ನಿಂತಿಕಲ್ಲು : ನಿಂತಿಕಲ್ಲು ಶ್ರೀ ವನದುರ್ಗಾ ದೇವಿ ಸಾನಿಧ್ಯದಲ್ಲಿ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮಕ್ಕೆ ಹಸಿರು ಹೊರೆಕಾಣಿಕೆ ಮೆರವಣಿಗೆಯ ಮೂಲಕ ಸಮರ್ಪಣೆಯಾಯಿತು.
ಐದು ತಂಡಗಳನ್ನು ಮೂಲಕ ಹಸಿರುವಾಣಿ ಸಂಗ್ರಹಣಾ ಅಭಿಯಾನ ನಡೆಸಲಾಗಿತ್ತು.ಭಕ್ತರು ತಾವು ಬೆಳೆದ ಅಡಿಕೆ, ಬಾಳೆಗೊನೆ, ತರಕಾರಿಗಳು, ಹಲಸು, ಮಾವು, ತೆಂಗಿನ ಕಾಯಿ,ಸೀಯಾಳ ಸೇರಿದಂತೆ ವಿವಿಧ ವಸ್ತುಗಳನ್ನು ಸಮರ್ಪಿಸಿದರು.
ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವಸಂತ ನಡುಬೈಲು, ಆಡಳಿತ ಮಂಡಳಿ ಅಧ್ಯಕ್ಷ ರೂಪರಾಜ ರೈ, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಅನೂಪ್ ಕುಮಾರ್ ಆಳ್ವ ಕಟ್ಟಬೀಡು, ಉಪಾಧ್ಯಕ್ಷರಾದ ಗಿರಿಧರ ರೈ ಪಜಂಬಿಲ, ದಯಾನಂದ ಗೌಡ ನಡ್ಕ ನಿಂತಿಕಲ್ಲು, ಕಾರ್ಯದರ್ಶಿ ಯೋಗಾನಂದ ಉಳೋಡಿ, ಕೋಶಾಧಿಕಾರಿ ಭಾಗೀರಥಿ ಮುರುಳ್ಯ ಸೇರಿದಂತೆ ಬ್ರಹ್ಮಕಲಶೋತ್ಸವ ಸಮಿತಿಯ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ನಿಂತಿಕಲ್ಲು: ಶ್ರೀ ವನದುರ್ಗಾ ದೇವಿ ಸಾನಿಧ್ಯಕ್ಕೆ ಹರಿದು ಬಂದ ಹಸಿರು ಕಾಣಿಕೆ"