ಬಾಳಿಲ: ಬಾಳಿಲದ ಡಾ| ಕಿಶನ್ ರಾವ್ ಅವರು ವೈದ್ಯಕೀಯದ ಎಂಎಸ್(ಜನರಲ್ ಸರ್ಜರಿ)ನ್ನು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿ ತ್ರಿಪುರ ರಾಜ್ಯದ ಅಗರ್ತಲ ಸರಕಾರಿ ವೈದ್ಯಕೀಯ ಕಾಲೇಜಿಗೆ ಹಾಗೂ ತ್ರಿಪುರ ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದು ತ್ರಿಪುರಾ ವೈದ್ಯಕೀಯ ವಿಶ್ವವಿದ್ಯಾನಿಲಯದಿಂದ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ.
ಇವರು ಬಾಳಿಲದ ನಿವಾಸಿಯಾದ ರಾಮಚಂದ್ರ ರಾವ್ ಹಾಗೂ ವೀಣಾ ಬಾಳಿಲ ದಂಪತಿಯ ಸುಪುತ್ರ.
ಡಾ| ಕಿಶನ್ ಅವರು ಸ್ನಾತಕೋತ್ತರ ಪದವಿ ಅಧ್ಯಯನ ಸಂದರ್ಭದಲ್ಲಿಯೇ ವೈದ್ಯಕೀಯ ವಿದ್ಯಾರ್ಥಿಗಳ ಸಮಗ್ರ ಅಧ್ಯಯನಕ್ಕಾಗಿ “ಲ್ಯಾಂಗ್ವೇಜ್ ಆಫ್ ಹೆಲ್ತ್ ಕೇರ್” ಎಂಬ ಪುಸ್ತಕವನ್ನು ಪ್ರಕಟಿಸಿದ ಹಿರಿಮೆ ಇವರದ್ದು. ಈ ಪುಸ್ತಕವು ಬೆಂಗಾಲಿ, ಕನ್ನಡ ಹಾಗು ತುಳು ಭಾಷೆಗಳಲ್ಲಿ ಅನುವಾದವಾಗಿದೆ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Congratulations Dr Kishan..