ನೀರಿನ ಕೊರತೆ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹೇಳಿದ್ದೇನು ….?

Advertisement

ಧರ್ಮಸ್ಥಳ : ರಾಜ್ಯದಲ್ಲೇ ಇಂದು ಬರದ ಲಕ್ಷಣ ಇದೆ. ಈ ವರ್ಷ ದ.ಕ ಜಿಲ್ಲೆಯಲ್ಲಿ ಭಾರೀ ನೀರಿನ ಸಮಸ್ಯೆಯಾಗಿದೆ. ಧರ್ಮಸ್ಥಳದಲ್ಲೂ ಈ ಸಮಸ್ಯೆ ಇದೆ. ಹೀಗೇ ಮುಂದುವರಿದರೆ ದೇವರ ಅಭಿಷೇಕಕ್ಕೂ ನೀರಿನ ಸಮಸ್ಯೆ ಕಾಡಬಹುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಆತಂಕ ವ್ಯಕ್ತಪಡಿಸಿದ್ದಾರೆ.

Advertisement

 

Advertisement
Advertisement

 

Advertisement

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನೀರಿಗೆ  ಬರದ ಹಿನ್ನೆಲೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮಾಧ್ಯಮದವರೊಂದಿಗೆ ಮಾತನಾಡಿದರು.

ಘಟ್ಟದ ಭಾಗದಿಂದ ನೀರು ಹರಿದು ಬರುವುದರಿಂದ ನೇತ್ರಾವತಿಯಲ್ಲಿ ನೀರು‌ ಹೆಚ್ಚಿರುತ್ತದೆ.  ಆದರೆ ಈ ಬಾರಿ ಮಳೆ ಸಾಕಷ್ಟಿದ್ದರೂ ನೇತ್ರಾವತಿಯಲ್ಲಿ  ನೀರು ಈಗ ಬತ್ತಿದೆ. ಈಗ ಹವಾಮಾನ ಇಲಾಖೆ ಇನ್ನೂ ಹತ್ತು ದಿನ ಮಳೆ ಇಲ್ಲ ಎಂದಿರುವುದರಿಂದ ಕ್ಷೇತ್ರ ದರ್ಶನ ಮುಂದೂಡಿ ಎಂದು ವಿನಂತಿ ಮಾಡುತ್ತೇವೆ ಎಂದರು.

Advertisement

ಈಗ ಕಿಂಡಿ ಅಣೆಕಟ್ಟು ಕಟ್ಟಿದ ಕಾರಣ ತೀರ್ಥ ಮತ್ತು ಅಭಿಷೇಕಕ್ಕೆ ನೀರಿದೆ. ಈಗ ಅಲ್ಲಿ ತೀರ್ಥ ಗುಂಡಿಯಲ್ಲೂ ನೀರು ಕಡಿಮೆ ಆಗುತ್ತಿದೆ. ಈ ಹಿಂದೆಯೂ ಈ ರೀತಿ ಆಗಿದೆ, ಇಷ್ಟು ತೀವ್ರವಾಗಿ ಆಗಿಲ್ಲ ಎಂದರು.

 

Advertisement

 

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ನೀರಿನ ಕೊರತೆ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹೇಳಿದ್ದೇನು ….?"

Leave a comment

Your email address will not be published.


*