ಸುಳ್ಯ: ತನ್ನ ವಾರ್ಡ್ ನ ಪ್ರತಿ ಮನೆಗೂ ಲಡ್ಡು ಹಂಚಿ ಗೆಲುವಿನ ಸಿಹಿ ಸಂಭ್ರಮವನ್ನು ಹಂಚಿದ್ದಾರೆ ನ.ಪಂ.ಚುನಾವಣೆಯಲ್ಲಿ 17ನೇ ವಾರ್ಡ್ ಬೋರುಗುಡ್ಡೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿ ಜಯಶಾಲಿಯಾದ ಕೆ.ಎಸ್.ಉಮ್ಮರ್.
ಶುಕ್ರವಾರ ತನ್ನ ಬೆಂಬಲಿಗರೊಂದಿಗೆ ವಾರ್ಡ್ ನ ಎಲ್ಲಾ ಮನೆಗಳಿಗೂ ಭೇಟಿ ನೀಡಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಉಮ್ಮರ್ ಮನೆ ಮಂದಿಗೆ ಸಿಹಿ ತಿಂಡಿ ನೀಡಿದರು. ಕೆಲವು ಮನೆಗಳಲ್ಲಿ ನೂತನ ಸದಸ್ಯರನ್ನು ಜನತೆ ಹೂ ಹಾರ ಹಾಕಿ ಸ್ವಾಗತಿಸಿದರು. ವಾರ್ಡ್ ನ ಅಭಿವೃದ್ಧಿಗೆ ಉತ್ತಮ ಕೆಲಸ ಮಾಡುವಂತೆ ಹಿರಿಯರು ಆಶಯ ವ್ಯಕ್ತಪಡಿಸಿದರು.
ನ.ಪಂ.ಚುನಾವಣೆಯಲ್ಲಿ ಅತ್ಯಂತ ಪೈಪೋಟಿ ನಡೆದ ಬೋರುಗುಡ್ಡೆ ವಾರ್ಡ್ ನಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿ ಉಮ್ಮರ್ ಜಯಗಳಿಸಿದ್ದರು. ಕಳೆದ ಬಾರಿ ಎಸ್.ಡಿ.ಪಿ.ಐ ಸದಸ್ಯನಾಗಿದ್ದ ಉಮ್ಮರ್ ಈ ಬಾರಿ ಪಕ್ಷದಿಂದ ದೂರ ಸರಿದು ಪಕ್ಷೇತರನಾಗಿ ಸ್ಪರ್ಧಿಸಿದ್ದರು.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕಲೆ, ಸಾಹಿತ್ಯ, ಧಾರ್ಮಿಕ, ಕೃಷಿ, ವಿಶೇಷ ಲೇಖನ , ಅಂಕಣ, ವಿಶೇಷ ವರದಿಗಳು , ರಾಜಕೀಯ ವಿಶ್ಲೇಷಣೆ, ದಿನದ ಫೋಕಸ್ ಸ್ಟೋರಿ, ದಿನದ ಚಿತ್ರ, ವಾರದ ವ್ಯಕ್ತಿ , ಜಿಲ್ಲೆ, ರಾಜ್ಯ, ರಾಷ್ಟ್ರೀಯ ಪ್ರಮುಖ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಪ್ರತಿ ಮನೆಗೆ ಗೆಲುವಿನ ಸಿಹಿ ಹಂಚಿ ಸಂಭ್ರಮಿಸಿದ ಪಕ್ಷೇತರ ಸದಸ್ಯ ಉಮ್ಮರ್"