ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸುತ್ತು ಪೌಳಿ ನವೀಕರಣ: ಹಿತ್ತಾಳೆಯ ದೀಪದಳಿ, ತಾಮ್ರದ ಛಾವಣಿ ನಿರ್ಮಾಣ

Advertisement

ಸುಬ್ರಹ್ಮಣ್ಯ: ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸುತ್ತು ಪೌಳಿಯನ್ನು ರೂ.14 ಕೋಟಿ ವೆಚ್ಚದಲ್ಲಿ ನವೀಕರಣಗೊಳ್ಳಲಿದೆ. ಪೂರ್ವಶಿಷ್ಠ ಸಂಪ್ರದಾಯದ ಪ್ರಕಾರ ಈ ಹಿಂದಿನಂತೆ ಸುತ್ತುಪೌಳಿಯು ನೂತನವಾಗಿ ನಿರ್ಮಾಣಗೊಳ್ಳಲಿದೆ.

Advertisement

ಕುಕ್ಕೆ ದೇವಳದ ನಿಧಿಯ ರೂ.14ಕೋಟಿ ವೆಚ್ಚದಲ್ಲಿ ಸುತ್ತುಪೌಳಿ ರಚಿತವಾಗಲಿದ್ದು  ಸುತ್ತುಪೌಳಿ, ಗರುಡ ಮಂಟಪ, ಪಲ್ಲ ಮಂಟಪ, ಗೋಡೆ, ಪಂಚಾಂಗ ಇತ್ಯಾದಿಗಳನ್ನು ನೂತನವಾಗಿ ರಚನೆ ಮಾಡಲಾಗುವುದು. ಕ್ಷೇತ್ರ ಸಂಪ್ರದಾಯ, ನಿಯಮ, ಧಾರ್ಮಿಕ ವಿಧಿ ವಿಧಾನಗಳಿಗೆ ತೊಂದರೆಯಾಗದಂತೆ ಶ್ರೀ ದೇವಳದ ಪ್ರಧಾನ ಅರ್ಚಕರು ಮತ್ತು ವಾಸ್ತುಶಿಲ್ಪಿಗಳು, ಆಗಮ ಪಂಡಿತರು ಸಲಹೆ ಮೇರೆಗೆ ಕಾಮಗಾರಿ ಆರಂಭಿಸಲಾಗುವುದು. ಶಿಲ್ಪಿ ದಿನೇಶ್ ಆಚಾರ್ಯ ಅವರು ತಯಾರಿಸಿದ ಅಂದಾಜು ಪಟ್ಟಿ ಪ್ರಕಾರ ನೀಲನಕ್ಷೆ ಪ್ರಕಾರವಾಗಿ ಕಾಮಗಾರಿ ನೆರವೇರಲಿದೆ.

Advertisement
Advertisement

ಹಿತ್ತಾಳೆಯ ದೀಪದಳಿ:
ಸುತ್ತುಪೌಳಿ, ಗರುಡ ಮಂಟಪ, ಪಲ್ಲ ಮಂಟಪ, ಗೋಡೆ, ಪಂಚಾಂಗ ಇತ್ಯಾದಿಗಳನ್ನು ಕನ್ಯಾಕುಮಾರಿಯ ಕಪ್ಪು ಕಲ್ಲಿನಿಂದ ನಿರ್ಮಾಣ ಮಾಡಲಾಗುವುದು.ಸುತ್ತು ಪೌಳಿಯ ಸುತ್ತಲೂ ಮರದ ಕೆತ್ತನೆಗಳ ವಿಶೇಷ ಅಲಂಕಾರ ಮಾಡಲಾಗುವುದು. ಸುತ್ತಲೂ ದೀಪದಳಿಯನ್ನು ತೇಗದ ಮರದಿಂದ ನಿರ್ಮಿಸಲಾಗುವುದು.ಈ ದೀಪ ದಳಿಗಳು ವಿಶೇಷ ಕಲಾಕೆತ್ತನೆಗಳಿಂದ ಕೂಡಿರುತ್ತದೆ.ಇದಕ್ಕೆ ಹಿತ್ತಾಳೆಯ ಹೊದಿಕೆ ಇರುತ್ತದೆ. ದೀಪದಳಿಯಲ್ಲಿ ಶ್ರೀ ದೇವರ ಉತ್ಸವದ ಸಂದರ್ಭ ಹಣತೆಗಳನ್ನು ಉರಿಸಲು ಬೇಕಾದ ಸೂಕ್ತ ವ್ಯವಸ್ಥೆ ಮಾಡಲಾಗುವುದು.ಎಣ್ಣೆ ಇತ್ಯಾದಿಗಳು ಹೊರಗಡೆ ಚೆಲ್ಲದಂತೆ ಆಧುನಿಕ ತಂತ್ರಜ್ಞಾನದ ಮೂಲಕ ಸೂಕ್ತ ವ್ಯವಸ್ಥೆಯನ್ನು ಮಾಡಲಾಗುವುದು.

ತಾಮ್ರದ ಹೊದಿಕೆಯ ಛಾವಣಿ:

Advertisement

ಸುತ್ತು ಪೌಳಿಯ ಸುತ್ತಲೂ ಸಾಗುವಾನಿ ಮರವನ್ನು ಉಪಯೋಗಿಸಿಕೊಂಡು ಛಾವಣೆ ನಿರ್ಮಿಸಲಾಗುವುದು.ಇದರ ಸುತ್ತಲೂ 22 ಗೇಜಿನ ತಾಮ್ರದ ಹಾಳೆಗಳನ್ನು ಅಳವಡಿಸಲಾಗುವುದು.ಇದರಲ್ಲಿ ಕೂಡಾ ಆರ್ಷಕ ಕೆತ್ತನೆಗಳನ್ನು ಮಾಡಲಾಗುತ್ತಿದೆ. ಒಟ್ಟು 1167 ಚದರ ಮೀಟರ್ ತಾಮ್ರದ ತಗಡನ್ನು ಉಪಯೋಗಿಸಿಕೊಂಡು ಸುತ್ತುಪೌಳಿಯ ಛಾವಣಿಯನ್ನು ಆಕರ್ಷಕವಾಗಿ ನಿರ್ಮಿಸಲಾಗುವುದು. ಸುತ್ತುಪೌಳಿಗೆ ಎಲ್‍ಇಡಿ ಲೈಟ್‍ಗಳನ್ನು ಅಲ್ಲಲ್ಲಿ ಇರಲಿದೆ. ಕಾಮಗಾರಿಯ ಸಮಯದಲ್ಲಿ ಭಕ್ತರಿಗೆ ಶ್ರೀ ದೇವರ ದರುಶನಕ್ಕೆ ಯಾವುದೇ ತೊಂದರೆಯಾಗದಂತೆ ಸೂಕ್ತವಾದ ಬ್ಯಾರಿಕೇಡ್ ಇತ್ಯಾದಿಗಳನ್ನು ತಾತ್ಕಾಲಿಕವಾಗಿ ರಚನೆ ಮಾಡಲಾಗುವುದು.

 

Advertisement

“ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸುತ್ತು ಪೌಳಿಯನ್ನು ರೂ.14 ಕೋಟಿ ವೆಚ್ಚದಲ್ಲಿ ನವೀಕರಿಸಲಾಗುವುದು.ಸಂಪ್ರದಾಯದ ಪ್ರಕಾರ ಈ ಹಿಂದಿನಂತೆ ಸುತ್ತುಪೌಳಿಯು ನೂತನವಾಗಿ ನಿರ್ಮಾಣಗೊಳ್ಳಲಿದೆ. ಕುಕ್ಕೆ ದೇವಳದ ನಿಧಿಯನ್ನು ಉಪಯೋಗಿಸಿಕೊಂಡು ರೂ.14ಕೋಟಿ ವೆಚ್ಚದಲ್ಲಿ ಸುತ್ತುಪೌಳಿ ನಿರ್ಮಾಣಗೊಳ್ಳಲಿದೆ. ಸುತ್ತುಪೌಳಿ, ಗರುಡ ಮಂಟಪ, ಪಲ್ಲ ಮಂಟಪ, ಗೋಡೆ, ಪಂಚಾಂಗ ಇತ್ಯಾದಿಗಳನ್ನು ನೂತನವಾಗಿ ರಚನೆ ಮಾಡಲಾಗುವುದು. ಕಾಮಗಾರಿಯ ಸಮಯದಲ್ಲಿ ಭಕ್ತರಿಗೆ ಶ್ರೀ ದೇವರ ದರುಶನಕ್ಕೆ ಯಾವುದೇ ತೊಂದರೆಯಾಗದಂತೆ ಸೂಕ್ತವಾದ ಬ್ಯಾರಿಕೇಡ್ ಇತ್ಯಾದಿಗಳನ್ನು ತಾತ್ಕಾಲಿಕವಾಗಿ ರಚನೆ ಮಾಡಲಾಗುವುದು”  ಎಂದು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹೇಳಿದ್ದಾರೆ.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸುತ್ತು ಪೌಳಿ ನವೀಕರಣ: ಹಿತ್ತಾಳೆಯ ದೀಪದಳಿ, ತಾಮ್ರದ ಛಾವಣಿ ನಿರ್ಮಾಣ"

Leave a comment

Your email address will not be published.


*