ಸುಳ್ಯ: ಕಾಂತಮಂಗಲ- ಅಜ್ಜಾವರ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ವೀಕ್ಷಿಸಿದರು.
ಸೋಮವಾರ ಬೆಳಿಗ್ಗೆ ಕಾಂತಮಂಗಲಕ್ಕೆ ಆಗಮಿಸಿದ ಅವರು ರಸ್ತೆ ಕಾಮಗಾರಿಯನ್ನು ವೀಕ್ಷಿಸಿ ಇಂಜಿನಿಯರ್ ಮತ್ತು ಗುತ್ತಿಗದಾರರೊಂದಿಗೆ ಚರ್ಚೆ ನಡೆಸಿದರು. ಜೂನ್ ಐದರೊಳಗೆ ಕಾಂತಮಂಗಲದಿಂದ ಮೇನಾಲದವರೆಗೆ ಎರಡೂವರೆ ಕಿ.ಮಿ. ಡಾಮರೀಕರಣ ಪೂರ್ತಿ ಮಾಡುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ.
ಶಾಸಕ ಎಸ್.ಅಂಗಾರ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ತಾ.ಪಂ.ಅಧ್ಯಕ್ಷ ಚನಿಯ ಕಲ್ತಡ್ಕ, ಜಿ.ಪಂ.ಸದಸ್ಯ ರಾದ ಹರೀಶ್ ಕಂಜಿಪಿಲಿ, ಪುಷ್ಪಾವತಿ ಬಾಳಿಲ,ಪ್ರಮುಖರಾದ ಸುರೇಶ್ ಕಣೆಮರಡ್ಕ, ನವೀನ್ ರೈ ಮೇನಾಲ, ಎ.ವಿ.ತೀರ್ಥರಾಮ, ಸುಬೋದ್ ಶೆಟ್ಟಿ ಮೇನಾಲ, ಭಾಗೀರಥಿ ಮುರುಳ್ಯ, ಚಂದ್ರಶೇಖರ ಪನ್ನೆ, ಭಾಸ್ಕರ ರಾವ್ ಬಯಂಬು, ಅಬ್ದುಲ್ ಕುಂಞಿ ನೇಲ್ಯಡ್ಕ, ವೆಂಕಟ್ರಮಣ ಮುಳ್ಯ, ರಾಜೇಶ್ ಮೇನಾಲ ಮತ್ತಿತರರು ಉಪಸ್ಥಿತರಿದ್ದರು.
ಸಿ.ಆರ್.ಎಫ್ ಯೋಜನೆಯಡಿ ಆರು ಕೋಟಿ ರೂ ಕಾಂತಮಂಗಲ-ಅಜ್ಜಾವರ ರಸ್ತೆ ಅಭಿವೃದ್ಧಿ ಆಗುತಿದೆ. ಎರಡೂವರೆ ಕಿ.ಮಿ.ರಸ್ತೆ ಕಾಮಗಾರಿ ಪ್ರಥಮ ಹಂತದಲ್ಲಿ ನಡೆಸಲಾಗುತ್ತದೆ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಕಾಂತಮಂಗಲ-ಅಜ್ಜಾವರ ರಸ್ತೆ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದ ಸಂಸದ ನಳಿನ್"