ನಿಂತಿಕಲ್ಲು : ಅಲೆಕ್ಕಾಡಿ – ಎಡಮಂಗಲ ಜಿಲ್ಲಾ ಪಂಚಾಯತ್ ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿದೆ. ಕಾಮಗಾರಿ ಬಗ್ಗೆ ಸ್ಥಳಿಯ ಕೃಷಿಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿ ರಸ್ತೆ ಬದಿಯಲ್ಲಿ ರೋಲ್ ಸರಿಯಾಗಿ ಆಗಿಲ್ಲ ಹಾಗೂ ಗುಣಮಟ್ಟದ ಬಗ್ಗೆಯೂ ನಮಗೆ ಸಂದೇಹ ಇದೆ ಎಂದು ವಿಡಿಯೋ ಮಾಡಿದರು.
ಇದಕ್ಕೆ ಕೆಂಡಾಮಂಡಲರಾದ ಗುತ್ತಿಗೆದಾರರು ಹಾಗೂ ಅವರ ಜೊತೆ ಇದ್ದವರು ಗದರಿಸಿದ್ದೂ ಅಲ್ಲದೆ ನಾವು ಕಾಮಗಾರಿ ನಿಲ್ಲಿಸುತ್ತೇವೆ, ಗುಣಮಟ್ಟದ ಬಗ್ಗೆ ಮಾತನಾಡಲು ನಿಮ್ಮಲ್ಲೇನಿದೆ ದಾಖಲೆ ಎಂದು ಮರುಪ್ರಶ್ನಿಸಿದಾಗ, ನಮ್ಮ ತೆರಿಗೆ ಹಣ ಎಂದು ಮರುತ್ತರವನ್ನು ಸ್ಥಳೀಯರು ನೀಡಿದ್ದಾರೆ.
ಈ ಬಗ್ಗೆ “ಸುಳ್ಯನ್ಯೂಸ್.ಕಾಂ” ವತಿಯಿಂದ ಪಿ ಎಂ ಜಿ ಎಸ್ ವೈ ಇಂಜಿನಿಯರ್ ಅವರನ್ನು ಸಂಪರ್ಕಿಸಲು ನಡೆಸಿದ ಪ್ರಯತ್ನ ವಿಫಲವಾಗಿದೆ. ಹಲವು ಬಾರಿ ಕರೆ ಮಾಡಿದಾಗ ಸ್ವೀಕರಿಸಲಿಲ್ಲ.
ಚೌಕೀದಾರ್ ಎಂಬ ಶಬ್ದ ಇತ್ತೀಚೆಗಷ್ಟೇ ಹೆಚ್ಚು ಪರಿಚಯವಾಗಿದೆ. ಈಗ ಸ್ಥಳೀಯರು ಕಾಮಗಾರಿ ಗುಣಮಟ್ಟದ ಬಗ್ಗೆ ಚೌಕೀದಾರ್ ಆಗಿದ್ದಾರೆ. ಗುತ್ತಿಗೆದಾರ ಕಾಮಗಾರಿ ಮಾಡುವುದಿಲ್ಲ ಎಂದು ಗದರಿಸಿದ್ದು ಈ ವಿಡಿಯೋದಲ್ಲಿ ಕಾಣುತ್ತದೆ. ಈಗ ಹೆಸರಿನ ಮುಂದೆ ಚೌಕೀದಾರ ಎಂದು ಹಾಕಿದವರ ನಡೆ ಏನು ಎಂಬುದನ್ನು ಸಾರ್ವಜನಿಕರು ಕೇಳುತ್ತಾರೆ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
ಕಳಪೆ ಕಾಮಗಾರಿ ಗಮನಕ್ಕೆ ಬಂದಾಗ ಅದನ್ನು ಪ್ರಶ್ನಿಸುವ ಹಕ್ಕು ಜನಸಾಮಾನ್ಯರಿಗೆ ಇದ್ದೆ ಇದೆ, ಅದಕ್ಕಾಗಿಯೇ ನಮ್ಮ ಗ್ರಾಮದಲ್ಲಿ ಪಂಚಾಯತಿ ವಾರ್ಡ್ ಸಮಿತಿ ಎಲ್ಲಾ ನಿರ್ಧಾರ ತೆಗೆದುಕೊಳ್ಳುವ ಹಕ್ಕನ್ನು ನಮ್ಮ ದೇಶದ ಸಂವಿಧಾನ ಆಧಾರಿತ ಪಂಚಾಯತಿ ರಾಜ್ ಕಾನೂನು ಪ್ರತಿಯೊಬ್ಬ ನಾಗರಿಕನಿಗೂ ನೀಡಿದೆ. ಸಾರ್ವಜನಿಕ ಕಾಮಾಗಾರಿ ಬಗ್ಗೆ ವಾರ್ಡ್ ಸಮಿತಿಗೆ ಸಂಶಯ ಬಂದಲ್ಲಿ ಅದನ್ನು ಆಧಾರ ಸಹಿತ ತಾಂತ್ರಿಕ ಮಾಹಿತಿ ನೀಡಿ ವ್ಯವಸ್ಥೆ ಸರಿ ಪಡಿಸುವ ಜವಾಬ್ದಾರಿ ಆ ಗುತ್ತಿಗೆಯ ಕಾಮಗಾರಿ ಉಸ್ತುವಾರಿ ಹಾಗೂ ಸಹಿ ಹಾಕುವ ಇಂಜಿನಿಯರ್ ಅವರದ್ದಾಗಿದೆ. ಆದರೆ ಜನತೆ ಗುತ್ತಿಗೆದಾರರನ್ನು ಪ್ರಶ್ನೆ ಮಾಡುವುದು ಸಮ್ಮತವಲ್ಲ. ಬದಲಿಗೆ ತಮ್ಮ ಸಂಶಯದ ವಿಡಿಯೋ ವರದಿ ಹಲವು ಊರಿನ ನಾಗರಿಕರೊಂದಿಗೆ ಲಿಖಿತವಾಗಿ ಸಂಬಂಧಿಸಿದ PWD, ಜಿ.ಪಂ ಇಂಜಿನಿಯರ್ ಅವರಿಗೆ ಸಲ್ಲಿಸಿ ಸಮಗ್ರ ತನಿಖೆಗೆ ಒತ್ತಾಯಿಸಬೇಕು. Check above Shivarenuka comments and follow the procedures
ಜನಸಾಮಾನ್ಯರ ತೆರಿಗೆಯ ಹಣ ಕಳಪೆಯಿಂದ ಪೋಲು ಆಗುವ ಬದಲು, ನಿಧಾನವಾಗಿಯಾದರೂ ಸಮರ್ಪಕವಾಗಿ ಕಾಮಗಾರಿ ನಡೆಸುವಂತೆ ನೋಡಿಕೊಳ್ಳುವ ಸಾಂವಿಧಾನಿಕ ನಾಗರಿಕರ ಹಕ್ಕನ್ನು ಪತಿಯೊಬ್ಬರು ನಿರ್ವಹಿಸಬೇಕಿದೆ.
ಈ ವರದಿ ವಿಚಾರದಲ್ಲಿ ವೀಡಿಯೋ ಮಾಡಿರುವ ಆ ಭಾಗದ ಜನತೆ ಸಂಪೂರ್ಣ ಬೆಂಬಲ ನೀಡುವುದು ಸುಳ್ಯ ಹಾಗೂ ಪುತ್ತೂರು ವಿಧಾನಸಭೆಯ ಜನತೆ ಜವಾಬ್ದಾರಿ ಆಗಿದೆ. ಪರಸ್ಪರ ಸಹಕಾರ ಉತ್ತಮ ಗುಣಮಟ್ಟದ ಸಾರ್ವಜನಿಕ ವ್ಯವಸ್ಥೆ ಹಾಗೂ ತೆರಿಗೆ ಹಾಳಾಗುವುದನ್ನು ಮತ್ತು ಭ್ರಷ್ಟಾಚಾರ ತಡೆಯಬಹುದು.
#ಜೈ_ಕರ್ನಾಟಕ #ಹೈ_ಹಿಂದ್
ರಸ್ತೆ ಡಾಂಬರು ಕಾಮಗಾರಿ ಕಳಪೆ ಆಗಿದ್ದಲ್ಲಿ …ಅಭಿಯಂತರರು ದೂರವಾಣಿ ಕರೆ ಸ್ವೀಕರಿಸದಿದ್ದರೆ.. ಸಂಬಂಧಿತ ಕಾಮಗಾರಿ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿ ..ಪಡೆದ ದಾಖಲಾತಿಗಳ ಸೇರಿಸಿ ತಾಲ್ಲೂಕು ಅಥವಾ ಜಿಲ್ಲಾ ರಸ್ತೆ ಇಲಾಖಾ ಅಭಿಯಂತರರಿಗೆ ಕಾಮಗಾರಿ ಗುಣಮಟ್ಟ ತನಿಖಾ ವರದಿ ಹಾಗು ಕಳಪೆ.ಕಂಡು ಬಂದಲ್ಲಿ ಸಂಬಂಧಿತ ಗುತ್ತಿಗೆದಾರರ ವಿರುದ್ಧ ದೂರು, ದಂಡ, ಪರವಾನಿಗೆ.ರದ್ದು ಕೋರಿ ದೂರು ಸಲ್ಲಿಸಿ, ಫಲಿತಾಂಶ ಬರದಿದ್ದರೆ.. ಬೆಂಗಳೂರು.ಲೋಕಾಯುಕ್ತ ಮುಖ್ಯ ಅಭಿಯಂತರರಿಗೆ ದೂರು ಸಲ್ಲಿಸಿ..(ಸಂಬಂಧಿತ ದಾಖಲೆಗಳು, ದೂರು,) ಕಾಮಗಾರಿ ಗುಣಮಟ್ಟ ತನಿಖೆ ಮಾಡಿಸಿ ತಪ್ಪಿತಸ್ಥರ ವಿರುದ್ಧ ಸಕ್ಷಮ ಪ್ರಾಧಿಕಾರದಿಂದ ದೂರು ದಾಖಲಿಸಲು ಆದೇಶಕ್ಕೆ.ಮನವೌ ಸಲ್ಲಿಸಿ..
Every one is chowkidar to measure good and bad. Contractor is answarable.