ಸುಳ್ಯ: ಲೋಕಸಭಾ ಚುನಾವಣಾ ಫಲಿತಾಂಶವೂ ಪ್ರಕಟವಾಗಿದೆ. ದೇಶದಲ್ಲಿ “ನಮೋ” ಆಡಳಿತ ಮತ್ತೊಮ್ಮೆ ಸ್ಪಷ್ಟವಾಗಿದೆ. ವಿವಿಧ ರಾಜ್ಯಗಳಲ್ಲೂ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿದೆ. ಕರ್ನಾಟಕದಲ್ಲೂ ಬಿಜೆಪಿ 25 ಸ್ಥಾನಗಳನ್ನು ಬಾಚಿಕೊಂಡಿದೆ. 1 ಕಾಂಗ್ರೆಸ್ ಹಾಗೂ 1 ಜೆ ಡಿಎಸ್ ಸ್ಥಾನ ಪಡೆದುಕೊಂಡರೆ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆಲವು ಸಾಧಿಸಿದ್ದಾರೆ.
ರಾಜ್ಯದಲ್ಲಿ ಮೈತ್ರಿಕೂಟದ ಸರಕಾರ ಇದ್ದು ಚುನಾವಣೆಯಲ್ಲೂ ಮೈತ್ರಿ ಮಾಡಿ ಇಡೀ ರಾಜ್ಯದಲ್ಲಿ 2 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಅದರಲ್ಲೂ ಮುಖ್ಯವಾಗಿ ತೀವ್ರ ಕುತೂಹಲ ಸೃಷ್ಠಿಸಿದ್ದ ಮಂಡ್ಯ ಕ್ಷೇತ್ರವೂ ಮೈತ್ರಿಕೂಟದ ಕೈ ತಪ್ಪಿದೆ. ಹೀಗಾಗಿ ತೀವ್ರ ಮುಖಭಂಗ ಅನುಭವಿಸುತ್ತಿರುವ ನಡುವೆ ರಾಜ್ಯದಲ್ಲೂ ಮೋಡ ಮುಸುಕಿದ ವಾತಾವರಣ ಇರುವ ಬಗ್ಗೆ ಹವಾಮಾನ ಇಲಾಖೆಯ ಚಿತ್ರ ತಿಳಿಸುತ್ತಿದೆ. ವಿಶೇಷವಾಗಿ ಕರ್ನಾಟದಲ್ಲಿ ಮಾತ್ರವೇ ಈ ಮೋಡ ಆವರಿಸಿರುವುದು ಕಂಡುಬರುತ್ತಿದೆ. ಇದು ಕಾಕತಾಳೀಯವೂ ಹೌದು. ಮಳೆ ಬರುವ ಸೂಚನೆಯೂ ಹೌದು.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಕರ್ನಾಟಕದಲ್ಲಿ ಮೋಡ ಮುಸುಕಿದ ವಾತಾವರಣ….!"