ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅನೇಕ ವರ್ಷಗಳಿಂದ ಇದ್ದ ಬ್ರಹ್ಮರಥದ ಜಾಗದಲ್ಲಿ ಈಗ ನೂತನ ಬ್ರಹ್ಮರಥ ಇರಿಸಲಾಯಿತು. ಇದುವರೆಗೆ ಇದ್ದ ಹಳೆಯ ಬ್ರಹ್ಮರಥವನ್ನು ಸವಾರಿ ಮಂಟಪದ ಬಳಿ ಇಡುವ ಕಾರ್ಯ ನಡೆಯುತ್ತಿದೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಳೆದ ಹಲವಾರು ವರ್ಷಗಳಿಂದ ಚಂಪಾಷ್ಠಿ ಸಂದರ್ಭ ಎಳೆಯಲಾಗುವ ಬ್ರಹ್ಮರಥ ದೇಶದಲ್ಲೇ ಅತ್ಯಂತ ವಿಶಿಷ್ಠ ಎನಿಸಿದೆ. ಇದೀಗ ನೂತನ ಬ್ರಹ್ಮರಥ ನಿರ್ಮಾಣದ ಬಳಿಕ ಕೋಟೇಶ್ವರದಿಂದ ವಿಜೃಂಭಣೆಯಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ತರಲಾಗಿತ್ತು. ಈ ಬಾರಿಯ ಚಂಪಾ ಷಷ್ಠಿಗೆ ನೂತನ ಬ್ರಹ್ಮರಥ ಎಳೆಯಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಹಳೆಯ ಬ್ರಹ್ಮರಥ ತೆರವು ಕಾರ್ಯ ಮಂಗಳವಾರ ಕ್ರೇನ್ ಮೂಲಕ ನಡೆಯಿತು. ಹಳೆಯ ಬ್ರಹ್ಮರಥವನ್ನು ಸದ್ಯ ಸವಾರಿ ಮಂಟಪದ ಬಳಿ ಇರಿಸಲಾಗುತ್ತಿದೆ. ಮುಂದೆ ಆದಿ ಸುಬ್ರಹ್ಮಣ್ಯಕ್ಕೆ ತೆರಳುವ ರಸ್ತೆ ಬದಿ ಭಕ್ತಾದಿಗಳಿಗೆ ಕಾಣುವಂತೆ ಇರಿಸಬೇಕು ಎಂಬುದು ಭಕ್ತಾದಿಗಳ ಬೇಡಿಕೆಯಾಗಿದೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel