ನಿಂತಿಕಲ್ಲು: ಎಸ್ಸೆಸ್ಸೆಫ್ ನಿಂತಿಕಲ್ಲು ಸೆಕ್ಟರ್ ಅಧೀನದಲ್ಲಿ ಕ್ಯಾಂಪಸ್ ವಿಂಗ್ ವತಿಯಿಂದ ಇರೇಸರ್ – ಕ್ಯಾಂಪಸ್ ಮೀಟ್ ಶನಿವಾರ ನಿಂತಿಕಲ್ಲಿನಲ್ಲಿ ನಡೆಯಿತು.
ಎಸ್ಸೆಸ್ಸೆಫ್ ನಿಂತಿಕಲ್ಲು ಸೆಕ್ಟರ್ ಅಧ್ಯಕ್ಷರಾದ ಜಬ್ಬಾರ್ ಹನೀಫಿ ಉದ್ಘಾಟಿಸಿದರು. ನಂತರ ಟಿ.ಎಂ ಅಬ್ದುರ್ರಹ್ಮಾನ್ ಸಖಾಫಿ ತಂಬಿನಮಕ್ಕಿ ಮೊದಲನೇ ಅವಧಿಯಲ್ಲಿ ಫಾತಿಹ ಎಂಬ ಸೂರತ್ ಅಲ್ – ಫಾತಿಹ ಪಾರಾಯಣ ಮಾಡುವುದರೊಂದಿಗೆ ಅದರ ಮಹತ್ವ ಮತ್ತು ಅರ್ಥವನ್ನು ಬಹಳ ಸವಿಸ್ತಾರವಾಗಿ ತಿಳಿಸಿದರು.
ಎರಡನೇ ಅವಧಿಯಲ್ಲಿ, ಡ್ರೀಮ್ಸ್ – ಜೀವನದ ಗುರಿ ಮತ್ತು ಉದ್ದೇಶಗಳ ಕುರಿತ ತರಬೇತಿಯನ್ನು ನಿಂತಿಕಲ್ಲು ಕ್ಯಾಂಪಸ್ ಕಾರ್ಯದರ್ಶಿ ರಹ್ಮಾನ್ ಎಣ್ಮೂರು ಅವರು ನಡೆಸಿದರು.
ನಂತರದ ಅವಧಿಯಲ್ಲಿ ಕ್ವಿಜ್ ರಂಝಾನ್ ಹಾಗೂ ಖುರ್’ಆನ್ ಕುರಿತ ರಸಪ್ರಶ್ನೆ ಸ್ಪರ್ಧೆಯನ್ನು ಸುಳ್ಯ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಖಲೀಲ್ ಝುಹ್ರಿ ನೆಕ್ಕಿಲ ಇವರು ನಡೆಸಿಕೊಟ್ಟರು.
ಉತ್ತಮ ತರಬೇತಿಗಳ ಮೂಲಕ ಈ ಕಾರ್ಯಕ್ರಮವು ವಿದ್ಯಾರ್ಥಿಗಳ ಮನಸ್ಸಲ್ಲಿ ಹೊಸ ಚೈತನ್ಯವನ್ನು ಮೂಡಿಸಿ, ಇಪ್ತಾರ್ ಕೂಟದ ಮೂಲಕ ಕಾರ್ಯಕ್ರಮವನ್ನು ಸಮಾಪ್ತಿಗೊಳಿಸಲಾಯಿತು.
ಕಾರ್ಯಕ್ರಮವನ್ನು ಎಸ್ಸೆಸ್ಸೆಫ್ ನಿಂತಿಕಲ್ಲು ಸೆಕ್ಟರ್ ಕಾರ್ಯದರ್ಶಿ ರಿಯಾಝ್ ನೆಕ್ಕಿಲ ಸ್ವಾಗತಿಸಿ ರೈಟ್ ಟೀಂ ಕಾರ್ಯಕರ್ತ ಶಿಹಾಬ್ ನೆಕ್ಕಿಲ ವಂದಿಸಿದರು.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ನಿಂತಿಕಲ್ಲಿನಲ್ಲಿ ಇರೇಸರ್ – ಕ್ಯಾಂಪಸ್ ಮೀಟ್"