ಸುಳ್ಯ: ಸುಳ್ಯ ನಗರ ಪಂಚಾಯತ್ ಚುನಾವಣೆಯ ಮೊದಲ ಎರಡು ಗಂಟೆಯಲ್ಲಿ ಶೇ. 15 ರಷ್ಟು ಮತದಾನ ದಾಖಲಾಗಿದೆ. ಬೆಳಿಗ್ಗೆ 7 ಗಂಟೆಗೆ ಆರಂಭಗೊಂಡ ಮತದಾನದಲ್ಲಿ ಕೆಲವು ಮತಗಟ್ಟೆಗಳಲ್ಲಿ ಉದ್ದದ ಸರತಿ ಸಾಲು ಇದ್ದರೆ ಇನ್ನು ಕೆಲವು ಬೂತ್ ಗಳಲ್ಲಿ ನಿಧಾನಗತಿಯ ಮತದಾನ ನಡೆಯುತ್ತಿತ್ತು. ವಿವಿ ಪ್ಯಾಟ್ ಬಳಕೆ ಇಲ್ಲದ ಕಾರಣ ಮತದಾನ ಪ್ರಕ್ರಿಯೆ ವೇಗವಾಗಿ ನಡೆಯುತಿದೆ. 14ನೇ ವಾರ್ಡ್ ಕಲ್ಲುಮುಟ್ಲು, ನಾಲ್ಕನೇ ವಾರ್ಡ್ ಶಾಂತಿನಗರ ಮತಗಟ್ಟೆಗಳಲ್ಲಿ ಬೆಳಗ್ಗೆ ಉದ್ದನೆಯ ಸರತಿ ಸಾಲು ಕಂಡು ಬಂತು. ಮತದಾನ ಸುಗಮವಾಗಿ ಸಾಗುತ್ತಿದ್ದು ಯಾವುದೇ ಗೊಂದಲ, ಅಹಿತಕರ ಘಟನೆ ವರದಿಯಾಗಿಲ್ಲ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement