ಸುಳ್ಯ: ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವರಿಗೆ ಊರ ಹಾಗೂ ಪರ ಊರ ಭಕ್ತರಿಂದ ಸೀಯಾಳ ಅಭಿಷೇಕ ನಡೆಯಿತು.
ಮಳೆ ಬಾರದೇ ಕೃಷಿಗೆ, ಕುಡಿಯಲು ನೀರಿಲ್ಲದೆ ಜನರು ಪರದಾಡಲು ಪ್ರಾರಂಭಿಸಿ ಇದೀಗ ದೇವರಿಗೆ ಮೊರೆಹೋಗುವುದೆಂದು ಕಾರ್ಯರ್ತೋಡಿ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಊರವರು ತೀರ್ಮಾನಿಸಿ ಇತ್ತೀಚೆಗೆ ಸೀಯಾಳ ಅಭಿಷೇಕ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಗದೀಶ್ ಪಡ್ಪು, ಶ್ರೀ ವ್ಯಾರ್ಘ ಚಾಮುಂಡೇಶ್ವರಿ ದೇವಸ್ಥಾನದ ಆಡಳಿತ ಮೋಕೆಸ್ತರರು ಡಿ.ಎಸ್ ಶೇಷಪ್ಪ ಗೌಡ, ವೆಂಕಟ್ರಮಣ ಡಿ ಎಸ್ ಶಿವರಾಮ ಬಳ್ಳಡ್ಕ, ಶ್ರೀಮತಿ ಜಯಂತಿ ಹರಿಶ್ಚಂದ್ರ, ಊರ ಹಾಗೂ ಪರ ಊರ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು. ದೇವಸ್ಥಾನದ ಅರ್ಚಕ ರಘುರಾಮ ಹಂದೆ ಹಾಗೂ ಬಳಗದವರು ಕಾರ್ಯಕ್ರಮವನ್ನು ನೆರವೇರಿಸಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel