ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಹತ್ತನಾವಧಿ (ಪತ್ತನಾಜೆ) ಉತ್ಸವವು ಸಂಪನ್ನಗೊಂಡಿತು.
ಶ್ರೀ ಧರ್ಮಸ್ಥಳ ಯಕ್ಷಗಾನ ಮೇಳದ ಪ್ರಸಕ್ತ ಸಾಲಿನ ತಿರುಗಾಟ ಕೊನೆಗೊಂಡು ಮೇ 25 ರಂದು ಸಂಜೆ ಮೇಳದ ಶ್ರೀ ಮಹಾಗಣಪತಿಯನ್ನು ಶ್ರೀ ಮಂಜುಕೃಪದಿಂದ ವೈಭವದ ಮೆರವಣಿಗೆಯಲ್ಲಿ ಕ್ಷೇತ್ರಕ್ಕೆ ಬರಮಾಡಿಕೊಳ್ಳಲಾಯಿತು. ಕೇರಳದ ಚೆಂಡೆಮೇಳ, ವಾದ್ಯ, ಶಂಖ. ಜಾಗಟೆ, ಕ್ಷೇತ್ರದ ಬಿರುದಾವಳಿಗಳು ಆನೆಗಳು, ಬಸವ, ಹೂವಿನ ಕೋಲು, ಮೆರವಣಿಗೆಯ ಶೋಭೆ ಹೆಚ್ಚಿಸಿತ್ತು. ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಮಹಾಗಣಪತಿ ಉತ್ಸವ ಸಾಗಿ ಛತ್ರ ಮಹಾಗಣಪತಿ ಸನ್ನಿಧಿಗೆ ಪ್ರವೇಶಿಸಿತು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹರ್ಷೇಂದ್ರ ಕುಮಾರ್, ಶ್ರೀಧಾಮ ಮಾಣಿಲದ ಮೋಹನದಾಸ ಸ್ವಾಮೀಜಿ, ಸುಪ್ರಿಯಾ ಹರ್ಷೇಂದ್ರ ಕುಮಾರ್, ಶ್ರದ್ಧಾ ಅಮಿತ್ ಮತ್ತು ಕ್ಷೇತ್ರದ ಸಿಬ್ಬಂದಿ ವರ್ಗ ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.
ರಾತ್ರಿ ಕ್ಷೇತ್ರದಲ್ಲಿ ವಿಶೇಷ ಉತ್ಸವದೊಂದಿಗೆ ವಾರ್ಷಿಕ ಉತ್ಸವ ವಿಶೇಷ ಸೇವೆಗಳು ಸಮಾಪನಗೊಂಡವು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel