ಎಸ್‍ಎಸ್‍ಎಲ್‍ಸಿ ಮರುಮೌಲ್ಯಮಾಪನದಲ್ಲಿ ಗರಿ ಮುಡಿಗೇರಿಸಿದ ವಿದ್ಯಾರ್ಥಿ

Advertisement

ಬೆಳ್ಳಾರೆ: ಯಾವತ್ತೂ ಯಶಸ್ಸು ಜೊತೆಗೇ ಇರುತ್ತದೆ. ಆದರೆ ಪ್ರಯತ್ನವೆಂಬುದು ಮುಖ್ಯ. ಮಾಡಿರುವ ಪ್ರಯತ್ನಕ್ಕೆ ಯಶಸ್ಸಂತೂ ಇದ್ದೇ ಇದೆ. ಆದರೆ ಕೆಲವೊಮ್ಮೆ ತಡವಾಗಬಹುದು ಅಷ್ಟೇ. ಇದಕ್ಕೆ ಉದಾಹರಣೆ ಎಣ್ಮೂರಿನ  ವಿದ್ಯಾರ್ಥಿ  ಮಹಮ್ಮದ್ ಮಝೀಫ್.

Advertisement

ಈತ ಮಧ್ಯಮ ವರ್ಗದ ಕುಟುಂಬದ ವಿದ್ಯಾರ್ಥಿ. ತನ್ನ ಜೀವನವನ್ನು ತಾನೇ ರೂಪಸಿಕೊಳ್ಳಬೇಕೆಂಬ ಛಲಕ್ಕೆ ಬಿದ್ದು ಶಾಲಾ ರಜಾ ದಿನಗಳಂದು ಕೇಟರಿಂಗ್‍ನಲ್ಲಿ ದುಡಿಯುತ್ತಿದ್ದ. ಸರಕಾರಿ ಶಾಲೆಯಲ್ಲಿ ಓದಿ ತಾಲೂಕಿಗೆ ದ್ವಿತೀಯ ಹಾಗೂ ಶಾಲೆಗೆ ಮೊದಲಿಗನಾದ. ಇದು ಇತ್ತೀಚೆಗಷ್ಟೇ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 613(ಶೇ98.8) ಗಳಿಸಿದ ಎಣ್ಮೂರಿನ ಮಹಮ್ಮದ್ ಮಝೀಫ್ ಸಾಧನೆಯಾಗಿದೆ. ಮಹಮ್ಮದ್ ಮಝೀಫ್ ಮುರುಳ್ಯ ಗ್ರಾಮದ ರಾಗಿ ಪೇಟೆಯ ಟಿ. ಮಹಮ್ಮದ್ ಹಾಗು ಸಮೀನಾ ಆರ್ ದಂಪತಿಯ ಪುತ್ರ. ಎಣ್ಮೂರು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ.  ಎಣ್ಮೂರು ಶಾಲಾ ಅಧ್ಯಾಪಕರು ಉತ್ತಮ ಫಲಿತಾಂಶಕ್ಕಾಗಿ ಮಾಡಿದ ಶತಪ್ರಯತ್ನಕ್ಕೆ ನಿರೀಕ್ಷೆಗೂ ಮೀರಿ ಪ್ರತಿಫಲ ಮಝೀಫ್‍ನಿಗೆ ದೊರೆತಿದೆ. ಅಂದ ಹಾಗೆ ಮಝೀಫ್ ವಿಶೇಷವಾಗಿ ಗಣಿತದಲ್ಲಿ 100 ಹಾಗೂ ಪ್ರಥಮ ಭಾಷೆ ಕನ್ನಡದಲ್ಲಿ 125 ಪೂರ್ಣ ಅಂಕಗಳನ್ನು ಪಡೆದುಕೊಂಡಿದ್ದಾನೆ.

Advertisement
Advertisement

ಮರುಮೌಲ್ಯಮಾಪನದಿಂದ 3 ಅಂಕ ಹೆಚ್ಚು ದೊರೆಯಿತು :
ಫಲಿತಾಂಶದಂದು ಕನ್ನಡದಲ್ಲಿ 3 ಅಂಕಗಳು ಕಡಿಮೆ ನಮೂದನೆಗೊಂಡಿದ್ದು, ಉತ್ತರ ಪತ್ರಿಕೆಗಳ ಪ್ರತಿಯನ್ನು ತರಸಿ ಪರಿಶೀಲಿಸಿದಾಗ ಕನ್ನಡದಲ್ಲಿ ಪೂರ್ತಿ 125 ಅಂಕಗಳು ಇದ್ದು ಅಂಕಗಳ ಮರು ಎಣಿಕೆಗೆ ಹಾಕಿದ್ದಾನೆ. ತಪ್ಪು ಎಣಿಕೆಯಿಂದಾಗಿ 610 ಅಂಕಗಳನ್ನು ಗಳಿಸಿದ್ದ ವಿದ್ಯಾರ್ಥಿ ಮಝೀಫ್ ಮರುಮೌಲ್ಯಮಾಪನದಲ್ಲಿ 3 ಅಂಕ ಹೆಚ್ಚು ಪಡೆದುಕೊಂಡು ಸುಳ್ಯ ತಾಲೂಕಿಗೆ ದ್ವಿತೀಯ ಹಾಗು ಎಣ್ಮೂರು ಸರಕಾರಿ ಪ್ರೌಢಶಾಲೆಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾನೆ.

Advertisement

 

Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಎಸ್‍ಎಸ್‍ಎಲ್‍ಸಿ ಮರುಮೌಲ್ಯಮಾಪನದಲ್ಲಿ ಗರಿ ಮುಡಿಗೇರಿಸಿದ ವಿದ್ಯಾರ್ಥಿ"

Leave a comment

Your email address will not be published.


*