ಧಾರ್ಮಿಕ ಕೇಂದ್ರಗಳ ಮುಖ್ಯಸ್ಥರ ಸಭೆ : ಭದ್ರತೆಗೆ ಪೊಲೀಸರಿಂದ ಸೂಚನೆ

Advertisement

ಬೆಳ್ಳಾರೆ: ಬೆಳ್ಳಾರೆ ಪೊಲೀಸ್ ಠಾಣೆ ವತಿಯಿಂದ ವ್ಯಾಪ್ತಿಗೊಳಪಡುವ ದೇವಸ್ಥಾನಗಳು, ಮಸೀದಿ, ಚರ್ಚ್‍ಗಳ ಧರ್ಮದರ್ಶಿಗಳೊಂದಿಗೆ ಸಭೆ  ರಾಜೀವ್‍ಗಾಂಧಿ ಸಭಾಭವನದಲ್ಲಿ ನಡೆಯಿತು.
ಠಾಣೆಯ ಸಬ್‍ಇನ್ಸ್ಪೆಕ್ಟರ್ ಡಿ.ಎನ್ಈ.ರಯ್ಯ ಮಾತನಾಡಿ, “ಪೊಲೀಸರೊಂದಿಗೆ ಎಲ್ಲರ ಸಹಕಾರ ಅಗತ್ಯವಿದೆ . ದೇವಸ್ಥಾನ, ಮಸೀದಿ, ಚರ್ಚ್ ಮೇಲಿನ ಭದ್ರತೆ ಬಗ್ಗೆ ಪೊಲೀಸ್ ಇಲಾಖೆಗೆ ಕಾಳಜಿ ಇದೆ  ಎಂದರು.
ಸಭೆಯಲ್ಲಿ ಧಾರ್ಮಿಕ ಕೇಂದ್ರಗಳಾದ ದೇವಸ್ಥಾನ, ಮಸೀದಿ,ಚರ್ಚ್‍ಗಳಲ್ಲಿ ಗುಣಮಟ್ಟದ ಸಿಸಿಟಿವಿ ಅಳವಡಿಸುವ ಕುರಿತು, ಧಾರ್ಮಿಕ ಕೇಂದ್ರಗಳಿಗೆ ಆಗಮಿಸುವ ಅಪರಿಚಿತ ವ್ಯಕ್ತಿಗಳ ಮೇಲೆ ತೀವ್ರ ನಿಗಾವ ಇಡಲು ಹಾಗು ಮುಂಜಾಗ್ರತಾ ಕ್ರಮಗಳ ಕುರಿತು ಸಬ್‍ಇನ್ಸ್ಪೆಕ್ಟರ್ ಡಿ.ಎನ್ ಈರಯ್ಯ ಮಾಹಿತಿ ನೀಡಿದರು.

Advertisement

ಬೆಳ್ಳಾರೆ ಹಾಗು ಆಸುಪಾಸಿನ ಧಾರ್ಮಿಕ ಕೇಂದ್ರಗಳಿಗೆ ತೊಂದರೆಗಳು ಉಂಟಾದ ಸಮಯದಲ್ಲಿ ಅಥವಾ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಯಾವುದೇ ಅಂಜಿಕೆಯಿಲ್ಲದೆ ಪೊಲೀಸರಿಗೆ ಮಾಹಿತಿ ನೀಡಲು ಇದೇ ವೇಳೆ ಮನವಿ ಮಾಡಲಾಯಿತು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಧಾರ್ಮಿಕ ಕೇಂದ್ರಗಳ ಮುಖ್ಯಸ್ಥರ ಸಭೆ : ಭದ್ರತೆಗೆ ಪೊಲೀಸರಿಂದ ಸೂಚನೆ"

Leave a comment

Your email address will not be published.


*