ಬೆಳ್ತಂಗಡಿ: ಚಲಿಸುತ್ತಿರುವ ಕಾರಿನ ಮೇಲೆ ಹಠಾತ್ ಆಗಿ ಮರ ಬಿದ್ದು ಇಬ್ಬರು ಯುವಕರು ದಾರುಣವಾಗಿ ಸಾವನ್ನಪ್ಪಿದ ಘಟನೆ ಶನಿವಾರ ಸಂಜೆ ಉಜಿರೆಯಲ್ಲಿ ನಡೆದಿದೆ.
ಯಾವುದೇ ಗಾಳಿಯೂ ಇರಲಿಲ್ಲ ಮಳೆಯೂ ಇರಲಿಲ್ಲ. ಇದ್ದಕ್ಕಿದ್ದಂತೆ ನಡೆದ ಈ ಘಟನೆ ಜನರನ್ನು ತಲ್ಲಣಗೊಳಿಸಿದೆ.
ಧರ್ಮಸ್ಥಳದಿಂದ ಉಜಿರೆ ಕಡೆಗೆ ಕಾರಿನಲ್ಲಿ 4 ಜನ ಪಯಣಿಸುತ್ತಿದ್ದರು. ಕಾರು ಸಿದ್ಧವನ ಎಂಬಲ್ಲಿನ ರಾಜ್ಯ ಹೆದ್ದಾರಿಯಲ್ಲಿ ಬರುತ್ತಿದ್ದಾಗ ಮೇ ಫ್ಲವರ್ ಬೃಹತ್ ಮರವೊಂದು ಬುಡಸಮೇತ ಕುಸಿದು ಕಾರಿನ ಮೇಲೆ ಉರುಳಿದೆ. ಕಾರಿನ ಹಿಂಬದಿ ಕುಳಿತಿದ್ದ ಉಜಿರೆ ನಿನ್ನಿಕಲ್ಲು ನಿವಾಸಿ ಮೂಲತ ಪುದುವೆಟ್ಟು ಎಂಬಲ್ಲಿನ ಮುಕುಂದಅವರ ಪುತ್ರ ವಿಘ್ನೇಶ್ (21) ಸ್ಥಳದಲ್ಲೇ ಮೃತಪಟ್ಟರೆ , ಮಡಂತ್ಯಾರು ನಿವಾಸಿ ಕ್ಷಿತಿಜ್‍ಜೈನ್ (24) ಎಂಬುವರುಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಪುಂಜಾಲಕಟ್ಟೆ ಎಂಬಲ್ಲಿ ಹೋಗುತ್ತಿದ್ದಾಗ ಮೃತಪಟ್ಟಿದ್ದಾರೆ.
ಸುಶಾಂತ ಹಾಗು ಹರ್ಷಿತ್ ಎಂಬ ಇನ್ನಿಬ್ಬರು ಕಾರಿನ ಮುಂದಿನ ಸೀಟಿನಲ್ಲಿ ಕುಳಿತಿದ್ದರು. ಅಲ್ಲಿ ಕಾರಿನ ಏರ್ ಬ್ಯಾಗ್ ತೆರೆದುಕೊಂಡದ್ದರೂ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. 4 ಜನರೂ ಮಿತ್ರರಾಗಿದ್ದು ಧರ್ಮಸ್ಥಳದಿಂದ ವಾಪಸ್ಸಾಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ : ಇಬ್ಬರ ದಾರುಣ ಸಾವು"