ನಿಂತಿಕಲ್: ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿ ರಚನೆ

Advertisement

ನಿಂತಿಕಲ್ಲು: ನಿಂತಿಕಲ್ಲಿನ ಶ್ರೀ ವನದುರ್ಗಾ ದೇವಿ ಸಾನಿಧ್ಯದ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಮೇ.25 ಮತ್ತು 26ರಂದು ನಡೆಯಲಿದೆ. ಶ್ರೀ ಸಾನಿಧ್ಯದ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಸಮಿತಿಯು ಇತ್ತೀಚೆಗೆ ರಚಿಸಲಾಯಿತು.

Advertisement

ಆಡಳಿತ ಮಂಡಳಿ ಅಧ್ಯಕ್ಷ ರೂಪರಾಜ ರೈ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನೆರವೇರಿತು.ಸಮಿತಿಯ ಅಧ್ಯಕ್ಷರಾಗಿ ವಸಂತ ನಡುಬೈಲು ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ರಾಮಕೃಷ್ಣ ಶೆಟ್ಟಿ ಕಟ್ಟಬೀಡು ನೇಮಕಗೊಂಡಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ರೂಪರಾಜ್ ರೈ ಹಾಗೂ ಸಂಚಾಲಕರಾಗಿ ಅನೂಪ್ ಕುಮಾರ್ ಆಳ್ವ ಕಟ್ಟಬೀಡು ಆಯ್ಕೆಯಾಗಿದ್ದಾರೆ.
ಉಳಿದಂತೆ ಗಿರಿಧರ ರೈ ಪಜಂಬಿಲ, ದಯಾನಂದ ಗೌಡ ನಡ್ಕ ನಿಂತಿಕಲ್ಲು(ಉಪಾಧ್ಯಕ್ಷರು), ಯೋಗಾನಂದ ಉಳೋಡಿ(ಕಾರ್ಯದರ್ಶಿ), ಭಾಗೀರಥಿ ಮುರುಳ್ಯ(ಕೋಶಾಧಿಕಾರಿ), ಶ್ರೀನಾಥ್ ರೈ ಬಾಳಿಲ, ರಾಜಶೇಖರನ್ ಕೆ.ಕೆ, ಎಚ್.ವಸಂತ, ಪ್ರವೀಣ್ ಜಾಲ್ತಾರು, ಪುಷ್ಪಾವತಿ ಬಾಳಿಲ, ಕುಸುಮಾವತಿ ಕೆ.ಜಿ(ಸದಸ್ಯರು) ನೇಮಕಗೊಂಡರು. ಪ್ರಸನ್ನ.ಕೆ ಗುಂಡಿಮಜಲು(ಸ್ವಾಗತ), ಉಮೇಶ್ ರೈ ಮರುವಂಜ(ಆಮಂತ್ರಣ), ನಾರಾಯಣ ರೈ ಮರುವಂಜ(ಆರ್ಥಿಕ), ಸಚಿನ್ ಅರೆಂಬಿ(ಮಾಧ್ಯಮ ಮತ್ತು ಪ್ರಚಾರ), ದಿನೇಶ್ ಪಜಿಂಬಿಲ(ಆಹಾರ), ಕಾರ್ತಿಕ್ ರೈ ಕಲ್ಲೇರಿ(ಅಲಂಕಾರ), ದೇವಿಪ್ರಸಾದ್ ಎಣ್ಮೂರು(ವಾಹನ) ವಿವಿಧ ಸಮಿತಿಗಳ ಸಂಚಾಲಕರಾಗಿ ನೇಮಕಗೊಂಡರು.ವಿವಿಧ ಸಮಿತಿಗಳ ಸದಸ್ಯರನ್ನಾಗಿ ಎಣ್ಮೂರು, ಬಾಳಿಲ, ಮುಪ್ಪೇರ್ಯ, ಮುರುಳ್ಯ, ಎಡಮಮಗಲ, ಕಲ್ಮಡ್ಕ ಗ್ರಾಮಗಳ 152 ಸದಸ್ಯರನ್ನು ಆಯ್ಕೆ ಮಾಡಲಾಯಿತು.

Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ನಿಂತಿಕಲ್: ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿ ರಚನೆ"

Leave a comment

Your email address will not be published.


*