ಚೌಕಿದಾರ್ ಹೆಸರಿನಲ್ಲಿ ದೇಶವನ್ನೇ ಲೂಟಿಗೈದ ಮೋದಿ ಸರಕಾರ

Advertisement
ಮಂಗಳೂರು: *ಕಳೆದ 5 ವರ್ಷಗಳ ಹಿಂದೆ ಕಪ್ಪುಹಣ ತರುವುದಾಗಿ, ಭ್ರಷ್ಟಾಚಾರ ನಿಗ್ರಹಿಸುವುದಾಗಿ, ಅಚ್ಛೇದಿನ್,ಸಬ್ ಕಾ ಸಾಥ್– ಸಬ್ ಕಾ ವಿಕಾಸ್ ಮುಂತಾದ ಪೊಳ್ಳು ಭರವಸೆಗಳನ್ನು ನೀಡಿ,ತನ್ನನ್ನು ತಾನು ಚಾಯ್ ವಾಲಾ,ಫಕೀರ ಮುಂತಾದ ಹೆಸರಿನಿಂದ ಕರೆಸಿಕೊಂಡು ದೇಶದ ಜನರಿಗೆ ಮಂಕುಬೂದಿ ಎರಚಿ ಇಡೀ ದೇಶದ ಆರ್ಥಿಕತೆಯನ್ನೇ ಸರ್ವನಾಶ ಮಾಡಿ ಜನರ ಬದುಕನ್ನು ಸಂಕಷ್ಠಕ್ಕೆ ದೂಡಿದ ನರೇಂದ್ರ ಮೋದಿ ಸರಕಾರ ಮತ್ತೊಮ್ಮೆ ಅಧಿಕಾರಕ್ಕೇರಿದರೆ ದೇಶದ ಜಾತ್ಯಾತೀತ ಪರಂಪರೆ ಮತ್ತಷ್ಟು ಅಪಾಯವನ್ನು ಎದುರಿಸಲಿದೆ* ಎಂದು CPIM ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್ ರವರು ತೀವ್ರ ಆತಂಕವನ್ನು ವ್ಯಕ್ತಪಡಿಸಿದರು.
ಅವರು ಉರ್ವಾಸ್ಟೋರಿನಲ್ಲಿ ಜರುಗಿದ CPIM ಪಕ್ಷದ ಕಾರ್ಯಕರ್ತರ,ಹಿತೈಷಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದರು. ದೇಶ ಕಟ್ಟಬೇಕಾದ ಯುವ ಜನತೆಗೆ ತಾನು ಅಧಿಕಾರಕ್ಕೆ ಬಂದರೆ ವರ್ಷಕ್ಕೆ 2 ಕೋಟಿ ಉದ್ಯೋಗ ಸ್ರಷ್ಠಿಸುವುದಾಗಿ, ಅದಕ್ಕಾಗಿ ಮೇಕ್ ಇನ್ ಇಂಡಿಯಾ ಎಂಬ ಘೋಷಣೆಯನ್ನು ನೀಡಿದ ನರೇಂದ್ರ ಮೋದಿಯವರು, ಕಳೆದ 5 ವರ್ಷದಲ್ಲಿ ಸೃಷ್ಠಿಯಾಗಬೇಕಾಗಿದ್ದ10 ಕೋಟಿ ಉದ್ಯೋಗದಲ್ಲಿ ಕನಿಷ್ಠ 10 ಲಕ್ಷ ಉದ್ಯೋಗವೂ ಸೃಷ್ಠಿಯಾಗಿಲ್ಲ ಎಂಬುದನ್ನು ಕೇಂದ್ರ ಸರಕಾರದ ಇಲಾಖೆಯೇ ದೃಢಪಡಿಸಿದೆ. ಈಗ ತಾನು ದೇಶ ಕಾಯುವ ಕಾವಲುಗಾರನಂತೆ ಬಿಂಬಿಸಿ,ಚೌಕಿದಾರ್ ಹೆಸರಿನಲ್ಲಿ ಮತ್ತೆ ದೇಶವನ್ನು ಲೂಟಿಗೈಯ್ಯಲು ಸಂಚು ರೂಪಿಸುತ್ತಿದೆ* ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಸ್ಥಳೀಯ ಪಕ್ಷದ ನಾಯಕರಾದ ಮನೋಜ್ ಉರ್ವಾಸ್ಟೋರು ವಹಿಸಿದ್ದರು.ವೇದಿಕೆಯಲ್ಲಿ ಸಿಪಿಎಂ ನಾಯಕರಾದ ಪ್ರದೀಪ್, ರಘುವೀರ್, ಕಿಶೋರ್,ಇಕ್ಬಾಲ್, ನಾಗೇಂದ್ರರವರು ಉಪಸ್ಥಿತರಿದ್ದರು.
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement
Advertisement

Be the first to comment on "ಚೌಕಿದಾರ್ ಹೆಸರಿನಲ್ಲಿ ದೇಶವನ್ನೇ ಲೂಟಿಗೈದ ಮೋದಿ ಸರಕಾರ"

Leave a comment

Your email address will not be published.


*