ಪಂಜ:ಶ್ರೀ ಶಾರದಾಂಬಾ ಭಜನಾ ಮಂಡಳಿ ಪಂಜ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇದರ ಜಂಟಿ ಆಶ್ರಯದಲ್ಲಿ 9ನೇ ವರುಷದ ಉಚಿತ ಮಕ್ಕಳ ಭಜನಾ ತರಬೇತಿ ಹಾಗೂ ವ್ಯಕ್ತಿತ್ವ ವಿಕಸನ ಶಿಬಿರವು ಇತ್ತೀಚೆಗೆ ಉದ್ಘಾಟನೆಗೊಂಡಿತು.
ಶಿಬಿರವನ್ನು ತೊಂಡಚ್ಚನ್ ಇಂಡಸ್ಟ್ರಿಸ್ ಮಾಲಕ ಮನು ಎಂ ಉದ್ಘಾಟಿಸಿದರು. ಶ್ರೀ ಶಾರದಾಂಬಾ ಭಜನಾ ಮಂಡಳಿ ಉಪಾಧ್ಯಕ್ಷ ಪರಮೇಶ್ವರ ಬಿಳಿಮಲೆ ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಜುನಾಥೇಶ್ವರ ಭಜನಾ ಮಂಡಳಿ ಅಧ್ಯಕ್ಷ ವಿಶ್ವನಾಥ ರೈ ಅರ್ಗುಡಿ, ಆರಾಧನಾ ಸಮಿತಿ ಅಧ್ಯಕ್ಷ ಬಾಲಕೃಷ್ಣ ಗೌಡ ಕುದ್ವ, , ಪಂಜ ವಲಯದ ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ವಲಯ ಮೇಲ್ವಿಚಾರಕಿ ಭಾಗೀರಥಿ, ಕೂತ್ಕುಂಜ ಒಕ್ಕೂಟದ ಅಧ್ಯಕ್ಷ , ವಿಶ್ವನಾಥ ಸಂಪ, ವನಿತಾ ಸಮಾಜದ ಕಾರ್ಯದರ್ಶಿ ಹೇಮಲತಾ ಜನಾರ್ಧನ, ತರಬೇತುದಾರರಾದ ನಳಿನಿ ವಿ ಆಚಾರ್ಯ, ಶೃದ್ಧಾಲಕ್ಷ್ಮೀ ಕೆಮ್ಮೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಲೋಕೇಶ್ ಬರೆಮೇಲು ಸ್ವಾಗತಿಸಿದರು.ತೀರ್ಥಾನಂದ ಕೊಡೆಂಕರಿ ನಿರೂಪಿಸಿದರು. ಜಗದೀಶ್ ಮಠ ವಂದಿಸಿದರು.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಪಂಜ: ಮಕ್ಕಳ ಭಜನಾ ತರಬೇತಿ ಶಿಬಿರ ಉದ್ಘಾಟನೆ"