ದೇವಚಳ್ಳದಲ್ಲಿ‌ ಸ್ವಚ್ಛತಾ ಕಾರ್ಯಕ್ರಮ 

October 3, 2019
2:19 PM

ದೇವಚಳ್ಳ: ದೇವಚಳ್ಳ ಗ್ರಾಮ ಪಂಚಾಯತ್, ಶ್ರೀ ವಿಷ್ಣು ಯುವಕ ಮಂಡಲ, ಶಾಲಾ ಪೋಷಕರು ಹಾಗೂ ಸ್ಥಳೀಯರ ಆಶ್ರಯದಲ್ಲಿ ಮಾವಿನಕಟ್ಟೆಯಿಂದ ಅಚ್ರಪ್ಪಾಡಿವರೆಗೆ “ಸ್ವಚ್ಛತಾ ಕಾರ್ಯಕ್ರಮ” ಹಮ್ಮಿಕೊಳ್ಳಲಾಗಿತ್ತು.

ನಂತರ ಅಚ್ರಪ್ಪಾಡಿ ಶಾಲೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಸಭಾಧ್ಯಕ್ಷರಾಗಿ ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಮುಂಡೋಡಿ,ದೇವಾಚಳ್ಳ ಗ್ರಾಮ ಪಂಚಾಯತ್ ಕಾರ್ಯದರ್ಶಿ ಗುರುಪ್ರಸಾದ್, ಸರ್ವ ಸದಸ್ಯರು, ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗ ಶ್ರೀ ವಿಷ್ಣು ಯುವಕ ಮಂಡಲ ಕಾರ್ಯದರ್ಶಿ ಅಖಿಲ್ ಅಚ್ರಪ್ಪಾಡಿ ಹಾಗೂ ಅಚ್ರಪ್ಪಾಡಿ ಅಂಗನವಾಡಿ ಕಾರ್ಯಕರ್ತೆ ಸುಂದರಿ ಉಪಸ್ಥಿತರಿದ್ದರು.

ಈ ಸಂದರ್ಭ  ಶಾಲಾ ಮಕ್ಕಳಿಂದ ಭಾಷಣ ನಡೆಯಿತು. ದಿವಾಕರ ಮುಂಡೋಡಿ ಇವರಿಂದ ಪ್ರತಿಜ್ಞಾ ವಿಧಿ ವಾಚನ, ಗಾಂಧಿ ಜಯಂತಿ ಸ್ಮರಣಾರ್ಥ ಆಯೋಜಿಸಿದ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ನೀಡಲಾಯಿತು.

ಅಚ್ರಪ್ಪಾಡಿ ಅಂಗನವಾಡಿ ಕಾರ್ಯಕರ್ತೆ ಸುಂದರಿ ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳ ಗುರಿ ಹಾಗೂ ಉದ್ದೇಶದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ನಿರೂಪಣೆ ಮತ್ತು ಸ್ವಾಗತ ಶ್ವೇತಾ ಹಾಗೂ ಸವಿತಾ ಧನ್ಯವಾದ ಗೈದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ಮಾರುಕಟ್ಟೆ ಜಿಗಿತ | ಮಂಗಳೂರು ಹೊಸ ಚಾಲಿ ₹500 ದಾಟಿತು – ಏಪ್ರಿಲ್‌ನಲ್ಲಿ ಮತ್ತಷ್ಟು ಏರಿಕೆ ಸೂಚನೆ!
April 3, 2026
11:59 AM
by: ದ ರೂರಲ್ ಮಿರರ್.ಕಾಂ
ರಸ್ತೆ ಬದಿ ಕಸ ಎಸೆದ್ರೆ ಜಾಗ್ರತೆ..! ದಂಡ ಕೊಡ್ಲಿಲ್ಲ ಅಂದ್ರೆ FIR ಫಿಕ್ಸ್..!
April 3, 2026
8:00 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 02-04-2026 | ಕರಾವಳಿಯಲ್ಲಿ ಮಳೆ ಅನಿಶ್ಚಿತತೆ, ಒಳನಾಡಿನಲ್ಲಿ ಬಿಸಿಲು
April 2, 2026
1:52 PM
by: ಸಾಯಿಶೇಖರ್ ಕರಿಕಳ
ಮಂಗಳೂರು ಅಡಿಕೆ ಮಾರುಕಟ್ಟೆ | ಸ್ಥಿರತೆಯಿಂದ ಏರಿಕೆಯತ್ತ ಮುಖ ಮಾಡಿದ ಧಾರಣೆ
April 2, 2026
6:56 AM
by: ಅರುಣ್‌ ಕುಮಾರ್ ಕಾಂಚೋಡು

You cannot copy content of this page - Copyright -The Rural Mirror