ಅಡಿಕೆ–ಕಾಳುಮೆಣಸು ಬೆಳೆ ವಿಮೆ: ರೈತರ ನೋಂದಣಿಗೆ ಆ.17 ಅಂತಿಮ ದಿನ

August 11, 2026
6:52 AM
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2026-27ನೇ ಸಾಲಿನ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳನ್ನು ಒಳಪಡಿಸಲಾಗಿದ್ದು, ರೈತರ ನೋಂದಣಿಗೆ ಆ.17 ಅಂತಿಮ ದಿನವಾಗಿದೆ. ಅಡಿಕೆಗೆ ಹೆಕ್ಟೇರಿಗೆ ₹6,400 ಹಾಗೂ ಕಾಳುಮೆಣಸಿಗೆ ₹2,350 ಪ್ರೀಮಿಯಂ ನಿಗದಿಯಾಗಿದ್ದು, ಬ್ಯಾಂಕ್, ಸಿಎಸ್‌ಸಿ ಹಾಗೂ ಗ್ರಾಮ ಒನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು.

ಹವಾಮಾನ ವೈಪರೀತ್ಯದಿಂದ ತೋಟಗಾರಿಕೆ ಬೆಳೆಗಳಿಗೆ ನಷ್ಟ ಉಂಟಾದ ಸಂದರ್ಭದಲ್ಲಿ ರೈತರಿಗೆ ಪರಿಹಾರ ಒದಗಿಸುವ ಉದ್ದೇಶದಿಂದ 2026-27ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮುಗಳಿಗೆ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಯೋಜನೆಯಡಿ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳನ್ನು ಅಧಿಸೂಚಿಸಲಾಗಿದ್ದು, ರೈತರ ನೋಂದಣಿಗೆ ಅಂತಿಮ ದಿನಾಂಕವನ್ನು ಆ.17ರವರೆಗೆ ವಿಸ್ತರಿಸಲಾಗಿದೆ. ಸಾಲ ಪಡೆದ ಹಾಗೂ ಸಾಲ ಪಡೆಯದ ರೈತರು ಈ ಅವಧಿಯೊಳಗೆ ಯೋಜನೆಯಡಿ ನೋಂದಣಿ ಮಾಡಿಕೊಂಡು ಇದರ ಸದುಪಯೋಗ ಪಡೆಯಬಹುದು ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ.

ಬೆಳೆಸಾಲ ಪಡೆದ ರೈತರು ಸಾಲ ಹೊಂದಿರುವ ಬ್ಯಾಂಕ್‌ನಲ್ಲೇ ಯೋಜನೆಯಡಿ ನೋಂದಣಿ ಮಾಡಿಕೊಳ್ಳಬಹುದು. ಬೆಳೆಸಾಲ ಹೊಂದಿರದ ರೈತರು ತಮ್ಮ ಉಳಿತಾಯ ಖಾತೆ ಹೊಂದಿರುವ ಬ್ಯಾಂಕ್‌ನಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ಇದಲ್ಲದೆ ಸಾಮಾನ್ಯ ಸೇವಾ ಕೇಂದ್ರ (CSC) ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲೂ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.

ಅಡಿಕೆಗೆ ಹೆಕ್ಟೇರಿಗೆ ₹6,400 ಪ್ರೀಮಿಯಂ : ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯ ರೈತರು ಪಾವತಿಸಬೇಕಾದ ಪ್ರೀಮಿಯಂ ಮೊತ್ತವನ್ನು ಬೆಳೆವಾರು ನಿಗದಿಪಡಿಸಲಾಗಿದೆ.

  • ಅಡಿಕೆ – ಪ್ರತಿ ಹೆಕ್ಟೇರಿಗೆ ₹6,400
  • ಕಾಳುಮೆಣಸು – ಪ್ರತಿ ಹೆಕ್ಟೇರಿಗೆ ₹2,350

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2026-27ನೇ ಸಾಲಿನ ಯೋಜನೆಯ ಅನುಷ್ಠಾನಕ್ಕಾಗಿ ಟಾಟಾ ಎಐಜಿ ಸಂಸ್ಥೆಯನ್ನು ವಿಮಾ ಸಂಸ್ಥೆಯಾಗಿ ಆಯ್ಕೆ ಮಾಡಲಾಗಿದೆ.

ಹವಾಮಾನ ವೈಪರೀತ್ಯದಿಂದ ಉಂಟಾಗಬಹುದಾದ ಬೆಳೆ ನಷ್ಟದ ಸಂದರ್ಭದಲ್ಲಿ ರೈತರಿಗೆ ಆರ್ಥಿಕ ರಕ್ಷಣೆ ನೀಡುವ ದೃಷ್ಟಿಯಿಂದ ಬೆಳೆ ವಿಮೆ ಮಹತ್ವದ್ದಾಗಿದ್ದು, ಇನ್ನೂ ನೋಂದಣಿ ಮಾಡಿಕೊಳ್ಳದ ಅಡಿಕೆ ಮತ್ತು ಕಾಳುಮೆಣಸು ಬೆಳೆಗಾರರು ಆ.17ರೊಳಗೆ ನೋಂದಣಿ ಮಾಡಿಕೊಳ್ಳುವಂತೆ ತೋಟಗಾರಿಕೆ ಇಲಾಖೆ ಮನವಿ ಮಾಡಿದೆ.

ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಅಥವಾ ವಿಮಾ ಸಂಸ್ಥೆಯ ಪ್ರತಿನಿಧಿಯನ್ನು ಸಂಪರ್ಕಿಸಬಹುದು.

ಸಂಪರ್ಕ ವಿವರ:

ಐ.ಕೆ. ದೊಡ್ಡಮನಿ, ತೋಟಗಾರಿಕೆ ಜಂಟಿ ನಿರ್ದೇಶಕರು, ದಕ್ಷಿಣ ಕನ್ನಡ – 9448999226
ಪ್ರವೀಣ ಕೆ., ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಮಂಗಳೂರು – 9449258204
ಜೋ ಪ್ರದೀಪ್ ಡಿಸೋಜ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಬಂಟ್ವಾಳ – 9448206393
ರೇಖಾ ಎ., ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಪುತ್ತೂರು – 9731854527
ಪ್ರಮೋದ್ ಸಿ.ಎಂ., ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಸುಳ್ಯ – 9483110621
ಚಂದ್ರಶೇಖರ ಕೆ.ಎಸ್., ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಬೆಳ್ತಂಗಡಿ – 9448336863
ಸಂಜಯ್ ಪೂಜಾರ್, ಟಾಟಾ ಎಐಜಿ ಸಂಸ್ಥೆಯ ಪ್ರತಿನಿಧಿ – 8809140983

ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

ದಕ್ಷಿಣ ಕನ್ನಡಕ್ಕೆ ಕೃಷಿ ವಿಮೆಯಲ್ಲಿ ಅಗ್ರಸ್ಥಾನ: ಅಡಿಕೆ, ಕಾಳುಮೆಣಸಿಗೆ ₹276 ಕೋಟಿ ಪರಿಹಾರ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಅಡಿಕೆ ಮತ್ತು ಕಾಳುಮೆಣಸು ಬೆಳೆಗಳಿಗೆ ವಿಮಾ ನೋಂದಣಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಕರ್ನಾಟಕದಲ್ಲೇ ಅಗ್ರಸ್ಥಾನ ಪಡೆದಿದೆ. 2024-25ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಸಲ್ಲಿಕೆಯಾಗಿದ್ದ 3,32,752 ವಿಮಾ ಪ್ರಸ್ತಾವನೆಗಳ ಪೈಕಿ 3,32,750 ಪ್ರಸ್ತಾವನೆಗಳು ಇತ್ಯರ್ಥಗೊಂಡಿದ್ದು, ಕೇವಲ ಎರಡು ಪ್ರಸ್ತಾವನೆಗಳು ಮಾತ್ರ ಬಾಕಿ ಉಳಿದಿವೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿಯಲ್ಲಿ ತಿಳಿಸಿದೆ.

ದಕ ಜಿಲ್ಲೆಯಲ್ಲಿ ಒಟ್ಟು 75,899.52 ಹೆಕ್ಟೇರ್ ಪ್ರದೇಶವನ್ನು ಬೆಳೆ ವಿಮೆಯಡಿ ಒಳಪಡಿಸಲಾಗಿದೆ. ಈ ಪೈಕಿ ಅಡಿಕೆಗೆ ಸಂಬಂಧಿಸಿದಂತೆ 2,42,550 ಪ್ರಸ್ತಾವನೆಗಳು ಸಲ್ಲಿಕೆಯಾಗಿದ್ದು, 55,637.96 ಹೆಕ್ಟೇರ್ ಪ್ರದೇಶ ವಿಮಾ ವ್ಯಾಪ್ತಿಗೆ ಬಂದಿದೆ. ಕಾಳುಮೆಣಸಿಗೆ 90,200 ಪ್ರಸ್ತಾವನೆಗಳು ಸಲ್ಲಿಕೆಯಾಗಿದ್ದು, 20,261.56 ಹೆಕ್ಟೇರ್ ಪ್ರದೇಶ ವಿಮೆ ಮಾಡಲಾಗಿದೆ.

ವಿಮಾ ಯೋಜನೆಯಡಿ ರೈತರಿಗೆ ಒಟ್ಟಾರೆ ಸುಮಾರು ₹276 ಕೋಟಿ ಪರಿಹಾರ ಬಿಡುಗಡೆಯಾಗಿದೆ. ಇದರಲ್ಲಿ ಅಡಿಕೆ ಬೆಳೆಗಾರರಿಗೆ ₹254.3 ಕೋಟಿ ಹಾಗೂ ಕಾಳುಮೆಣಸು ಬೆಳೆಗಾರರಿಗೆ ₹21.6 ಕೋಟಿ ಪರಿಹಾರ ದೊರೆತಿದೆ.

ಈ ವಿಮಾ ಯೋಜನೆಗೆ ರೈತರು ₹40.3 ಕೋಟಿ ಪ್ರೀಮಿಯಂ ಪಾವತಿಸಿದ್ದು, ಕೇಂದ್ರ ಸರ್ಕಾರ ₹80.7 ಕೋಟಿ ಹಾಗೂ ರಾಜ್ಯ ಸರ್ಕಾರ ₹156.7 ಕೋಟಿ ಕೊಡುಗೆ ನೀಡಿವೆ. ಒಟ್ಟು ಪ್ರೀಮಿಯಂ ಮೊತ್ತ ₹277.8 ಕೋಟಿ ಆಗಿದೆ.

ಅಡಿಕೆ ಮತ್ತು ಕಾಳುಮೆಣಸಿನಂತಹ ದೀರ್ಘಾವಧಿಯ ತೋಟಗಾರಿಕಾ ಬೆಳೆಗಳಿಗೆ ಹವಾಮಾನ ಅಪಾಯ ಹೆಚ್ಚುತ್ತಿರುವ ಸಂದರ್ಭದಲ್ಲಿ ದಕ್ಷಿಣ ಕನ್ನಡದಲ್ಲಿ ಬೆಳೆ ವಿಮೆಯ ವ್ಯಾಪ್ತಿ ಹೆಚ್ಚಿರುವುದು ರೈತರ ಅಪಾಯ ನಿರ್ವಹಣೆಯ ದೃಷ್ಟಿಯಿಂದ ಗಮನಾರ್ಹ ಬೆಳವಣಿಗೆಯಾಗಿದೆ.

The Karnataka government has implemented a redesigned Weather-Based Crop Insurance Scheme for the 2026-27 kharif and rabi seasons to compensate horticulture farmers for crop losses caused by adverse weather conditions. Arecanut and black pepper have been notified for Dakshina Kannada district, with the final date for enrolment extended to August 17. Farmers must pay a premium of ₹6,400 per hectare for arecanut and ₹2,350 per hectare for black pepper. Enrolment is available through banks, Common Service Centres (CSC) and Grama One centres.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ತೆಂಗು–ಅಡಿಕೆ ನಡುವೆ ಏಲಕ್ಕಿ, ಮೆಣಸು, ಅರಿಶಿಣ | ತುಮಕೂರಿನಲ್ಲೂ ಬೆಳೆಗಾರರು ಪರ್ಯಾಯ ಆದಾಯದ ಕಡೆಗೆ ಹೆಜ್ಜೆ
August 30, 2026
10:38 PM
by: ದ ರೂರಲ್ ಮಿರರ್.ಕಾಂ
ಮಳೆ ಕೊರತೆ ನೀಗಿಸಲು ಕರ್ನಾಟಕದಲ್ಲಿ ಮೋಡ ಬಿತ್ತನೆ
August 30, 2026
10:18 PM
by: ದ ರೂರಲ್ ಮಿರರ್.ಕಾಂ
ಕಸ್ತೂರಿ ರಂಗನ್ ವರದಿ ಜಾರಿಗೆ ಅವಕಾಶವಿಲ್ಲ
August 30, 2026
10:09 PM
by: ದ ರೂರಲ್ ಮಿರರ್.ಕಾಂ
ಪ್ರತೀ ವರ್ಷ “ಕ್ಲೈಮೇಟ್ ರಿಪೋರ್ಟ್ ಕಾರ್ಡ್” ಏಕೆ ಬೇಕು..? ನಮ್ಮ ನಗರ-ಹಳ್ಳಿಗಳು ಹವಾಮಾನ ಬದಲಾವಣೆಗೆ ಎಷ್ಟು ಸಿದ್ಧ?
August 30, 2026
11:59 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror