ಅಡಿಕೆ ಮಾರುಕಟ್ಟೆ ಜಿಗಿತ | ಮಂಗಳೂರು ಹೊಸ ಚಾಲಿ ₹500 ದಾಟಿತು – ಏಪ್ರಿಲ್‌ನಲ್ಲಿ ಮತ್ತಷ್ಟು ಏರಿಕೆ ಸೂಚನೆ!

April 3, 2026
11:59 AM
ಮಂಗಳೂರು ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ₹500 ಮತ್ತು ಹಳೆ ಅಡಿಕೆ ₹555 ತಲುಪಿದೆ. ಏಪ್ರಿಲ್ ತಿಂಗಳಲ್ಲಿ ಇನ್ನಷ್ಟು ದರ ಏರಿಕೆ ಸಾಧ್ಯತೆ ಇದೆ.

ಮಂಗಳೂರು ಅಡಿಕೆ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಸ್ಪಷ್ಟವಾದ ಏರಿಕೆ ಕಂಡುಬಂದಿದ್ದು, ಚಾಲಿ ಅಡಿಕೆ ದರವು ಏರಿಕೆ ಕಂಡಿದೆ. ಇಂದಿನ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಧಾರಣೆ ಅಧಿಕೃತವಾಗಿ ₹500 ತಲುಪಿದೆ.

ಕ್ಯಾಂಪ್ಕೋ ಅಡಿಕೆ ಮಾರುಕಟ್ಟೆಯ ಧಾರಣೆಗಳನ್ನು ಪರಿಶೀಲಿಸಿದರೆ, ಮಾರುಕಟ್ಟೆ ಈಗ ಸ್ಥಿರತೆಯಿಂದ ಏರಿಕೆಯತ್ತ ಸಾಗುತ್ತಿರುವುದು ಸ್ಪಷ್ಟವಾಗಿದೆ. ಇಂದಿನ ದರಗಳಲ್ಲಿ ಸಣ್ಣ ಪ್ರಮಾಣದ ಏರಿಕೆ ಕಂಡುಬಂದಿದ್ದು, ವಿಶೇಷವಾಗಿ ಉತ್ತಮ ಗುಣಮಟ್ಟದ ಅಡಿಕೆಗಳಿಗೆ ಬೇಡಿಕೆ ಹೆಚ್ಚುತ್ತಿರುವುದು ಗಮನಾರ್ಹವಾಗಿದೆ.  ಇದೇ ವೇಳೆ, ಹಳೆ ಅಡಿಕೆ ಧಾರಣೆಯಲ್ಲೂ ಏರಿಕೆ ಕಂಡುಬಂದಿದ್ದು ₹555 ಮಟ್ಟ ತಲುಪಿದೆ. ಇದು ಮಾರುಕಟ್ಟೆಯಲ್ಲಿ ಗುಣಮಟ್ಟದ ಅಡಿಕೆಗಳ ಬೇಡಿಕೆ ನಿರಂತರವಾಗಿರುವುದನ್ನು ಸೂಚಿಸುತ್ತದೆ.

ಕಳೆದ ವರ್ಷದ ಏಪ್ರಿಲ್ ಮೊದಲ ವಾರದ ಧಾರಣೆಯೊಂದಿಗೆ ಹೋಲಿಸಿದರೆ , ಹೊಸ ಅಡಿಕೆ: ₹430–₹440, ಹಳೆ ಅಡಿಕೆ: ₹485–₹495. ಆದರೆ ಈ ಬಾರಿ, ಅಡಿಕೆ ಬೆಳೆ ಪ್ರಮಾಣ ಕಡಿಮೆಯಾಗಿರುವುದು ಸೇರಿದಂತೆ ಇತರ ಕಾರಣಗಳಿಂದಾಗಿ, ಏಪ್ರಿಲ್ ಆರಂಭದಲ್ಲೇ ಹೊಸ ಅಡಿಕೆ ₹500 ದಾಟಿರುವುದು ಪ್ರಮುಖ ಬೆಳವಣಿಗೆ ಎಂದು ಪರಿಗಣಿಸಲಾಗಿದೆ.

ಮಾರುಕಟ್ಟೆ ವಿಶ್ಲೇಷಣೆ ಪ್ರಕಾರ  ಪ್ರಸ್ತುತ ಟ್ರೆಂಡ್ ಇದೆ. ಇದಕ್ಕೆ ಮುಖ್ಯ ಕಾರಣಗಳು ಅಡಿಕೆ ಉತ್ಪಾದನೆ ಕಡಿಮೆ, ಉತ್ತಮ ಗುಣಮಟ್ಟದ ಅಡಿಕೆಗೆ ಹೆಚ್ಚಿನ ಬೇಡಿಕೆ,  ಮಾರುಕಟ್ಟೆಯಲ್ಲಿ ಅಡಿಕೆ ಲಭ್ಯತೆ ಕಡಿಮೆಯಾಗಿದೆ. ಈಗಿನ ಟ್ರೆಂಡ್‌ ಪ್ರಕಾರ ಏಪ್ರಿಲ್ ಅಂತ್ಯ ಮೇ ಮಧ್ಯದ ವೇಳೆಗೆ ಹೊಸ ಅಡಿಕೆ: ₹520–₹550 ತಲುಪುವ ಸಾಧ್ಯತೆ ಇದ್ದು ಹಳೆ ಅಡಿಕೆ ₹570+ ಮಟ್ಟ ತಲುಪುವ ನಿರೀಕ್ಷೆಇದೆ.  ಮಾರುಕಟ್ಟೆ ಹೀಗೆ ಮುಂದುವರಿದರೆ, ಮುಂದಿನ ವಾರಗಳಲ್ಲಿ ಅಡಿಕೆ ದರಗಳಲ್ಲಿ ಇನ್ನಷ್ಟು ಏರಿಕೆ ಕಾಣಬಹುದು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Arecanut prices in Mangalore market have shown a clear upward trend, with new arecanut officially reaching ₹500 and old arecanut touching ₹555. Compared to early April last year, prices have risen significantly due to lower crop yield and increased demand. The market is currently moving from stability to a bullish phase, and further price rise is expected through April.

 

View this post on Instagram

 

A post shared by Rural Mirror (@theruralmirror)

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಗುಟ್ಕಾ–ಪಾನ್‌ಮಸಾಲಾ ನಿಷೇಧ : ಅಡಿಕೆ ಬೆಳೆಗಾರನ ಮುಂದಿರುವ ನಿಜವಾದ ಪ್ರಶ್ನೆ ಏನು?
August 14, 2026
7:14 AM
by: ಮಹೇಶ್ ಪುಚ್ಚಪ್ಪಾಡಿ
ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ
August 13, 2026
2:01 PM
by: ಸಾಯಿಶೇಖರ್ ಕರಿಕಳ
ಎಲ್ ನಿನೊ ಪರಿಣಾಮ 15 ರಾಜ್ಯಗಳ 342 ಜಿಲ್ಲೆಗಳಲ್ಲಿ ಮಳೆ ಕೊರತೆ
August 13, 2026
6:59 AM
by: ದ ರೂರಲ್ ಮಿರರ್.ಕಾಂ
ಇನ್ನೊಂದು ಮನೆಯ ಸಮಸ್ಯೆ ನಮಗೆ ಸುದ್ದಿ ; ನಮ್ಮ ಮನೆಯ ನೋವು ಮಾತ್ರ ನಮಗೆ ಸಂಕಟ..! ಯಾಕೆ ?
August 13, 2026
6:50 AM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror