ಪಾಲ್ತಾಡಿಯಲ್ಲಿ ತಾಯಿಯ ಆಶೀರ್ವಾದ ಪಡೆದ ಸಂಸದ ನಳಿನ್

Advertisement

ಸವಣೂರು : ಮೂರನೇ ಬಾರಿಗೆ ಸಂಸದರಾಗಿ ಆಯ್ಕೆಯಾದ ನಳಿನ್ ಕುಮಾರ್ ಕಟೀಲ್ ಅವರು ಶುಕ್ರವಾರ ಪಾಲ್ತಾಡಿಯ ಕುಂಜಾಡಿಯ ಮನೆಯಲ್ಲಿ ತಾಯಿಯ ಆಶಿರ್ವಾದ ಪಡೆದುಕೊಂಡರು.

Advertisement

ಇದೇ ವೇಳೆ ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದ ಬೆಳವಣಿಗೆಯ ಮೂಲ ಬೇರು ಆಗಿರುವ ಗುರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ  ಬಿ.ಕೆ.ರಮೇಶ್ ಅವರಿಗೂ ನಮಿಸಿದರು.

Advertisement
Advertisement

ಮೂರನೇ ಬಾರಿಗೆ ಸಂಸದರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಕುಂಜಾಡಿಗೆ ಆಗಮಿಸಿದ ನಳಿನ್ ಕುಮಾರ್ ಅವರನ್ನು  ಮನೆಯಲ್ಲಿ ಆರತಿ ಎತ್ತಿ ಸ್ವಾಗತಿಸಲಾಯಿತು.

ತನ್ನ ತಾಯಿ ಸುಶೀಲಾವತಿ ರೈ ಅವರ ಆಶೀರ್ವಾದ ಪಡೆದುಕೊಂಡರು.ತನ್ನ ಬೆಳವಣಿಗೆಯ ಹಿನ್ನೆಲೆಯಲ್ಲಿ ತಾಯಿಯ ತ್ಯಾಗ ದೊಡ್ಡದು ಎಂದು ಸಂಸದರು ಹೇಳಿದರು. ಈ ಸಂದರ್ಭ ಸಂಸದರ ಸಹೋದರ ನವೀನ್ ಕುಮಾರ್ ರೈ,ಅತ್ತಿಗೆ ಗೀತಾ , ಮನೋಹರ ರೈ ನರಿಮೊಗರು,ಪ್ರಮೋದ್ ಕೆ,ಆರ್ ಮೊದಲಾದವರಿದ್ದರು.

Advertisement

 

 

Advertisement

 

ಪಾಲ್ತಾಡಿಯ ಸ್ವಯಂಸೇವಕ:

Advertisement

ಮೂರನೇ ಬಾರಿಗೆ ಸಂಸದನಾಗಿ ಆಯ್ಕೆಯಾದ ನಳಿನ್ ಕುಮಾರ್ ಕಟೀಲ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ತನ್ನ ಹುಟ್ಟೂರು ಪಾಲ್ತಾಡಿಯ ಕುಂಜಾಡಿ ಸಮೀಪದ ಮುಕ್ಕೂರು ಹಿ.ಪ್ರಾ.ಶಾಲೆಯಲ್ಲಿ ಪೂರೈಸಿದ್ದರು.ಇವರ ತಂದೆ ದಿ.ನಿರಂಜನ್ ಶೆಟ್ಟಿ, ತಾಯಿ ಸುಶೀಲಾವತಿ ಅವರು.
ಮುಕ್ಕೂರು ಶಾಲೆಯಲ್ಲಿ 2ನೇ ತರಗತಿಯಲ್ಲಿ ವಿದ್ಯಾರ್ಥಿಯಾಗಿದ್ದಾಗ ಬಾಲಕ ನಳಿನ್ ಅವರನ್ನು ಪಾಲ್ತಾಡಿಯ ಮಂಜುನಾಥನಗರದಲ್ಲಿ ನಡೆಯುತ್ತಿದ್ದ ಆರ್.ಎಸ್.ಎಸ್‍ನ ನಿತ್ಯ ಶಾಖೆಗೆ ಕರೆತಂದವರು ಸಂಘದ ಹಿರಿಯ ಕಾರ್ಯಕರ್ತ ಬಿ.ಕೆ.ರಮೇಶ್ .


ಬಿ.ಕೆ.ರಮೇಶ್ ಅವರು ಹೇಳುವಂತೆ ಬಾಲಕ ನಳಿನ್ ಕುಮಾರ್ ಅವರು ಪ್ರತಿದಿನ ತಪ್ಪದೇ ಶಾಖೆಗೆ ಹಾಜರಾಗುತ್ತಿದ್ದರಲ್ಲದೆ,ಸಂಘದ ವಿಚಾರಗಳಿಗೆ ಬಹುಬೇಗನೇ ಆಕರ್ಷಿತರಾಗಿ ಮುಂದೆ  ಸಂಘದ ಪ್ರಚಾರಕರಾಗಿ ಕೆಲಸ ಮಾಡಿದರು ಎಂದು ಬಿ.ಕೆ.ರಮೇಶ್ ಅವರ ಮನದಾಳದ ಮಾತು.

Advertisement

ಸಂಘದ ಪಾಲ್ತಾಡಿ ಶಾಖೆಯ ಮುಖ್ಯಶಿಕ್ಷಕರಾಗಿದ್ದ ಬಿ.ಕೆ.ರಮೇಶ್ ಅವರನ್ನು ಇಂದಿಗೂ ಗುರುಗಳೆಂದು ಗೌರವಿಸುವ ನಳಿನ್ ಕುಮಾರ್ ಊರಿಗೆ ಬಂದಾಗ ಬಿ.ಕೆ.ರಮೇಶ್ ಅವರನ್ನು ಮಾತಾಡಿಸದೇ ಹೋಗುವುದು ಅಪರೂಪ.ಸಂಸದರಾಗಿ ಮೂರನೇ ಬಾರಿಗೆ ಆಯ್ಕೆಯಾಗಿ ಹಳ್ಳಿಯಿಂದ ದಿಲ್ಲಿಯ ಸಂಸತ್ ಭವನ ಪ್ರವೇಶಿಸುವ ನಳಿನ್ ಕುಮಾರ್ ತನ್ನ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಾರೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಬಿ.ಕೆ.ರಮೇಶ್.ಮೂರು ಬಾರಿಯ ಪ್ರಚಾರ ಸುಳ್ಯದಿಂದ ಆರಂಭಿಸುವಾಗಲೂ ತನ್ನ ಗುರು ಬಿ.ಕೆ.ರಮೇಶ್ ಅವರ ಕೈಯಿಂದಲೇ ಪ್ರಚಾರ ಸಭೆಗೆ ಚಾಲನೆ ನೀಡಿಸುವ ಮೂಲಕ ಗುರುವಿಗೆ ಗೌರವ ತಂದಿದ್ದಾರೆ. ಪ್ರತೀ ವರ್ಷವೂ ತಾನು ಬೆಳೆದ ಮಂಜುನಾಥನಗರದ ಸಿದ್ದಿವಿನಾಯಕ ಸೇವಾ ಸಂಘದ ವತಿಯಿಂದ ನಡೆಯುವ ಸಾರ್ವಜನಿಕ ಗಣೇಶೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಪಾಲ್ತಾಡಿಯಲ್ಲಿ ತಾಯಿಯ ಆಶೀರ್ವಾದ ಪಡೆದ ಸಂಸದ ನಳಿನ್"

Leave a comment

Your email address will not be published.


*