ನ.ಪಂ.ಚುನಾವಣೆ: ಬಂಡಾಯ “ಥಂಡಾಯ”ಕ್ಕೆ ಜಿಲ್ಲಾ ಮುಖಂಡರ ದಂಡು…!

Advertisement

ಸುಳ್ಯ: ನಗರ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಲ್ಲಿ ತಲೆ ಎತ್ತಿರುವ ಬಂಡಾಯ ಶಮನಕ್ಕೆ ಜಿಲ್ಲಾ ಮಟ್ಟದ ನಾಯಕರ ತಂಡ ಪ್ರಯತ್ನ ಆರಂಭಿಸಿದೆ.

Advertisement

ಬಿಜೆಪಿಯಲ್ಲಿ ಉಂಟಾಗಿರುವ ಭಿನ್ನಮತದ ಶಮನಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಸುಳ್ಯಕ್ಕೆ ಆಗಮಿಸಿ ಬಂಡಾಯವಾಗಿ ನಾಮಪತ್ರ ಸಲ್ಲಿಸಿದವರ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಬಿಜೆಪಿಗೆ 10ನೇ ವಾರ್ಡ್ ನಲ್ಲಿ ಉಂಟಾದ ಬಂಡಾಯದ ಬಿಸಿ ಬಂಡಾಯ ಅಭ್ಯರ್ಥಿಯ ನಾಮಪತ್ರ ತಿರಸ್ಕೃತವಾಗುವುದರೊಂದಿಗೆ ಶಮನಗೊಂಡಿದೆ. ಇಲ್ಲಿ ಪಕ್ಷೇತರನಾಗಿ ನಾಮಪತ್ರ ಸಲ್ಲಿಸಿದ್ದ ಸುನಿಲ್ ಕುಮಾರ್ ನಾಮಪತ್ರ ತಾಂತ್ರಿಕ ಕಾರಣಗಳಿಂದ ತಿರಸ್ಕೃತಗೊಂಡಿದ್ದು ಬಿಜೆಪಿ ನಿಟ್ಟುಸಿರು ಬಿಡುವಂತಾಗಿದೆ. 20ನೇ ವಾರ್ಡ್ ನಲ್ಲಿ ಮತ್ತು 19ನೇ ವಾರ್ಡ್ ನಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿ ಗಳಿಗೆ ಬಂಡಾಯವಾಗಿ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಇವರ ಜೊತೆ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಎಸ್.ಅಂಗಾರ ಶನಿವಾರ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ಸೋಮವಾರದ ವೇಳೆಗೆ ಎಲ್ಲಾ ಬಂಡಾಯವೂ ಶಮನಗೊಳ್ಳುವ ನಿರೀಕ್ಷೆ ಇದೆ ಎಂದು ಬಿಜೆಪಿ ನೇತಾರರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement
Advertisement

ಇನ್ನು ನಗರ ಪಂಚಾಯತ್ ಆಡಳಿತ ಮರಳಿ ಪಡೆಯಲು ಹವಣಿಸುತ್ತಿರುವ ಕಾಂಗ್ರೆಸ್ ಗೆ ಮೂರು ವಾರ್ಡ್ ಗಳಲ್ಲಿ ಉಂಟಾಗಿರುವ ಬಂಡಾಯ ನುಂಗಲಾರದ ತುತ್ತಾಗಿದೆ. ಇದರ ಶಮನಕ್ಕೆ ಜಿಲ್ಲಾ ಮುಖಂಡರು ಆಗಮಿಸಿ ಬಂಡಾಯ ಅಭ್ಯರ್ಥಿಗಳ ಜೊತೆ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಈ ಮಧ್ಯೆ ಬೋರುಗುಡ್ಡೆ ವಾರ್ಡ್ ನಲ್ಲಿ ಆರ್.ಕೆ.ಮಹಮ್ಮದ್ ಅವರಿಗೆ ಟಿಕೆಟ್ ನೀಡದಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ಕಾಂಗ್ರೆಸ್ ನ ಒಂದು ಗುಂಪು ಪ್ರತ್ಯೇಕ ಸಭೆ ನಡೆಸಿ ತಮ್ಮ ನಿಲುವನ್ನು ಘೋಷಣೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ನ.ಪಂ.ಚುನಾವಣೆ: ಬಂಡಾಯ “ಥಂಡಾಯ”ಕ್ಕೆ ಜಿಲ್ಲಾ ಮುಖಂಡರ ದಂಡು…!"

Leave a comment

Your email address will not be published.


*