ಫಿಟ್ನೆಸ್‌ಗೆ ಬೆಳಗ್ಗಿನ ನಡಿಗೆ ಹೆಚ್ಚು ಪ್ರಸ್ತುತ

April 6, 2019
7:21 AM

ದೇಹ ಮತ್ತು ಮನಸ್ಸಿನ ಫಿಟ್ನೆಸ್‌ಗೆ ಬೆಳಗ್ಗಿನ ನಡಿಗೆ ಹೆಚ್ಚು ಪ್ರಸ್ತುತ. ಹಾಗಂತ ಮುಂಜಾನೆ ತಡಬಡಾಯಿಸಿ ಎದ್ದು ನಡಿಗೆ ಆರಂಭಿಸಬೇಕು ಎಂದಲ್ಲ. ಅದಕ್ಕೂ ಮುಂಚೆ ಒಂದಷ್ಟು ಸಲಹೆಗಳನ್ನು ಪಡೆದುಕೊಳ್ಳಿ.
ಸದಾ ಆ್ಯಕ್ಟಿವ್‌ ಆಗಿರಲು ಮತ್ತು ದೇಹದ ಫಿಟ್ನೆಸ್‌ಗೆ ವ್ಯಾಯಾಮ ಹಾಗು ಮಾರ್ನಿಂಗ್‌ ವಾಕ್‌ ಸಹಕಾರಿ. ಮಾರ್ನಿಂಗ್‌ ವಾಕ್‌ಗೆ ಇಲ್ಲಿದೆ ಕೆಲವು ಟಿಫ್ಸ್‌.

1. ಮನಸ್ಸು ಮಾಡಿ: ರಾತ್ರಿ ಬೇಗ ಮಲಗಿ ಬೆಳಿಗ್ಗೆ ಬೇಗ ಏಳಲೇ ಬೇಕೆಂಬ ಮನಸ್ಸು ಮಾಡಿ. ಮುದುಡಿಕೊಂಡು ಮಲಗುವ ಮನಸ್ಸನ್ನು ಹೆಚ್ಚು ಪ್ರೋತ್ಸಾಹಿಸುತ್ತದೆ. ಅದಕ್ಕೆ ಅವಕಾಶ ನೀಡದೆ ಬೇಗ ಏಳುವ ಅಭ್ಯಾಸ ಮಾಡಿಕೊಳ್ಳಿ.

2. ಪ್ರಾರಂಭ ಹೀಗಿರಲಿ: ಮಾರ್ನಿಂಗ್‌ ವಾಕ್‌ ನಿಧಾನವಾಗಿ ಪ್ರಾರಂಭಿಸಿ. ನಿಮ್ಮ ಕಾಲುಗಳ ಮಾಂಸಖಂಡಗಳು ನಡಿಗೆಗೆ ಸಿದ್ಧವಾದ ನಂತರ ಕ್ರಮೇಣ ವೇಗ ಹೆಚ್ಚಿಸಿಕೊಳ್ಳಿ. ಉತ್ತಮವಾದ ನಡಿಗೆಯ ಸ್ಥಳವನ್ನು ಆಯ್ಕೆ ಮಾಡಿ. ಚಳಿಗಾಲದ ಮಂಜಿನಿಂದ ತೇವವಾದ ಸ್ಥಳಗಳು ನಡಿಗೆಯನ್ನು ನಿಧಾನಗೊಳಿಸಬಹುದು ಅಥವಾ ಜಾರುವ ಸಂದರ್ಭ ಒದಗಬಹುದು. ಚಳಿಗಾಲದಲ್ಲಿ ಮಂಜು ಕವಿಯುತ್ತದೆ ಬೆಳಗಿನ ಜಾವ ರಸ್ತೆಗಳು ಕಾಣದಾಗುತ್ತದೆ. ಇಂತಹ ಸ್ಥಳಗಳ ಆಯ್ಕೆ ಬೇಡ. ಹೆಚ್ಚು ಟ್ರಾಫಿಕ್‌ ಇಲ್ಲದ ಹೆಚ್ಚು ತಣ್ಣನೆ ಗಾಳಿ ಬೀಸದ ಸ್ಥಳ ಆಯ್ಕೆ ಮಾಡಿ. ವಾಕ್‌ಗೆ ಹಗುರವಾದ ಜಾರದ ಶೂ ಆಯ್ಕೆ ಮಾಡಿ.

3. ಜತೆಗೆ ನೀರಿರಲಿ: ಒಂದು ಬಾಟಲ್‌ ನೀರು ಹತ್ತಿರವಿರಲಿ. ಬೇಸಿಗೆಯಲ್ಲಿ ಹೆಚ್ಚು ಬಾಯಾರುತ್ತದೆ, ಬೆವರು ಬರುತ್ತದೆ. ಎಂಬುದು ನೆನಪಿರಲಿ. ಆಗಾಗ್ಗೆ ನೀರು ಕುಡಿಯುತ್ತಿರಿ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

Team the rural mirror

ಇದನ್ನೂ ಓದಿ

ಗುಟ್ಕಾ–ಪಾನ್‌ಮಸಾಲಾ ನಿಷೇಧ : ಅಡಿಕೆ ಬೆಳೆಗಾರನ ಮುಂದಿರುವ ನಿಜವಾದ ಪ್ರಶ್ನೆ ಏನು?
August 14, 2026
7:14 AM
by: ಮಹೇಶ್ ಪುಚ್ಚಪ್ಪಾಡಿ
ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ
August 13, 2026
2:01 PM
by: ಸಾಯಿಶೇಖರ್ ಕರಿಕಳ
ಎಲ್ ನಿನೊ ಪರಿಣಾಮ 15 ರಾಜ್ಯಗಳ 342 ಜಿಲ್ಲೆಗಳಲ್ಲಿ ಮಳೆ ಕೊರತೆ
August 13, 2026
6:59 AM
by: ದ ರೂರಲ್ ಮಿರರ್.ಕಾಂ
ಇನ್ನೊಂದು ಮನೆಯ ಸಮಸ್ಯೆ ನಮಗೆ ಸುದ್ದಿ ; ನಮ್ಮ ಮನೆಯ ನೋವು ಮಾತ್ರ ನಮಗೆ ಸಂಕಟ..! ಯಾಕೆ ?
August 13, 2026
6:50 AM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror