ನಂದಿನಿ ಹಾಲು ಮತ್ತು ಮೊಸರಿನ ದರ ಪರಿಷ್ಕರಣೆ

February 1, 2020
6:56 AM

ಮಂಗಳೂರು : ಗ್ರಾಮೀಣ ಪ್ರದೇಶದಲ್ಲಿ ಹಾಲಿನ ಉತ್ಪಾದನೆಗೆ ಮೇವಿನ ಕೊರೆತೆ , ರಾಸುಗಳ ಸಾಕಾಣಿಕೆಗೆ ಬಳಸುವ ಪಶು ಆಹಾರದ ಬೆಲೆ, ಸಾಗಾಣಿಕೆ ಮತ್ತು ಸಂಸ್ಕರಣೆ/ಪ್ಯಾಕಿಂಗ್ ವೆಚ್ಚ ದುಬಾರಿ, ನಿರ್ವಹಣಾ ವೆಚ್ಚ ಹೆಚ್ಚಾಗಿರುವುದರಿಂದ ಹಾಗೂ ಹಾಲಿನ ಸಂಗ್ರಹಣೆ ಕಡೆಮೆಯಾಗಿರುವ ನಿಟ್ಟಿನಲ್ಲಿ ಹಾಲಿನ ಉತ್ಪಾದನೆಗೆ ಪ್ರೋತ್ಸಾಹಿಸಲು ನಂದಿನಿ ಹಾಲಿನ ಮಾರುಕಟ್ಟೆ ದರವನ್ನು ಹೆಚ್ಚಿಸಿ, ರೈತರಿಗೆ ಉತ್ತಮ ದರ ನೀಡುವ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರ ಹಾಗೂ ಕರ್ನಾಟಕ ಸಹಕಾರಿ ಹಾಲು ಮಹಾಮಂಡಳಿ ಆದೇಶದಂತೆ ರಾಜ್ಯಾದಾದ್ಯಂತ ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ಬೆಲೆಯನ್ನು ಪರಿಷ್ಕರಿಸಲಾಗಿದೆ. ಅದರಂತೆ ಫೆಬ್ರವರಿ 1 ರಿಂದ  ಅನ್ವಯವಾಗುವಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಂದಿನಿ  ಹಾಲು ಮತ್ತು ಮೊಸರಿನ ಮಾರಾಟ ದರವನ್ನು ಈ ಕೆಳಕಂಡಂತೆ ಪರಿಷ್ಕಸಲಾಗಿದೆ ಎಂದು ದ.ಕ ಜಿಲ್ಲಾ ಹಾಲು ಒಕ್ಕೂಟದ  ಅಧ್ಯಕ್ಷ ರವಿರಾಜ ಹೆಗ್ಡೆ ಇವರ ಪ್ರಕಟಣೆ ತಿಳಿಸಿದೆ.

Advertisement

ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ನಂದಿನಿ ಹಾಲು ಮತ್ತು ಮೊಸರನ್ನು ನಂದಿನಿ ಡೀಲರುಗಳು ಗರಿಷ್ಟ ಮಾರಾಟ ದರಕ್ಕೆ ಮೀರದಂತೆ ಮಾರಾಟ ಮಾಡಿ. ಗ್ರಾಹಕರಿಗೆ ಉತ್ತಮ ಸೇವೆ ನೀಡಲು ತಿಳಿಸಲಾಗಿದೆ.

ಪರಿಷ್ಕರಿತ ದರದ ವಿವರ ಇಂತಿವೆ:

ನಂದಿನಿ ಟೋನ್ಡ್ ಹಾಲು (500 ಮಿ.ಲೀ) ಹಳೆಯ ದರ ರೂ. 18  ಪರಿಷ್ಕೃತ ದರ ರೂ. 19,

ನಂದಿನಿ ಟೋನ್ಡ್ ಹಾಲು (1000 ಮಿ.ಲೀ) ಹಳೆಯ ದರ ರೂ.35, ಪರಿಷ್ಕೃತ  ದರ  ರೂ. 37,

Advertisement

ನಂದಿನಿ ಹೋಮೊಜಿನೈಸ್ಡ್ ಹಸುವಿನ ಹಾಲು (500 ಮಿ.ಲೀ) ಹಳೆಯ ದರ ರೂ. 20, ಪರಿಷ್ಕೃತ  ರೂ. 21,

ನಂದಿನಿ ಟೋನ್ಡ್ ಹಾಲು (6 ಲೀ. ಜಂಬೋ) ಹಳೆಯ ದರ  ರೂ. 234, ಪರಿಷ್ಕೃತ ದರ ರೂ. 249 ರೂ,

ನಂದಿನಿ ಶುಭಂ ಹಾಲು (500 ಮಿ.ಲೀ) ಹಳೆಯ ದರ ರೂ.21  ಪರಿಷ್ಕೃತ ದರ ರೂ. 22,

ನಂದಿನಿ ಸಮೃದ್ಧಿ ಹಾಲು (500 ಮಿ.ಲೀ) ಹಳೆಯ ದರ ರೂ. 23  ಪರಿಷ್ಕೃತ ದರ ರೂ. 24,

ಮೊಸರು (200 ಗ್ರಾಂ) ಹಳೆಯ ದರ ರೂ. 11  ಪರಿಷ್ಕೃತ ದರ ರೂ. 12 ,

Advertisement

ಮೊಸರು (415 ಗ್ರಾಂ) ಹಳೆಯ ದರ ರೂ. 20 ರೂ ಪರಿಷ್ಕೃತ ದರ ರೂ. 21 ,

ಮೊಸರು (1 ಕೆಜಿ) ಹಳೆಯ ದರ ರೂ. 43  ಪರಿಷ್ಕೃತ ದರ ರೂ. 45,

ಮೊಸರು (6 ಕೆಜಿ ಜಂಬೋ) ಹಳೆಯ ದರ ರೂ.  252  ಪರಿಷ್ಕೃತ ದರ ರೂ.  267 ಆಗಿದೆ.

ಒಕ್ಕೂಟದಲ್ಲಿ ಹಳೆಯ ದರಗಳು ಮುದ್ರಿತವಾಗಿರುವ ಪೌಚ್ ಫಿಲಂ ದಾಸ್ತಾನು ಮುಗಿಯುವವರೆಗೆ ಹಳೆಯ ದರಗಳು ಮುದ್ರಿತವಾಗಿರುವ ಪ್ಯಾಕೆಟ್‍ಗಳಲ್ಲಿ ನಂದಿನಿ ಹಾಲು ಮತ್ತು ಮೊಸರುನ್ನು ಪ್ಯಾಕ್ ಮಾಡಿ ಸರಬರಾಜು ಮಾಡಲಾಗುವುದು. ಎಲ್ಲಾ ಗ್ರಾಹಕರು ಹಾಗೂ ನಂದಿನಿ ಹಾಲಿನ ಅಧಿಕೃತ ಡೀಲರುಗಳುಪರಿಷ್ಕೃತ ದರದಲ್ಲಿಯೇ ವ್ಯವಹರಿಸಿ ಒಕ್ಕೂಟದೊಂದಿಗೆ ಸಹಕರಿಸಲು ದ.ಕ ಜಿಲ್ಲಾ ಹಾಲು ಒಕ್ಕೂಟದ  ಅಧ್ಯಕ್ಷ ರವಿರಾಜ ಹೆಗ್ಡೆ ಇವರ ಪ್ರಕಟಣೆ ತಿಳಿಸಿದೆ.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಕ್ಕಳ ಪುಟ | ನಿಮ್ಮ ಚಿತ್ರ -ನಮ್ಮ ಬೆಳಕು | ಅಯಂಶಿ ಕೆ.ಎಚ್ , ಬಹರೇನ್
July 5, 2025
8:00 AM
by: ದ ರೂರಲ್ ಮಿರರ್.ಕಾಂ
ನಿಮ್ಮ ಚಿತ್ರ – ನಮ್ಮ ಬೆಳಕು | ಅನಿರುದ್ಧ ಪಿ |
June 30, 2025
5:26 PM
by: ದ ರೂರಲ್ ಮಿರರ್.ಕಾಂ
6,100 ಕೋಟಿ ಮೊತ್ತದ ಯೋಜನೆಗಳಿಗೆ ಪ್ರಧಾನಿ ಚಾಲನೆ | ದೇಶದಲ್ಲಿ ಅಭಿವೃದ್ಧಿ ಪರಿಕಲ್ಪನೆಗೆ ಹೊಸ ವೇಗ
October 21, 2024
7:26 PM
by: ದ ರೂರಲ್ ಮಿರರ್.ಕಾಂ
ನಕಲಿ ದಾಖಲೆ ಕೊಟ್ಟು ಪಡಿತರ ಚೀಟಿ ಮಾಡಿಸಿದರೆ ಜೋಕೆ : ರಾಜ್ಯದಲ್ಲಿ ಬರೋಬ್ಬರಿ 12 ಲಕ್ಷ ರೇಷನ್ ಕಾರ್ಡ್ ರದ್ದು : ಕಾರಣ ಏನು..?
August 2, 2024
2:13 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group