ಕೇನ್ಯದಲ್ಲಿ ಲಕ್ಷ್ಮೀ ನರಸಿಂಹ ಮಠದ ಗುಡಿ ನಿರ್ಮಾಣಕ್ಕೆ ಶಿಲಾನ್ಯಾಸ

April 26, 2019
4:34 PM

ಬಳ್ಪ:  ದೇವರ ವಿವಿಧ ರೂಪಗಳಲ್ಲಿ ಶ್ರೀ ಲಕ್ಷ್ಮಿ ನರಸಿಂಹ ದೇವರು ಒಂದು. ನರಸಿಂಹ ದೇವರು ಸ್ಥಂಭಮೂರ್ತಿಯಾಗಿ ದಿವ್ಯವಾಗಿ ಅವತರಿಸಿರುವರು. ನರಸಿಂಹ ದೇವರ ಉಪಾಸನೆಗೆ ಅಪಾರ ಶಕ್ತಿ ಹಾಗೂ ಅನಂತ ಪ್ರಭೆ ಇದೆ ಎಂದು ಸುಬ್ರಹ್ಮಣ್ಯ ಸಂಪುಟ ಶ್ರೀ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಗಳು ಹೇಳಿದರು.

Advertisement
Advertisement

ಅವರು ಕೇನ್ಯ ಗ್ರಾಮದ ಲಕ್ಷ್ಮೀ ನರಸಿಂಹ ದೇವರು ಕಾಯಂಬಾಡಿ ಮಠದ ನೂತನ ಆಲಯ ನಿರ್ಮಾಣಕ್ಕೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಆಶಿರ್ವಚನ ನೀಡಿದರು. ಸೂರ್ಯನ ಬೆಳಕಿನ ಕಿರಣಗಳಲ್ಲಿ ಸಕಾರಾತ್ಮಕ ಶಕ್ತಿ ಇರುತ್ತವೆ, ಸೂರ್ಯನ ಕಿರಣಗಳು ಭೂಮಿಯ ಮೇಲೆ ಹರಿಯುವ ಸಂದರ್ಭ ಅದು ಶುಭಮುಹೂರ್ತ. ಈ ಕಾಲದಲ್ಲಿ ಜರಗುವ ಎಲ್ಲ ಕಾರ್ಯಗಳು ಯಶಸ್ವಿಯಾಗುತ್ತವೆ ಎಂದರು.
ಧಾರ್ಮಿಕ ಉಪನ್ಯಾಸ ನೀಡಿದ ಶ್ರೀ ಸರಸ್ವತಿ ವಿದ್ಯಾಲಯದ ಸಂಚಾಲಕ ಅವಿನಾಶ್ ಕೊಡಂಕೆರಿ,” ಪರಮಾತ್ಮನ ಆರಾಧನೆಯಿಂದ ಭಕ್ತರು ಬದುಕಿನಲ್ಲಿ ಸರಿಯಾದ ಪಥವನ್ನು ಹಿಡಿಯಲು ಸಾಧ್ಯ. ಇದಕ್ಕೆ ಆಲಯಗಳ ಅಗತ್ಯವಿದೆ. ಗ್ರಾಮದ ಸುಭೀಕ್ಷೆ ಹಾಗೂ ಸಮೃದ್ಧ ಆಕಾಂಕ್ಷೆಗೆ ದೇಗುಲಗಳ ನಿರ್ಮಾಣ ಆಗಬೇಕಿದೆ” ಎಂದರು.
ಸತ್ಯನಾರಾಯಣ ಭಟ್ ಕಾಯಂಬಾಡಿ ಪ್ರಸ್ತಾವನೆಗೈದರು. ಉದ್ಯಮಿ ಕೆ.ಅಚ್ಚುತ ಭಟ್ ಸಭಾಧ್ಯಕ್ಷತೆ ವಹಿಸಿದ್ದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಕೆ. ರವೀಂದ್ರ ಶೆಟ್ಟಿ, ನಿವೃತ್ತ ತಹಶೀಲ್ದಾರ್ ಜಿ. ಗೆಜ್ಜೆ ತಮ್ಮಯ್ಯ ಗೌಡ, ಉದ್ಯಮಿ ಸದಾನಂದ ರೈ ಅರ್ಗುಡಿ, ಕಾರ್ಕಳದ ಪ್ರಕೃತಿ ಸ್ಟೋನ್ ಕ್ರಾಪ್ಟ್ ಮಾಲಕ ಪ್ರದೀಪ್ ಪಾಠಕ್, ಬಳ್ಪ ಕುಂಜತ್ತಾಡಿ ಶ್ರೀ ವನದುರ್ಗಾ ದೇವಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಾಲಕೃಷ್ಣ ರೈ ಬಿರ್ಕಿ, ಕಣ್ಕಲ್ ಬೀಡಿನ ರವಿ ಅಮ್ಮಣ್ಣಾಯ, ಯುವರಾಜ ಕಣ್ಕಲ್ಲು ಮುಖ್ಯ ಅತಿಥಿಗಳಾಗಿದ್ದರು.
ತಂತ್ರಿಗಳಾದ ರವಿಕುಮಾರ ಆಚಾರ್ಯ ಕಾರ್ಕಳ ಅವರ ನೇತೃತ್ವದಲ್ಲಿ ವೈದಿಕ ವಿಧಿವಿಧಾನಗಳು ನಡೆದವು.

Advertisement

ಪ್ರಕಾಶ್ ಭಟ್ ವಂದಿಸಿ ಕೃಷ್ಣ ವೈಲಾಯ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಗೋವಿನ ಸಗಣಿಯಿಂದ ಗಣೇಶ ಮೂರ್ತಿ | ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಣೆಗೆ ಆದ್ಯತೆ ನೀಡಿದ ರೈತ|
September 7, 2024
10:59 PM
by: ದ ರೂರಲ್ ಮಿರರ್.ಕಾಂ
ಗಣೇಶೋತ್ಸವ | ದೇವರ ಪ್ರಸಾದಕ್ಕೆ FSSAI ಪರವಾನಗಿ ಕಡ್ಡಾಯ | ಖಂಡನೆ-ಸಾರ್ವಜನಿಕರಿಂದ ಅಸಮಾಧಾನ |
September 7, 2024
10:26 PM
by: ದ ರೂರಲ್ ಮಿರರ್.ಕಾಂ
ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ | ಕೃಷ್ಣನಿಗಾಗಿ 108 ಬಗೆಯ ಲಡ್ಡು |
August 26, 2024
4:35 PM
by: ದ ರೂರಲ್ ಮಿರರ್.ಕಾಂ
ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಗೆ ಸಜ್ಜಾದ ಮಥುರಾ
August 25, 2024
9:39 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror