ಜುಲೈ 15 ರ ಮೊದಲು ಸುಬ್ರಹ್ಮಣ್ಯದ ಒಳಚರಂಡಿ ಘಟಕ ಸುಸ್ಥಿತಿಗೆ

Advertisement
Advertisement

ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯದ  ಒಳಚರಂಡಿ ನೀರು ಶುದ್ದೀಕರಣ ಘಟಕವು ಜುಲೈ15 ರ ಒಳಗಾಗಿ ಸುಸ್ಥಿತಿಗೆ ತರುವ ಭರವಸೆಯನ್ನು  ಒಳಚರಂಡಿ ಮಂಡಳಿ ಅಧಿಕಾರಿಗಳು  ನೀಡಿದ್ದಾರೆ.

Advertisement

ಶನಿವಾರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಕ್ಕೆ ಶ್ರೀ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಹಾಗೂ ಒಳಚರಂಡಿ ಮಂಡಳಿ ಅಧಿಕಾರಿಗಳ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು  ಕುಕ್ಕೆ ಶ್ರೀ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ  ವಹಿಸಿದ್ದರು. ಕುಕ್ಕೆಯಲ್ಲಿರುವ ಜಲಮಂಡಳಿ ಹಾಗೂ ಒಳಚರಂಡಿ ಯೋಜನೆಯ ನೀರು ಶುದ್ದೀಕರಣ ಘಟಕದಲ್ಲಿ ಜುಲೈ 15 ರೊಳಗೆ ಹೆಚ್ಚುವರಿ 10 ಶುದ್ದೀಕರಣ ಪ್ಯಾನು ಅಳವಡಿಸಲು ಇದೇ ಸಂದರ್ಭ ನಿರ್ಧರಿಸಲಾಯಿತು.

Advertisement
Advertisement

ಒಳಚರಂಡಿ ನೀರು ಶುಧ್ದೀಕರಣ ಪ್ರಾಜೆಕ್ಟ್ ಅನುಷ್ಠಾನಗೊಳಿಸುವ ವೇಳೆ ಆರಂಭದ ಸೂಚನೆಯಂತೆ ಅಧಿಕಾರಿಗಳು ನಡೆದುಕೊಂಡಿಲ್ಲ. ಷರತ್ತು ಹಾಗೂ ನಿಯಮಾವಳಿಯಂತೆ ಅಳವಡಿಕೆ ಆಗಿಲ್ಲ. ಘಟಕದ ಸಾಮರ್ಥ್ಯ  ಕೂಡ ಕಡಿಮೆಯಿದ್ದು ಇದರಿಂದ ಸಮಸ್ಯೆಯಾಗಿದೆ ಎಂದು ಒಳಚರಂಡಿ ಮಂಡಳಿ ಅಧಿಕಾರಿಗಳೊಂದಿಗೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹಾಗೂ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ಚರ್ಚೆ ನಡೆದು ಈಗ ಒಳಚರಂಡಿಗೆ ಮೀಸಲಿಟ್ಟ ಅನುದಾನದಲ್ಲೆ ಶುದ್ದೀಕರಣ ಘಟಕನ್ನು ಸಮರ್ಪಗೊಳಿಸಲು ಹೆಚ್ಚುವರಿ ಹತ್ತು ಎರಿಯಟೇರ್ಸ್ ಪ್ಯಾನುಗಳನ್ನು ಘಟಕದಲ್ಲಿ ಅಳವಡಿಸಿಕೊಡುವ ಕುರಿತು ಅಧಿಕಾರಿಗಳು ಒಪ್ಪಿಕೊಂಡರು. ಮುಂದಿನ ಜುಲೈ 15ರ ಒಳಗೆ ಈ ಕಾರ್ಯವನ್ನು ಮಾಡಿಕೊಡುವ ಭರವಸೆಯನ್ನು ಅಧಿಕಾರಿಗಳು ನೀಡಿದರು.

ಸಭೆಯಲ್ಲಿ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ರವೀಂದ್ರ ಎಂ.ಎಚ್, ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ಸಂಶುದ್ದಿನ್, ಸಮಿತಿ ಸದಸ್ಯರಾದ ಮಹೇಶ್ ಕುಮಾರ್ ಕರಿಕಳ,  ಕೃಷ್ಣಮೂರ್ತಿ ಭಟ್, ಬಾಲಕೃಷ್ಣ ಬಳ್ಳೇರಿ, ರಾಜೀವಿ ಆರ್ ರೈ, ಮಾಧವ .ಡಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ವಿಮಲ ರಂಗಯ್ಯ, ಮಾಸ್ಟರ್ ಪ್ಲಾನ್ ಸಮಿತಿಯ ಸದಸ್ಯ ಶಿವರಾಮ ರೈ, ಗ್ರಾ.ಪಂ ಉಪಾಧ್ಯಕ್ಷ ರಾಜೇಶ್ ಎನ್ ಎಸ್, ಸದಸ್ಯ ಪ್ರಶಾಂತ್ ಭಟ್ ಮಾಣಿಲ, ಸಹಾಯಕ ಅಭಿಯಂತರ ಗಣೇಶ್ ನಾಯ್ಕ, ದೇಗುಲದ ಇಂಜಿನೀಯರ್ ಉದಯಕುಮಾರ್, ಅಧಿಕಾರಿಗಳಾದ ಸ್ಟ್ರೀಮ್, ಜೆ,ವಿ ಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.

Advertisement
Advertisement

ಸುಬ್ರಹ್ಮಣ್ಯದ ಕೆಎಸ್‍ಎಸ್ ಕಾಲೇಜಿನ ಬಳಿ ಕಾರ್ಯಾಚರಿಸುತ್ತಿರುವ ನೀರು ಶುದ್ಧೀಕರಣ ಘಟಕದಲ್ಲಿ ನೀರು ಶುದ್ಧಿಕರಣಗೊಳ್ಳದೆ ಕೊಳಚೆ ನೀರು ನೇರ ನದಿ ಸೇರುತ್ತಿರುವ ಕುರಿತು ಸಾರ್ವಜನಿಕರಿಂದ ದೂರುಗಳು ವ್ಯಕ್ತವಾಗಿದ್ದವು. ಇದೀಗ ದೇವಸ್ಥಾನದ ಆಡಳಿತ ಮಂಡಳಿ ಈ ಬಗ್ಗೆ ಕಾರ್ಯಪ್ರವೃತ್ತವಾಗಿದೆ.

Advertisement
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಜುಲೈ 15 ರ ಮೊದಲು ಸುಬ್ರಹ್ಮಣ್ಯದ ಒಳಚರಂಡಿ ಘಟಕ ಸುಸ್ಥಿತಿಗೆ"

Leave a comment

Your email address will not be published.


*