ಕಾಣಿಯೂರು: ಕಾೈಮಣ ಗ್ರಾಮದ ಅಗಳಿ ಶ್ರೀ ಸದಾಶಿವ ದೇವಸ್ಥಾನದ ಪುನರ್ ಪ್ರತಿಷ್ಠಾಪನಾ ಜಾತ್ರೋತ್ಸವವು ಬ್ರಹಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಎ 29, 30ರಂದು ನಡೆಯಲಿದೆ.
ಎ 29ರಂದು ಬೆಳಿಗ್ಗೆ ತೋರಣ ಮುಹೂರ್ತ, ಹಸಿರು ಹೊರೆಕಾಣಿಕೆ ಸಮರ್ಪಣೆ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮದ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ತಂತ್ರಿಗಳ ಆಗಮನ, ರಾತ್ರಿ ಪ್ರಾರ್ಥನೆ, ವಾಸ್ತು ರಕ್ಷೋಘ್ನ ಹೋಮ, ವಾಸ್ತುಬಲಿ, ವಾಸ್ತು ಕಲಶಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ಕಾೈಮಣ ಮತ್ತು ಬೆಳಂದೂರು ಅಂಗನವಾಡಿ ಪುಟಾಣೆಗಳಿಂದ ವಿವಿಧ ನೃತ್ಯ ನಡೆಯಲಿದೆ. ಬಳಿಕ ಗೋಪಾಲಕೃಷ್ಣ ಪಟೇಲ್ ಚಾರ್ವಾಕ ಇವರ ಸಂಯೋಜನೆಯಲ್ಲಿ ಜಿಲ್ಲೆಯ ಸುಪ್ರಸಿದ್ಧ ಕಲಾವಿದರಿಂದ ಪೌರಾಣಿಕ ಯಕ್ಷಗಾನ “ಶಿವಭಕ್ತ ವೀರಮಣಿ- ಗರುಡ ಗರ್ವಭಂಗ ” ನಡೆಯಲಿದೆ.
ಎ 30ರಂದು ಬೆಳಿಗ್ಗೆ ಗಣಪತಿ ಹವನ, ಬಿಂಬ ಶುದ್ಧಿ, ಕಲಶ ಪೂಜೆ, ಕಲಶಾಭಿಷೇಕ, ಶ್ರೀ ದೇವರಿಗೆ ಪುಷ್ಪಕನ್ನಡಿ ಸಮರ್ಪಣೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ದೀಪಾರಾಧನೆ, ರಾತ್ರಿ ರಂಗಪೂಜೆ, ಶ್ರೀ ದೇವರ ಬಲಿ ಉತ್ಸವ, ಬಟ್ಟಲು ಕಾಣಿಕೆ, ಮಂತ್ರಾಕ್ಷತೆ, ಅನ್ನಸಂತರ್ಪಣೆ ನಡೆದ, ಬಳಿಕ ಶ್ರೀ ಉಳ್ಳಾಕುಲು ಮತ್ತು ರಕ್ತೇಶ್ವರಿ ದೈವಗಳ ನೇಮೋತ್ಸವ ನಡೆಯಲಿದೆ ಎಂದು ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಪದ್ಮಯ್ಯ ಗೌಡ ಕರಂದ್ಲಾಜೆ ತಿಳಿಸಿದ್ದಾರೆ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕಲೆ, ಸಾಹಿತ್ಯ, ಧಾರ್ಮಿಕ, ಕೃಷಿ, ವಿಶೇಷ ಲೇಖನ , ಅಂಕಣ, ವಿಶೇಷ ವರದಿಗಳು , ರಾಜಕೀಯ ವಿಶ್ಲೇಷಣೆ, ದಿನದ ಫೋಕಸ್ ಸ್ಟೋರಿ, ದಿನದ ಚಿತ್ರ, ವಾರದ ವ್ಯಕ್ತಿ , ಜಿಲ್ಲೆ, ರಾಜ್ಯ, ರಾಷ್ಟ್ರೀಯ ಪ್ರಮುಖ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಎ 29 ರಿಂದ ಅಗಳಿ ಶ್ರೀ ಸದಾಶಿವ ದೇವರ ಜಾತ್ರೋತ್ಸವ"