ನ.ಪಂ.ಚುನಾವಣೆ : ಟೂರಿಸ್ಟ್ ವಾಹನ ಚಾಲಕರಿಂದ ಚುನಾವಣಾ ಬಹಿಷ್ಕಾರ

Advertisement

ಸುಳ್ಯ‌: ಸುಳ್ಯ ನಗರ ಪಂಚಾಯತ್ ಚುನಾವಣೆಗೆ ಒಂದು ದಿನ ಮಾತ್ರ ಬಾಕಿ ಉಳಿದಿರುವಂತೆ ನಗರದಲ್ಲಿ ಚುನಾವಣಾ ಬಹಿಷ್ಕಾರದ ಕೂಗು ಕೇಳಿ ಬಂದಿದೆ.ಸುಳ್ಯ ತಾಲೂಕು ಟೂರಿಸ್ಟ್ ಕಾರು, ವ್ಯಾನ್ ಚಾಲಕ -ಮಾಲಕರ ಸಂಘವು ನ.ಪಂ.ಚುನಾವಣೆ ಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದು ಬ್ಯಾನರ್ ಅಳವಡಿಸಿದ್ದಾರೆ.

Advertisement

ಟೂರಿಸ್ಟ್ ಕಾರು, ವ್ಯಾನ್ ಗಳಿಗೆ ತಂಗಲು ಸುಸಜ್ಜಿತ ನಿಲ್ದಾಣ ನಿರ್ಮಾಣ ಮಾಡದೇ ಇರುವುದನ್ನು ಪ್ರತಿಭಟಿಸಿ ಚುನಾವಣೆ ಬಹಿಷ್ಕಾರ ಮಾಡಲು ನಿರ್ಧರಿಸಲಾಗಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ. ನಿಲ್ದಾಣ ನಿರ್ಮಾಣಕ್ಕಾಗಿ ಹಲವು ವರ್ಷಗಳಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದ್ದರೂ ಇದುವರೆಗೂ ಯಾವುದೇ ಸ್ಪಂದನೆ ದೊರೆಯದ ಹಿನ್ನಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈಗ ಇರುವ ನಿಲ್ದಾಣವನ್ನು ಸುಸಜ್ಜಿತವಾಗಿ ಮಾಡಿ ಅದಕ್ಕೆ ನಾಮಫಲಕ ಅಳವಡಿಸಬೇಕು. ಖಾಸಗೀ ವಾಹನಗಳ ನಿಲುಗಡೆಗೆ ಅವಕಾಶ ನೀಡಬಾರದು. ನಗರದ ವಿವಿದೆಡೆ ಟೂರಿಸ್ಟ್ ವಾಹನಗಳಿಗೆ ತಂಗಲು ಸುಸಜ್ಜಿತ ವ್ಯವಸ್ಥೆ ಮಾಡಬೇಕು ಎಂಬುದು ನಮ್ಮ ಬೇಡಿಕೆ. ಈ ಬೇಡಿಕೆ ಈಡೇರದ ಕಾರಣ ಟೂರಿಸ್ಟ್ ಚಾಲಕ, ಮಾಲಕರು ಮತ್ತು ಅವರ ಕುಟುಂಬದವರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ ಎಂದು ಸಂಘದ ಪದಾಧಿಕಾರಿಗಳು ಸುಳ್ಯನ್ಯೂಸ್‌.ಕಾಂ ಗೆ ತಿಳಿಸಿದ್ದಾರೆ.

Advertisement
Advertisement

 

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ನ.ಪಂ.ಚುನಾವಣೆ : ಟೂರಿಸ್ಟ್ ವಾಹನ ಚಾಲಕರಿಂದ ಚುನಾವಣಾ ಬಹಿಷ್ಕಾರ"

Leave a comment

Your email address will not be published.


*