಕ್ಕೂರು, ನೇಸರ ಯುವಕ ಮಂಡಲ ಅಧ್ಯಕ್ಷ ರಮೇಶ್ ಕಾನಾವು, ಕಾರ್ಯದರ್ಶಿ ಶಶಿಕುಮಾರ್ ಬಿ.ಎನ್., ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪೂವಪ್ಪ ನಾಯ್ಕ ಕೊಂಡೆಪ್ಪಾಡಿ, ಕಾರ್ಯದರ್ಶಿ ರಕ್ಷಿತ್ ಗೌಡ ಒರುಂಕು ಮೊದಲಾದವರು ಸಹಕರಿಸಿದರು.

20 ಕುಟುಂಬಕ್ಕೆ ಆಹಾರ್ ಸಾಮಾಗ್ರಿ ವಿತರಣೆ: 

ಪ್ರತಿ ಕುಟುಂಬಕ್ಕೆ ಹಾಲು, ಸಕ್ಕರೆ, ಚಾ ಹುಡಿ, ಅವಲಕ್ಕಿ, ಕೆಂಪು ಕಡಲೆ, ಕುಮ್ಟೆ ಮೆಣಸು, ಈರುಳ್ಳಿ, ಟೊಮ್ಯಾಟೊ, ಬಟಾಟೆ, ಉಪ್ಪು, ಸಾಬೂನು ಸೇರಿದಂತೆ 12 ವಸ್ತುಗಳು ಇರುವ ಕಿಟ್ ಅನ್ನು‌ ಒಟ್ಟು 20 ಕುಟುಂಬಗಳಿಗೆ ವಿತರಿಸಲಾಯಿತು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಳೆ ಎಚ್ಚರಿಕೆ – ಉಡುಪಿ, ದಕ್ಷಿಣ ಕನ್ನಡ ಸೇರಿ ನಾಲ್ಕು ಜಿಲ್ಲೆಗಳಲ್ಲಿ ಭಾರೀ ಮಳೆ, ಗಂಟೆಗೆ 50 ಕಿ.ಮೀ. ವೇಗದ ಗಾಳಿ ಸಾಧ್ಯತೆ
July 18, 2026
8:36 AM
by: ದ ರೂರಲ್ ಮಿರರ್.ಕಾಂ
ಯುವಕರ ಮೊದಲ ಆದ್ಯತೆ ಏನಿರಬೇಕು? ರಾಜಕೀಯವಲ್ಲ, ಆರ್ಥಿಕ ಸ್ವಾವಲಂಬನೆ!
July 15, 2026
9:49 PM
by: ಅರುಣ್‌ ಕುಮಾರ್ ಕಾಂಚೋಡು
ಹವಾಮಾನ ವರದಿ | 15-07-2026 | ರಾಜ್ಯದಲ್ಲಿ ಮಳೆ ಯಾಕೆ ಕಡಿಮೆಯಾಗಿದೆ ? ಜುಲೈ 16 ರಿಂದ ಎಲ್ಲೆಲ್ಲಿ ಮಳೆ ಆರಂಭವಾಗಲಿದೆ?
July 15, 2026
2:10 PM
by: ಸಾಯಿಶೇಖರ್ ಕರಿಕಳ
ಕರ್ನಾಟಕದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್…! ಕಾರಣ..?
July 15, 2026
7:02 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror