ಪುತ್ತೂರು: ನವ್ಯ ಕಾವ್ಯ ಕರ್ನಾಟಕದ ಮೊತ್ತ ಮೊದಲ, ಕನ್ನಡ ಕವಿತೆಗಳ ಪ್ರಕಟಣೆ ಮತ್ತು ಪ್ರಸಾರಕ್ಕಾಗಿಯೇ ನಿರ್ಮಿತವಾದ ಅಂತರ್ಜಾಲ ತಾಣ. ಈ ತಾಣದ ಮೂಲಕ ಕಾವ್ಯ ಲಹರಿ 2019 ಕವನ ಸ್ಪರ್ಧೆಯನ್ನು ಆಯೋಜಿಸಿದೆ.
ನವ್ಯ ಕಾವ್ಯ ಜಾಲತಾಣವು ಉದಯೋನ್ಮುಖ ಕನ್ನಡ ಕವಿ-ಕವಯಿತ್ರಿಗಳ ಪ್ರತಿಭಾ ಪ್ರದರ್ಶನಕ್ಕೆ ಮತ್ತು ಕಾವ್ಯಾಸಕ್ತರ ಮನೋರಂಜನೆಗೆ ತಕ್ಕುದಾದ ವೇದಿಕೆಯಾಗಿದ್ದು, ನವರಸಯುಕ್ತ ಕವನಗಳ ಭರಪೂರ ಆನಂದವನ್ನು ಪಡೆಯಬಹುದು. ಅಲ್ಲದೆ ನವ ಪೀಳಿಗೆಯಲ್ಲಿ ಕನ್ನಡ ಸಾಹಿತ್ಯದ ಕುರಿತಾಗಿ ಆಸಕ್ತಿಯನ್ನು ಚಿಗುರಿಸಿ, ಯುವಕ-ಯುವತಿಯರನ್ನು
ಕನ್ನಡದಲ್ಲಿ ಸೃಜನಶೀಲ ಕವನಗಳನ್ನು ಬರೆಯಲು ಪ್ರೇರೇಪಿಸಿ, ತನ್ಮೂಲಕ ಕನ್ನಡ ನುಡಿ ಮತ್ತು ಕನ್ನಡ ಸಾಹಿತ್ಯದ ಉಳಿವು-ಬೆಳವಿಗೆ ಅಳಿಲ ಸೇವೆಯನ್ನು ಸಲ್ಲಿಸುವ ಉದ್ದೇಶವೂ ಇದರ ಹಿಂದಿದೆ.
ನವ್ಯ ಕಾವ್ಯ ಜಾಲತಾಣವು ಈ ವರ್ಷವೂ ಕವನ ಸ್ಪರ್ಧೆಯನ್ನು ಆಯೋಜಿಸಿದೆ. ಸ್ಪರ್ಧೆಯ ವಿವರಗಳನ್ನು ಚಿತ್ರದಲ್ಲಿ ನೀಡಲಾಗಿದೆ. ಆಸಕ್ತರು ನೊಂದಣಿಯನ್ನು ಮಾಡಲು https://imjo.in/3P6bUe ಕೊಂಡಿಯನ್ನು ಉಪಯೋಗಿಸಿ. ಹೆಚ್ಚಿನ ವಿವರಗಳಿಗೆ +919164561755, ಅನೀಶ್ ಪಿ ವಿ ಇವರಿಗೆ ಕರೆ ಮಾಡಬಹುದು.
ಜಾಲತಾಣದ ವೀಕ್ಷಣಗೆ http://www.navyakavya.in ಭೇಟಿ ಕೊಡಬಹುದು.