ಸುಳ್ಯ: ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದಂತೆಯೇ ಮುಂಜಾಗ್ರತಾ ಕ್ರಮಗಳ ಕಡೆಗೆ ಸರಕಾರ ಎಚ್ಚರಿಸಿತು. ಸಾರ್ವಜನಿಕರು ಕಡ್ಡಾಯವಾಗಿ ಮುಖವಸ್ತ್ರ ( ಮಾ್ಸ್ಕ್ ) ಧರಿಸಬೇಕು ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿತು.
ಈ ಸಂದರ್ಭ ಎಲ್ಲೆಡೆ ಮಾಸ್ಕ್ ಗೆ ಬೇಡಿಕೆ ವ್ಯಕ್ತವಾಯಿತು. ಈ ಸಂದರ್ಭ ಆರೋಗ್ಯ ಇಲಾಖೆಯ ಕಾರ್ಯಕರ್ತರಿಗೇ, ಅಗತ್ಯ ಸೇವೆ ಮಾಡುವ ಮಂದಿಗೇ ಮಾಸ್ಕ್ ಕೊರತೆ ಉಂಟಾಯಿತು. ಅನೇಕರು ಮಾಸ್ಕ್ ಇಲ್ಲ, ಮಾಸ್ಕ್ ಬಂದಿತೇ ಎಂದು ಟೀಕೆ ಮಾಡಿದರು, ಪ್ರಶ್ನೆ ಮಾಡಿದರು. ಆದರೆ ಇಲ್ಲೊಬ್ಬ ಮಹಿಳೆ ಈ ಇದ್ಯಾವುದೂ ಕೇಳದೆ, ತನಗೆ ಸಾಧ್ಯವಾದಷ್ಟು, ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಮನೆಯಲ್ಲೇ ಮಾಸ್ಕ್ ಮಾಡಿದರು. ತಾವೇ ಸ್ವತ: ಹೊಲಿದರು. ಉಚಿತವಾಗಿ ಹಂಚಿದರು.
ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ವಳಲಂಬೆಯ ಸೀತಾಲಕ್ಷ್ಮಿ ಅವರು ಮಾಸ್ಕ್ ತಯಾರಿಸಿದ ಉಚಿತವಾಗಿ ಹಂಚಿದ ಮಹಿಳೆ. ಬಿಳಿ ಹತ್ತಿ ವಸ್ತ್ರಗಳಿಂದ ತಯಾರಿಸಿದ ಸುಮಾರು 50 ಕ್ಕೂ ಹೆಚ್ಚು ಮಾಸ್ಕ್ ಗಳನ್ನು ಈಗಾಗಲೇ ಉಚಿತವಾಗಿ ವಿತರಿಸಿದ್ದು ತುರ್ತು ಅವಶ್ಯಕತೆ ಇರುವವರಿಗೆ ಇನ್ನಷ್ಟು ವಿತರಿಸಲು ಸಿದ್ಧರಿದ್ದಾರೆ. ಅವರ ಮನೆಯಲ್ಲಿದೆ. ಈಗ ಹತ್ತಿಯ ಬಟ್ಟೆಯ ಕೊರತೆ ಅವರಲ್ಲಿದೆ. ಬಟ್ಟೆ ತಂದು ಕೊಟ್ಟರೆ ಇನ್ನಷ್ಟು ಮಾಸ್ಕ್ ಮಾಡಿ ವಿತರಣೆ ಮಾಡಬಲ್ಲೆ ಎನ್ನುತ್ತಾರೆ. ಸಮಾಜ ಸೇವೆ ಎನ್ನುವುದು ಹೀಗೂ ಮಾಡಬಹುದು ಎನ್ನುವುದಕ್ಕೆ ಸೀತಾಲಕ್ಷ್ಮಿ ಅವರು ಸಾಕ್ಷಿಯಾಗಿದ್ದಾರೆ.
ಅವರ ಸಂಪರ್ಕ ಸಂಖ್ಯೆ : 9902846475