ಆಲೆಟ್ಟಿ: ಕಸ್ತೂರಿಬಾ ಮಹಿಳಾ ಮಂಡಲ ಆಲೆಟ್ಟಿ ಇದರ ವಾರ್ಷಿಕ ಮಹಾಸಭೆಯು ಸೆ.22ರಂದು ಕಸ್ತೂರಿಬಾ ಮಹಿಳಾ ಮಂಡಲದ ಕಟ್ಟಡದಲ್ಲಿ ಜರಗಿತು.
ಶ್ರೀಮತಿ ವಾರಿಜಾ ವೇಣುಗೋಪಾಲ್ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಗೌರವಾಧ್ಯಕ್ಷೆ ಶ್ರೀಮತಿ ಸುಮನಾ ಕೃಪಾಶಂಕರ್, ಗೌರವ ಸಲಹೆಗಾರರಾದ ಶ್ರೀಮತಿ ಗೀತಾ ಸುಧಾಮ ಆಲೆಟ್ಟಿ, ಪೂರ್ವಾಧ್ಯಕ್ಷರುಗಳಾದ ಜಯಲಕ್ಷ್ಮಿ ಜನಾರ್ಧನ, ಸುಂದರಿ ಮೊರಂಗಲ್ಲು, ಕಾರ್ಯದರ್ಶಿ ಶ್ರೀಮತಿ ಪೂರ್ಣಿಮಾ ಕುಂಚಡ್ಕ, ಖಜಾಂಜಿ ಶ್ರೀಮತಿ ಜಾನಕಿ ಬಾಲಕೃಷ್ಣ ಮೈಂದೂರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಏರ್ಪಡಿಸಿದ್ದ ಸ್ಪರ್ಧೆಗಳ ವಿಜೇತರಿಗೆ ಶ್ರೀಮತಿ ಜಾನಕಿ ವೆಂಕಪ್ಪ ಬಹುಮಾನ ವಿತರಿಸಿದರು. ಶ್ರೀಮತಿ ಸರೋಜಿನಿ ಕುಡೆಕಲ್ಲು ಪ್ರಾರ್ಥಿಸಿ, ಸರಸ್ವತಿ ಸಿ.ಕೆ. ವಂದಿಸಿ, ಜಾನಕಿ ಬಾಲಕೃಷ್ಣ ಮೈಂದೂರು ಕಾರ್ಯಕ್ರಮ ನಿರೂಪಿಸಿದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel