ಚಿನ್ನದ ರಥ ನಿರ್ಮಾಣವಾಗಲಿದೆ ಸುಬ್ರಹ್ಮಣ್ಯ ದೇವರಿಗೆ

Advertisement

ಸುಬ್ರಹ್ಮಣ್ಯ: ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಶ್ರೀ ಸುಬ್ರಹ್ಮಣ್ಯ ದೇವರಿಗೆ ಚಿನ್ನದ ರಥ ನಿರ್ಮಾಣಗೊಳ್ಳಲಿದೆ.13 ವರ್ಷಗಳ ಹಿಂದಿನ ಪ್ರಸ್ತಾವನೆ ಈಗ ಮರುಜೀವ ಪಡೆದುಕೊಂಡಿದೆ.

Advertisement

2006ರಲ್ಲಿ ಮುಖ್ಯಮಂತ್ರಿ ಆಗಿದ್ದ ಎಚ್.ಡಿ ಕುಮಾರಸ್ವಾಮಿ ಅವರು ನೂತನ ಚಿನ್ನದ ರಥ ನಿರ್ಮಾಣಕ್ಕೆ ಸರಕಾರದಿಂದ ಅನುಮೋದನೆ ನೀಡಿದ್ದರು. ಅಂದು 15 ಕೋ ರೂ ವೆಚ್ಚದಲ್ಲಿ ರಥ ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗಿತ್ತು. ಟೆಂಡರು ಪ್ರಕ್ರಿಯೆ ಕೂಡ ನಡೆದಿತ್ತು. ಬಳಿಕ ದರ ನಿಗದಿಪಡಿಸುವಲ್ಲಿ ತಾಂತ್ರಿಕ ಅಡಚಣೆಗಳು ಬಂದ ಕಾರಣ ರಥ ನಿರ್ಮಾಣ ಕಾರ್ಯ ಸ್ಥಗಿತಗೊಂಡಿತ್ತು. ಇದೀಗ ಕುಕ್ಕೆ ದೇಗುಲದಲ್ಲಿ ರಥ ನಿರ್ಮಾಣವಾಗದೆ ಮುಖ್ಯಮಂತ್ರಿ ಸ್ಥಾನದಲ್ಲಿ ಇರುವವರಿಗೆ ದೋಷ ಉಂಟಾಗುವ ಸಾಧ್ಯತೆ ಕುರಿತು ಜ್ಯೋತಿಷಿ ದ್ವಾರಕನಾಥ್ ಅವರಿಂದ ಸಲಹೆಗಳು ಬಂದ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳು ಮುಜರಾಯಿ ಇಲಾಖೆಗೆ ರಥ ನಿರ್ಮಾಣಕ್ಕೆ ಸಂಬಂಧಿಸಿ ತತ್‍ಕ್ಷಣ ಕಾರ್ಯಪ್ರವೃತ್ತರಾಗುವಂತೆ ಸೂಚಿಸಿದ್ದಾರೆ.

Advertisement
Advertisement

ಶನಿವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿಯೊಂದಿಗೆ ಈ ಬಗ್ಗೆ ಸಮಾಲೋಚನಾ ಸಭೆ ನಡೆಸಿದ ಮುಖ್ಯಮಂತ್ರಿಗಳು ಚಿನ್ನದ ರಥ ಯೋಜನೆ ಬಗ್ಗೆ ತಿಳಿದುಕೊಂಡರು. ಕುಕ್ಕೆ ದೇವಳದಲ್ಲಿ ಸುಮಾರು 320 ಕೋಟಿ ರೂ ಸ್ವಂತ ನಿಧಿ ಇದೆ. ಅದರ ಜೊತೆ ದಾನಿಗಳಿಂದ ದೇಣಿಗೆ ಸಂಗ್ರಹಿಸಿ ಮತ್ತು ದೇವಸ್ಥಾನದ ಅನುದಾನ ಬಳಸಿ ಸುಮಾರು 80 ರಿಂದ 85 ಕೋಟಿ ರೂ ವೆಚ್ಚದಲ್ಲಿ 240 ಕೆ.ಜಿ ಚಿನ್ನ ಬಳಸಿ ನೂತನ ರಥ ನಿರ್ಮಿಸಲು ಆಡಳಿತ ಮಂಡಳಿ ನಿರ್ಧರಿಸಿದೆ. ಈ ಸಂಬಂಧ ಎ.29 ರಂದು ಕುಕ್ಕೆ ದೇವಸ್ಥಾನದಲ್ಲಿ ಅಡಳಿತ ಮಂಡಳಿ ಸಭೆ ಕರೆಯಲಾಗಿದೆ.

2006ರಲ್ಲಿ ರಥ ನಿರ್ಮಾಣಕ್ಕೆ ರೂ.15 ಕೋಟಿ ರೂ ವೆಚ್ಚದ ಅಂದಾಜು ಪಟ್ಟಿ ತಯಾರಿಸಲಾಗಿತ್ತು.ಅಲ್ಲದೆ ರಥ ನಿರ್ಮಾಣವು ಕೂಡಾ ಆರಂಭವಾಗಿತ್ತು. ಖ್ಯಾತ ಶಿಲ್ಪಿ ಕೋಟೇಶ್ವರ ಲಕ್ಷ್ಮೀನಾರಾಯಣ ಆಚಾರ್ಯರ ನೇತೃತ್ವದಲ್ಲಿ ರಥ ನಿರ್ಮಾಣ ಕಾರ್ಯವು ಆರಂಭವಾಗಿತ್ತು.ರಥಕ್ಕೆ ಅಳವಡಿಸುವ ಶಿಲ್ಪಕಲಾಕೃತಿಗಳನ್ನು ನಿರ್ಮಿಸಲಾಗಿತ್ತು.ಮರದ ಕೆತ್ತನೆಗಳು ಸಮಾಪ್ತಿ ಹಂತ ತಲುಪಿತ್ತು.ಆದರೆ ಚಿನ್ನ ಅಳವಡಿಕೆ ಸಮಯದಲ್ಲಿ ಯೋಜನೆ ಸ್ಥಗಿತಗೊಂಡಿತ್ತು.ಆದುದರಿಂದ ಇಂದಿಗೂ ಕೂಡಾ ರಥದ ಅಡ್ಡೆಯು ಶ್ರೀ ದೇವಳದಲ್ಲಿದೆ.

Advertisement

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಚಿನ್ನದ ರಥ ನಿರ್ಮಾಣವಾಗಲಿದೆ ಸುಬ್ರಹ್ಮಣ್ಯ ದೇವರಿಗೆ"

Leave a comment

Your email address will not be published.


*