ಕನಕಮಜಲು ಯುವಕ ಮಂಡಲ ಪದಗ್ರಹಣ ಸಮಾರಂಭ : ಅಧ್ಯಕ್ಷರಾಗಿ ಜಯಪ್ರಸಾದ್ ಕಾರಿಂಜ

Advertisement
Advertisement
Advertisement

ಜಾಲ್ಸೂರು :  ಯುವಕ ಮಂಡಲ(ರಿ ) ಕನಕಮಜಲು ಇದರ ವಾರ್ಷಿಕ ಮಹಾಸಭೆ ಮತ್ತು ಪದಗ್ರಹಣ ಸಮಾರಂಭವು ಭಾನುವಾರ  ಕನಕಮಜಲಿನ ಗ್ರಾಮಪಂಚಾಯತ್ ಸಭಾಭವನದಲ್ಲಿ ನಡೆಯಿತು.

Advertisement

ಈ ಸಂದರ್ಭ ಯುವಜನ ಸಂಯುಕ್ತ ಮಂಡಳಿ (ರಿ) ಸುಳ್ಯ ಇದರ ನಿರ್ದೇಶಕ  ವಿಜಯಕುಮಾರ್ ಉಬರಡ್ಕ  ನೂತನವಾಗಿ ಆಯ್ಕೆಗೊಂಡ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋದಿಸಿದರು. ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯ  ಶಿಕ್ಷಕ ಶಶಿಧರ್ ಶುಭಹಾರೈಸಿದರು.

Advertisement

ಯುವಕಮಂಡಲ (ರಿ ) ಕನಕಮಜಲು ಇದರ 2019-2020 ನೇ ಸಾಲಿನ ಗೌರವಾಧ್ಯಕ್ಷರಾಗಿ ಹರಿಪ್ರಸಾದ್ ಮಾಣಿಕೋಡಿ, ನೂತನ ಅಧ್ಯಕ್ಷರಾಗಿ – ಜಯಪ್ರಸಾದ್ ಕಾರಿಂಜ, ಉಪಾಧ್ಯಕ್ಷರಾಗಿ – ರಕ್ಷಿತ್ ಅಕ್ಕಿಮಲೆ, ಕಾರ್ಯದರ್ಶಿಯಾಗಿ – ಬಾಲಚಂದ್ರ ನೆಡಿಲು, ಜೊತೆ ಕಾರ್ಯದರ್ಶಿ – ಹರ್ಷಿತ್ ಉಗ್ಗಮೂಲೆ, ಕ್ರೀಡಾ ಕಾರ್ಯದರ್ಶಿ – ಅಶ್ವಿತ್ ಮಳಿ, ಸಾಂಸ್ಕೃತಿಕ ಕಾರ್ಯದರ್ಶಿ – ಅಶ್ವತ್ಥ್ ಅಡ್ಕಾರ್, ಪ್ರತೀಕ ಪ್ರತಿನಿಧಿ – ಜಯದೀಪ್ ಕುದ್ಕುಳಿ, ಖಜಾಂಜಿ – ಸಂದೀಪ್ ಉಗ್ಗಮೂಲೆ, ಪರಿಸರ ಸಂರಕ್ಷಣೆ ಮತ್ತು ಸ್ವಚ್ಛತೆ -ವಿಶ್ವನಾಥ ಮಾಣಿಕೋಡಿ, ನಿರ್ದೇಶಕರುಗಳಾಗಿ – ಪ್ರಸನ್ನ ಮಾಣಿಕೋಡಿ, ಜಗದೀಶ್ ಮಾಣಿಕೋಡಿ, ಚಂದ್ರಶೇಖರ ನೆಡಿಲು ಆಯ್ಕೆಯಾದರು.

ಕನಕಮಜಲಿನ ಯುವಕಮಂಡಲದ ಅಧ್ಯಕ್ಷರು ಅದ ಹರಿಪ್ರಸಾದ್ ಮಾಣಿಕೊಡಿ, ಮುಖ್ಯಅತಿಥಿಯಾಗಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆ ವಿನೋಬನಗರ ಇಲ್ಲಿಯ ಶಿಕ್ಷಕರಾದ ಶಶಿಧರ್, ಯುವಜನ ಸಂಯುಕ್ತಮಂಡಳಿ (ರಿ )ಸುಳ್ಯ ಇದರ ನಿರ್ದೇಶಕರಾದ ವಿಜಯಕುಮಾರ್ ಉಬರಡ್ಕ, ಹಾಗೇ 2019-20 ಸಾಲಿನ ಕನಕಮಜಲು ಯುವಕ ಮಂಡಲದ ಗೌರವಾಧ್ಯಕ್ಷರಾದ ಸಂತೋಷ್ ನೆಡಿಲು, ಕಾರ್ಯದರ್ಶಿಯಾದ ರಕ್ಷಿತ್ ಅಕ್ಕಿಮಲೆ ಹಾಗು ನೂತನ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Advertisement
Advertisement

ಕಾರ್ಯಕ್ರಮದಲ್ಲಿ ಕನಕಮಜಲಿನ ಯುವಕಮಂಡಲದ ಸರ್ವಸದಸ್ಯರು ಉಪಸ್ಥಿತರಿದ್ದರು. ಅತಿಥಿಗಳನ್ನು ಜಯದೀಪ್ ಇವರು ಸ್ವಾಗತಿಸಿ, ಬಾಲಚಂದ್ರ ನೆಡಿಲು ಇವರು ವಂದಿಸಿದರು, ಕಾರ್ಯಕ್ರಮವನ್ನು ಲವಕುಮಾರ್ ಮಾಣಿಕೊಡಿ  ನಿರೂಪಿಸಿದರು

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಕನಕಮಜಲು ಯುವಕ ಮಂಡಲ ಪದಗ್ರಹಣ ಸಮಾರಂಭ : ಅಧ್ಯಕ್ಷರಾಗಿ ಜಯಪ್ರಸಾದ್ ಕಾರಿಂಜ"

Leave a comment

Your email address will not be published.


*