ಸುಳ್ಯ: ಅಂತರರಾಷ್ಟ್ರೀಯ ಲಯನ್ಸ್ ಸಂಸ್ಥೆಗಳ ಒಕ್ಕೂಟದ ಆಂದ್ರಪ್ರದೇಶ, ಗೋವಾ ಮತ್ತು ಕರ್ನಾಟಕ ರಾಜ್ಯಗಳನ್ನೊಳಗೊಂಡ ಮಲ್ಟಿಪಲ್ ಜಿಲ್ಲೆ 317 ಇದರ 2017-18ನೇ ಸಾಲಿನ “ ಅತ್ಯುತ್ತಮ ಪ್ರಾಂತೀಯ ಅಧ್ಯಕ್ಷ” ಪ್ರಶಸ್ತಿಯನ್ನು ಜಯರಾಂ ದೇರಪ್ಪಜ್ಜನಮನೆ ಅವರಿಗೆ ಇತ್ತೀಚೆಗೆ ಬೆಂಗಳೂರಿನಲ್ಲ್ಲಿ ಜರಗಿದ 10ನೇ ಮಲ್ಟಿಪಲ್ ಸಮ್ಮೇಳನದಲ್ಲಿ ನೀಡಿ ಗೌರವಿಸಲಾಯಿತು. ನಿಕಟಪೂರ್ವ ಮಲ್ಟಿಪಲ್ ಕೌನ್ಸಿಲ್ ಚೆಯರ್‍ಮೇನ್ ಭಾರತಿ ನಾಗೇಶ್ ಅವರು ಈ ಪ್ರಶಸ್ತಿ ಪ್ರದಾನ ಮಾಡಿದರು.
ಈ ಗೌರವವನ್ನು 2018-19 ನೇ ಸಾಲಿನಲ್ಲಿ ಲಯನ್ ಜಿಲ್ಲೆ 317-ಡಿ ಯ ಪ್ರಾಂತ್ಯ 4 ನ್ನು ಅತ್ಯುತ್ತಮವಾಗಿ ಮುನ್ನಡೆಸಿದ್ದಲ್ಲದೆ ತನ್ನ ವ್ಯಾಪ್ತಿಯ ಎಲ್ಲಾ ಕ್ಲಬ್‍ಗಳಲ್ಲೂ ನಿರಂತರವಾಗಿ ಸಂಪರ್ಕವನ್ನು ಕಾಯ್ದುಕೊಂಡು ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಪ್ರೋತ್ಸಾಹಿಸಿದ್ದು ಹಾಗೂ ವಿವಿಧ ಸೇವಾ ಕಾರ್ಯಗಳನ್ನು ಆಧರಿಸಿ ಗೌರವ ನೀಡಲಾಗಿದೆ.
ಈ ಹಿಂದೆಯೂ 2015-16 ರಲ್ಲಿ ಬೆಂಗಳೂರು ಹಾಗೂ 2016-17ರಲ್ಲಿ ಗೋವಾದಲ್ಲಿ ನಡೆದ ಲಯನ್ ಮಲ್ಟಿಪಲ್ ಸಮಾವೇಶಗಳಲ್ಲಿ ಕೂಡಾ ದೇರಪ್ಪಜ್ಜನಮನೆಯವರು ಮಲ್ಟಿಪಲ್ ಪ್ರಶಸ್ತಿಗೆ ಭಾಜನರಾಗಿದ್ದರು.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಜಯರಾಂ ದೇರಪ್ಪಜ್ಜನಮನೆ ಅವರಿಗೆ ಲಯನ್ ಮಲ್ಟಿಪಲ್ ಪ್ರಶಸ್ತಿ"