ಪಯಸ್ವಿನಿ ನದಿಯ ಮಂಜುಳ ನಿನಾದದಲ್ಲಿ ಮೊಳಗುತ್ತಿದೆ ವೇದದ ಮಂಗಲ ಘೋಷ….!

July 29, 2019
8:00 AM

ಸುಳ್ಯದ ಅರಂಬೂರಿನಲ್ಲಿ ನಿರಂತರವಾಗಿ ವೇದ ಘೋಷ ಮೊಳಗುತ್ತಿದೆ. ಒಂದು ಕಡೆ ಪಯಸ್ವಿನಿ ನದಿ ಹರಿಯಲು ಜುಳು ಜುಳು ಸದ್ದು ಕೇಳಿದರೆ ಈ ಕಡೆ ವೇದ ಘೋಷ ಕೇಳುತ್ತದೆ. ಇಂತಹದ್ದೊಂದು ವೇದ ಶಿಕ್ಷಣ ನೀಡುವ ಸಂಸ್ಥೆಯ ಸುತ್ತ ಇಂದಿನ ಫೋಕಸ್…

Advertisement
Advertisement

 

ಸುಳ್ಯ: ಭಾರತದ ಭವ್ಯ ಸಂಸ್ಕೃತಿಯ ಹಿರಿಮೆಯನ್ನು ಪ್ರಪಂಚಕ್ಕೆ ಸಾರಿದ ವೇದಗಳು ಹಾಗೂ ಸಂಸ್ಕೃತ ಭಾಷೆ ಅಧ್ಯಯನ ನಡೆಸುವವರ ಸಂಖ್ಯೆ ದಿನೇ ದಿನೇ ಕ್ಷೀಣವಾಗುತ್ತಿದೆ. ಇಂತಹ ಸಂದರ್ಭ ಅರಂಬೂರು ಭಾರದ್ವಾಜ ಆಶ್ರಮ ನಡೆಸುವ ವೇದ ಶಿಬಿರ ಗಮನಸೆಳೆದಿದೆ. ನೂರಾರು ವಿದ್ಯಾರ್ಥಿಗಳು ವೇದ ಸಂರಕ್ಷಣೆಯಲ್ಲಿ ತೊಡಗಿದ್ದಾರೆ. ಹೀಗಾಗಿ ಈಗ ಗಮನಸೆಳೆದಿದೆ.

ಸುಳ್ಯ ಅರಂಬೂರು ಭಾರದ್ವಾಜ ಆಶ್ರಮದ ಸುಂದರ ಪರಿಸರ , ಪಯಸ್ವಿನಿ ನದಿಯ ಮಂಜುಳ ನಿನಾದದಲ್ಲಿ ಈಗ ವೇದದ ಮಂಗಲಘೋಷ ಮೊಳಗುತ್ತಿದೆ. ಕಾಂಚಿ ಮಠದ ಜಗದ್ಗುರು ಜಯೇಂದ್ರ ಸರಸ್ವತಿ ಮಹಾಸ್ವಾಮಿಗಳ  ದಿವ್ಯ ಸಂಕಲ್ಪವಾದ ವೇದ ಸಂರಕ್ಷಣೆಯ ಸಾಕಾರಕ್ಕೆ ಸುಳ್ಯ ಅರಂಬೂರು ಭಾರದ್ವಾಜ ಆಶ್ರಮ ಪ್ರಯತ್ನ ಮಾಡುತ್ತಿದೆ. ನೀರ್ಚಾಲು ಗಣೇಶ ಕೃಷ್ಣ ಭಟ್ ಹಾಗೂ ರವಿಶಂಕರ್ ಭಾರದ್ವಾಜ ರ ನಿರಂತರ ಪ್ರಯತ್ನ ದ ಫಲವಾಗಿ  2001 ರಲ್ಲಿ  ಶ್ರೀ ಕಾಂಚಿಕಾಮಕೋಟಿ ವೇದವಿದ್ಯಾಲಯದ ಸ್ಥಾಪನೆಯಾಗಿದೆ.

ಋಗ್ವೇದ, ಯಜುರ್ವೇದ, ಸಂಸ್ಕೃತ ಅಧ್ಯಯನ ಕ್ಕೆ ಅವಕಾಶ. ಈವರೆಗೆ ಇಲ್ಲಿ ಕಲಿತ 150 ಮಂದಿ ವಿದ್ಯಾರ್ಥಿಗಳು ಯೋಗ್ಯ ಪುರೋಹಿತರಾಗಿ, ದೇವಾಲಯದ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

 

ಕರ್ನಾಟಕ, ಕೇರಳ, ತಮಿಳುನಾಡು, ದೂರದ ಜಾರ್ಖಂಡ್ ನಿಂದ ವಿದ್ಯಾರ್ಥಿಗಳು ಆಗಮಿಸುತ್ತಾರೆ.ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯದ ವೇದ ಪರೀಕ್ಷೆಯಲ್ಲಿ ಭಾಗವಹಿಸಿ ಸರ್ಟಿಫಿಕೇಟ್ ಪಡೆಯುವ ವ್ಯವಸ್ಥೆ ಇದೆ.

ತಿಂಗಳಲ್ಲಿ ಎರಡು ಬಾರಿ ಚತುರ್ಥಿಯಂದು ಮಹಾಗಣಪತಿ ಹವನ,ಹುಣ್ಣಿಮೆಗೆ ಸಪ್ತಶತಿ ಪಾರಾಯಣ,ದುರ್ಗಾಪೂಜೆ,ಸೋಮವಾರ ಚೆನ್ನಕೇಶವ ದೇವಾಲಯ ದಲ್ಲಿ ವೇದಪಾರಾಯಣ, ಅರಂಬೂರು ಧರ್ಮಾರಣ್ಯದಲ್ಲಿ ಪಾರಾಯಣ, ಪರಿಸರದ ದೇವಾಲಯಗಳಾದ ಸುಳ್ಯ, ಆಲೆಟ್ಡಿ,ಕಾಯರ್ತೋಡಿ,ತೊಡಿಕಾನ ದೇವಾಲಯದ ಉತ್ಸವ ಸಂದರ್ಭದಲ್ಲಿ ವೇದಪಾರಾಯಣ ವೇದಸುತ್ತು ಸೇವೆ ನಡೆಸುತ್ತಾರೆ.
ರವಿಶಂಕರ್ ಭಾರದ್ವಾಜ್, ವೆಂಕಟೇಶ ಶಾಸ್ತ್ರಿ, ಶ್ರೀರಾಮ ಭಾರದ್ವಾಜರು ವಿದ್ಯಾಲಯದ ಆರಂಭದಿಂದಲೂ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

 

 

ವೇದ ಹಾಗೂ ಸಂಸ್ಕೃತ ವಿದ್ಯಾಭ್ಯಾಸ ಕ್ಕೆ ಪ್ರೋತ್ಸಾಹ ನೀಡಿ ಅಳಿವಿನ ಅಂಚಿನಲ್ಲಿರುವ ವೇದವಿದ್ಯೆಯ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಿ ವಿದ್ಯಾರ್ಥಿಗಳ ಕೊರತೆ ಕಾಣುತ್ತಿರುವ ಅನೇಕ ವೇದಪಾಠಶಾಲೆಗಳ ಪುನರುತ್ಥಾನದ ದೊಡ್ಡ ಹೊಣೆ ನಮ್ಮ ಮೇಲಿದೆ.ವೇದವೆಂಬ ಬೆಳಕು ಸದಾ ಸಮಾಜವನ್ನು ಬೆಳಗಿಸಲು ಎಲೆಮರೆಯ ಕಾಯಿಗಳಂತೆ ಭಾರತದ ಅನರ್ಘ್ಯ ವಾದ ವೇದಸಂಪತ್ತನ್ನು ಸಂರಕ್ಷಣೆ ಮಾಡುತ್ತಿರುವ ಇಂತಹ ಪಾಠಶಾಲೆ ಗಳಿಗೆ ಪ್ರೋತ್ಸಾಹ ನೀಡುವ ಕಾರ್ಯ ಆಗಬೇಕಿದೆ.

ಹೆಚ್ಚಿನ ಮಾಹಿತಿಗೆ  ಸಂಪರ್ಕಿಸಿ :  9449487690

 

 

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಗೋವಾದಲ್ಲಿ ಗೇರು ಕೃಷಿಗೆ ಕೋತಿಗಳ ಉಪಟಳ | ಕರಾವಳಿ ಕರ್ನಾಟಕದ ಗೇರು ಕೃಷಿಗೆ ಮುನ್ನೆಚ್ಚರಿಕೆಯ ಸಂದೇಶ ?
February 15, 2026
6:13 AM
by: ಮಿರರ್‌ ಡೆಸ್ಕ್
ಜಾಗತಿಕ ಕೋಕೋ ಬೆಲೆ ಕುಸಿತ | ಘಾನಾದಲ್ಲಿ ಕೋಕೋ ದರ ಭಾರೀ ಇಳಿಕೆ
February 15, 2026
5:50 AM
by: ಮಿರರ್‌ ಡೆಸ್ಕ್
ಭಾರತ–ಬಾಂಗ್ಲಾದೇಶ ಗಡಿಯಲ್ಲಿ ನಿಪಾ ಆತಂಕ | ಹರಡುವಿಕೆ ಅಪಾಯ ‘ಕಡಿಮೆ’ ಎಂದ WHO
February 15, 2026
5:43 AM
by: ಮಿರರ್‌ ಡೆಸ್ಕ್
ಕಡಲಾಮೆಗಳ ಸಂತಾನೋತ್ಪತ್ತಿಗೆ ಅರಣ್ಯ ಇಲಾಖೆ ರಕ್ಷಣೆ | ಬಾವಳ ಕಡಲತೀರದಲ್ಲಿ ಸಂತೋಷದ ಕ್ಷಣ
February 14, 2026
7:55 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror