ಕೊರೋನಾ ಬಂದರೆ ಭಯಪಡಬೇಡಿ | ಕೊರೋನಾಕ್ಕೆ ಆಯುರ್ವೇದ ಚಿಕಿತ್ಸೆ ಪಡೆದ ಸಚಿವ ಸಿ ಟಿ ರವಿ ಸಲಹೆ ಏನು ?

July 24, 2020
10:00 PM

ಕೊರೋನಾ ಸೋಂಕಿಗೆ ಒಳಗಾದವರು ಯಾವುದೇ ಕಾರಣಕ್ಕೂ ಆತಂಕಕ್ಕೆ , ಭಯಕ್ಕೆ ಒಳಗಾಗಬೇಡಿ, ಮಾನಸಿಕ ಧೈರ್ಯ ತಂದುಕೊಂಡು ಚಿಕಿತ್ಸೆ ಮಾಡಿಸಿಕೊಳ್ಳಿ ಎಂದು ಸಚಿವ ಸಿ ಟಿ ರವಿ  ಚಿಕ್ಕಮಗಳೂರಿನ ತಮ್ಮ ಮನೆಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಈ ಮೂಲಕ ರಾಜ್ಯದ ಜನರಿಗೆ ಧೈರ್ಯ ತುಂಬಿದ್ದಾರೆ.

ಕೊರೋನಾ ಪಾಸಿಟಿವ್‌ ಬಂದ ಬಳಿಕ 15 ದಿನಗಳ ಕಾಲ ಆಯುರ್ವೇದ ಚಿಕಿತ್ಸೆ ಪಡೆದ ಸಿ ಟಿ ರವಿ ಸಂಪೂರ್ಣವಾಗಿ ಗುಣಮುಖರಾದ ಬಳಿಕ ಇದೀಗ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. 15 ದಿನಗಳ ಕಾಲ ಆಯುರ್ವೇದ ಚಿಕಿತ್ಸೆ ಮಾಡಿರುವ ಸಿ ಟಿ ರವಿ ಅವರು ಡಾ.ಗಿರಿಧರ್ ಕಜೆ ಅವರು ನೀಡುವ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧಿ ಸ್ವೀಕರಿಸುವುದರ ಜೊತೆಗೆ ಅಮೃತಬಳ್ಳಿ ಹಾಗೂ ನೆಲ್ಲಿ ಕಷಾಯ ಸೇವಿಸಿದ್ದರು. ಹೀಗಾಗಿ ಯಾರೇ ಕೊರೋನಾ ಸೋಂಕು ತಗುಲಿದರೂ ಅಥವಾ ತಗುಲದೇ ಇದ್ದರೂ ಅಮೃತಬಳ್ಳಿ ಹಾಗೂ ನೆಲ್ಲಿ ಕಷಾಯ, ಜೊತೆಗೆ ದಿನಕ್ಕೆ ನಾಲ್ಕೈದು ಲೀಟರ್ ನಷ್ಟು ಬಿಸಿ ನೀರು ಕುಡಿಯುವುದು  ಉತ್ತಮ ಎಂದು ಸಲಹೆ ನೀಡಿದ್ದಾರೆ. ಕೊರೋನಾ ಬಂದರೆ ಯಾರು ಹೆದರಬೇಡಿ ಎಂದು ಜನರಿಗೆ  ಮನವಿ ಮಾಡಿದರು.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 26-04-2026 | ಸದ್ಯ ಸೆಖೆಯ ಉಗ್ರ ರೂಪ…! ಏಪ್ರಿಲ್ 28 ರಿಂದ ರಾಜ್ಯಾದ್ಯಂತ ಮಳೆ ಸಾಧ್ಯತೆ
April 26, 2026
1:54 PM
by: ಸಾಯಿಶೇಖರ್ ಕರಿಕಳ
ಅಡಿಕೆ ಎಲೆಚುಕ್ಕೆರೋಗ – ಸಿಪಿಸಿಆರ್‌ಐ ನೇತೃತ್ವದಲ್ಲಿ ಸುಳ್ಯದ ಗುತ್ತಿಗಾರಿನಲ್ಲಿ ಸಂವಾದ
April 26, 2026
7:33 AM
by: ದ ರೂರಲ್ ಮಿರರ್.ಕಾಂ
2026 ಎಲ್ ನಿನೊ ಎಚ್ಚರಿಕೆ..! ಭಾರತ ಸೇರಿ ಏಷ್ಯಾದಲ್ಲಿ ಬರ-ಬಿಸಿಲಿನ ಡಬಲ್ ಶಾಕ್
April 25, 2026
9:16 PM
by: ದ ರೂರಲ್ ಮಿರರ್.ಕಾಂ
ಭಾರೀ ಬಿಸಿ ಹೊಡೆತ..! ಜಗತ್ತಿನ 1 ಬಿಲಿಯನ್ ಜನರ ಬದುಕಿಗೆ ಬಿಸಿ ಹೊಡೆತ
April 25, 2026
9:04 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror