ಏನೆಕಲ್ಲು: ಏನೆಕಲ್ಲು ಗ್ರಾಮದ ಕುಕ್ಕಪ್ಪನಮನೆ ತರವಾಡು ಮನೆಯಲ್ಲಿ ಲಕ್ಷ್ಮಣ ಗೌಡ ಎಂಬವರು ಶನಿವಾರ ಬಾವಿ ತೋಡುತ್ತಿರುವ ಸಂದರ್ಭದಲ್ಲಿ ಸುಮಾರು 150 ವರ್ಷಕ್ಕೂ ಹಿಂದಿನ ಹಾರೆ ಪತ್ತೆಯಾಗಿದೆ.
ಕುಕ್ಕಪ್ಪನಮನೆಯ ದಯಾನಂದ ಗೌಡರ ಅಜ್ಜ ದಿ.ಅಣ್ಣಪ್ಪ ಗೌಡರು 150 ವರ್ಷಗಳ ಹಿಂದೆ ಬಾವಿ ಅಗೆಯುತ್ತಿದ್ದರು.ಬಾವಿಯ ಕಾಮಗಾರಿ ನಡೆಯುತ್ತಿದ್ದಾಗ ಅದನ್ನು ನಿಲ್ಲಿಸಿ ಊಟಕ್ಕೆಂದು ಮನೆಗೆ ಬಂದರು.ಆದರೆ ಹಿಂದುರುಗಿ ಹೋಗುವಾಗ ನೀರಿನ ಒಸರು ಹಾಗೂ ಜೇಡಿ ಮಣ್ಣಿನ ಕಾರಣದಿಂದ ಬಾವಿ ಸಂಪೂರ್ಣ ಕುಸಿದಿತ್ತು. ಹಾರೆ ಮತ್ತು ಬಿದಿರಿನ ಏಣಿ ಮಣ್ಣಿನ ಅಡಿಗೆ ಸಿಲುಕಿಕೊಂಡಿತು ಎಂದು ಲಕ್ಷ್ಮಣ ಗೌಡರಿಗೆ ಹಿರಿಯರಿಂದ ತಿಳಿದು ಬಂದಿತ್ತು. ಬಳಿಕ ತರವಾಡು ಮನೆಯಲ್ಲಿ ನಡೆದ ಅಷ್ಟಮಂಗಲ ಚಿಂತನೆಯಲ್ಲಿ ಇದೇ ಜಾಗವನ್ನು ತೋರಿಸಿ ಇಲ್ಲಿ ಬಾವಿ ತೆಗೆದರೆ ನೀರು ದೊರಕುತ್ತದೆ ಎಂದು ಕಂಡು ಬಂದಿತ್ತು.ಆ ಪ್ರಕಾರವಾಗಿ ಲಕ್ಷ್ಮಣ ಗೌಡರು ಬಾವಿಯನ್ನು ತೋಡಿಸತೊಡಗಿದ್ದರು.ಸುಮಾರು 35 ಅಡಿ ಕೊರೆದಾಗ ಮಣ್ಣಿನೊಳಗೆ ಹಳೆಯ ಹಾರೆ(ಗುದ್ದಲಿ) ಕಂಡು ಬಂತು.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಏನೆಕಲ್ಲಿನಲ್ಲಿ ಬಾವಿ ತೆಗೆಯುವಾಗ ಸಿಕ್ಕಿತು ಹಳೆಕಾಲದ ಹಾರೆ"