ಕೆಎಸ್‍ಎಸ್ ಕಾಲೇಜು ಪ್ರಾಂಶುಪಾಲ ಮಂಜುನಾಥ ಭಟ್ ನಿವೃತ್ತಿ

Advertisement

ಸುಬ್ರಹ್ಮಣ್ಯ : ಶ್ರೀ ಸುಬ್ರಹ್ಮಣ್ಯೇಶ್ವರ ಮಹಾ ವಿದ್ಯಾಲಯದಲ್ಲಿ ಪ್ರಾಂಶುಪಾಲರಾಗಿರುವ ಸಂಸ್ಕೃತ ವಿಭಾಗದ ಮುಖ್ಯಸ್ಥ ಪ್ರೊ. ಮಂಜುನಾಥ ಎನ್.ಭಟ್ ಅವರು ಸುಮಾರು 35 ವರ್ಷಗಳ ಸುದೀರ್ಘ ಸೇವೆಯಿಂದ ಎ.30ರಂದು ಸೇವಾನಿವೃತ್ತಿ ಹೊಂದಿದರು.  ಕಳೆದ ಎರಡು ತಿಂಗಳ ಹಿಂದೆ ಅಧಿಕಾರ ವಹಿಸಿಕೊಂಡಿದ್ದರು.

Advertisement

ಮೂಲತ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಮೀಪದ ಕರಸುಳ್ಳಿ ಗ್ರಾಮದ ಇವರು 1984ರಲ್ಲಿ ಶಿರಸಿಯ ಎಂ.ಎಂ ಆಟ್ಸ್ ಸೈನ್ಸ್ ಪದವಿ ಕಾಲೇಜಿನಲ್ಲಿ ಸಂಸ್ಕೃತ ವಿಭಾಗದ ಉಪನ್ಯಾಸಕರಾಗಿ 3 ತಿಂಗಳು ಸೇವೆ ಸಲ್ಲಿಸಿದ ಬಳಿಕ ಅದೇ ವರ್ಷ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿಗೆ ಉಪನ್ಯಾಸಕರಾಗಿ ಸೇರ್ಪಡೆಗೊಂಡರು.

Advertisement
Advertisement

ರಾಷ್ಟ್ರಮಟ್ಟದ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಹಲವಾರು ಪ್ರಬಂಧಗಳನ್ನು ಮಂಡಿಸಿರುವರು. ಕುಸುಮ ಸಾರಂಗ ರಂಗ ಘಟಕಕ್ಕೆ ಸಹಕರಿಸುತ್ತ ಬಂದಿರುವ ಇವರು ಉತ್ತಮ ಕ್ರೀಡಾಪಟು ಕೂಡ ಆಗಿದ್ದಾರೆ. ಮಂಗಳೂರು ವಿ.ವಿ ಯ ಸಂಸ್ಕೃತ ವಿಭಾಗದ ಬೋರ್ಡ್ ಆಫ್ ಸ್ಟಡೀಸ್ ಮತ್ತು ಬೋರ್ಡ್ ಆಪ್ ಎಕ್ಸಾಮಿನೇಶನ್ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಆರೋಗ್ಯಧಾಮ ಸಂಸ್ಥೆಯ ಸದಸ್ಯರಾಗಿ ಗ್ರಾಮೀಣ ಭಾಗದಲ್ಲಿ 15ಕ್ಕೂ ಅಧಿಕ ವೈದ್ಯಕೀಯ ಶಿಬಿರಗಳನ್ನು ನಡೆಸಿರುವರು.  ಕುಕ್ಕೆ ಸುಬ್ರಹ್ಮಣ್ಯ ವಾರ್ಷಿಕ ಜಾತ್ರೋತ್ಸವ ಸಂದರ್ಭ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಉದ್ಘೋಷಕರಾಗಿ ಕಾರ್ಯಕ್ರಮ ಆಯೋಜಕರಾಗಿ ದುಡಿದಿರುವರು. ಉಪನ್ಯಾಸಕ ವೃತ್ತಿ ಜತೆ ಪತ್ರಿಕೆಯ ವರದಿಗಾರರಾಗಿ 12 ವರ್ಷ ಕರ್ತವ್ಯ ನಿರ್ವಹಿಸಿರುವರು. ಬರಹಗಾರರು ಆಗಿರುವ ಇವರು ಬಡ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಆರ್ಥಿಕ ನೆರವನ್ನು ನೀಡುತ್ತಿದ್ದರು.

Advertisement

ಪತ್ನಿ ಕುಸುಮಾ ಭಟ್ ಹಾಗೂ ಯುಎಸ್ ಎ ನಲ್ಲಿರುವ ಪುತ್ರ ಆದರ್ಶ ಅವರ ಜತೆ ಸುಖ ಸಂಸಾರ ನಡೆಸುತ್ತಿದ್ದಾರೆ.

Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಕೆಎಸ್‍ಎಸ್ ಕಾಲೇಜು ಪ್ರಾಂಶುಪಾಲ ಮಂಜುನಾಥ ಭಟ್ ನಿವೃತ್ತಿ"

Leave a comment

Your email address will not be published.


*