ಕಲ್ಲುಗುಂಡಿ: ಇಲ್ಲಿನ ಸಂತ ಫ್ರಾನ್ಸಿಸ್ ಕ್ಲೇವಿಯರ್ ಚರ್ಚ್‍ನಲ್ಲಿ ಈಸ್ಟರ್ ಹಬ್ಬವನ್ನು ಇತ್ತೀಚೆಗೆ ಆಚರಿಸಲಾಯಿತು.
ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹ ಅವರು ಹಬ್ಬದ ದಿವ್ಯ ಬಲಿಪೂಜೆಯನ್ನು ಅರ್ಪಿಸಿದರು. ಅವರು ದೇವರ ವಾಕ್ಯವನ್ನು ಬೋಧಿಸಿ, “ಯೇಸುವಿನ ಪುನರುತ್ಧಾನ ನಮ್ಮ ಬದುಕಿಗೆ ಭರವಸೆಯ ಬುನಾದಿ, ಕಷ್ಟ-ನಷ್ಟಗಳಿಗೆ, ಸಾಂತ್ವಾನ ಹಾಗೂ ಅವಕಾಶದಿಂದ ಕೂಡಿದ ಬದುಕಿಗೆ ಬೆಳಕು” ಎಂದರು.
ಕಲ್ಲುಗುಂಡಿ ಸಂಪಾಜೆ ಚರ್ಚ್‍ನ ಧರ್ಮಗುರುಗಳಾದ ಫಾ| ನವೀನ್ ಪ್ರಕಾಶ್ ಪಿಂಟೋ ಉಪಸ್ಥಿತರಿದ್ದರು. ಬಲಿಪೂಜೆಯ ನಂತರ ಪೂಜ್ಯರನ್ನು ಸನ್ಮಾನಿಸಲಾಯಿತು. ಬಳಿಕ ಧರ್ಮಾಧ್ಯಕ್ಷ ಚರ್ಚ್‍ನ ಅಧೀನದಲ್ಲಿರುವ ವಿದ್ಯಾ ಸಂಸ್ಥೆಗೆ ಸೇರಿದ ನೂತನ ಶಾಲಾ ವಾಹನವನ್ನು ಆಶೀರ್ವದಿಸಿ, ಗಿಡ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel