ಫ್ರೆಂಚ್ ಓಪನ್ ಫೈನಲ್‌ಗೆ ಭಾರತೀಯ ಜೋಡಿ

October 27, 2019
10:02 PM

ಪ್ಯಾರಿಸ್: ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಭಾರತದ ದಿರಾಗ್ ಶೆಟ್ಟಿ- ಸಾತ್ವಿಕ್‌ ರಾಜ್ ರಂಕಿರೆಡ್ಡಿ ಜೋಡಿ ಅಚ್ಚರಿಯ ಜಯ ಸಾಧಿಸಿ ಫೈನಲ್‌ಗೆ ಮುನ್ನಡೆದಿದೆ.

ಭಾರತೀಯ ಜೋಡಿ ಜಪಾನ್‌ನ ಹಿರೊಯುಕಿ ಎಂಡೊ ಮತ್ತು ಯುತಾ ವಟಾನಬ್ ಜೋಡಿಯನ್ನು 21-11, 25-23 ಅಂತರದಲ್ಲಿ ಸೆಮಿಫೈನಲ್‌ನಲ್ಲಿ ಮಣಿಸಿ ಫೈನಲ್‌ಗೆ ಅರ್ಹತೆ ಪಡೆಯಿತು.

ಮೊದಲ ಸೆಟ್‌ನಲ್ಲಿ ಸುಲಭವಾಗಿ ಗೆದ್ದ ಭಾರತೀಯ ಜೋಡಿ ಗೆಲುವಿನ ಓಟ ಮುಂದುವರಿಸಿ 49 ನಿಮಿಷಗಳಲ್ಲಿ ಪಂದ್ಯ ಗೆದ್ದಿತು. ಶುಕ್ರವಾರ ಭಾರತದ ಪಿ.ವಿ.ಸಿಂಧು ಹಾಗೂ ಸೈನಾ ನೆಹ್ವಾಲ್ ಇಬ್ಬರೂ ಕ್ವಾರ್ಟರ್ ಫೈನಲ್ ಹಂತದಲ್ಲಿ ನಿರ್ಗಮಿಸಿದ್ದರು. ಭಾರತದ ಕಿಡಂಬಿ ಶ್ರೀಕಾಂತ್ ಮೊದಲ ಸುತ್ತಿನಲ್ಲೇ ಥೈವಾನ್‌ನ ಚೊವ್ ತೀನ್ ಚೆನ್‌ಗೆ ಸೋತು ಹೊರ ನಡೆದಿದ್ದರು. ಭಾರತದ ಮತ್ತೊಬ್ಬ ಆಟಗಾರ ಪರುಪಳ್ಳಿ ಕಶ್ಯಪ್ ಅವರು ಹಾಂಕಾಂಗ್‌ನ ಎನ್‌ಜಿ ಕಾ ಲಾಂಗ್ ಅಂಗಸ್ ವಿರುದ್ಧ 11-21, 9-21 ಅಂತರದಿಂದ ಸೋತಿದ್ದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಡಿಕೆ ಕತ್ತರಿಸಿ ಹಲಸು ನೆಟ್ಟ ಕೃಷಿಕ
July 5, 2026
11:19 PM
by: ದ ರೂರಲ್ ಮಿರರ್.ಕಾಂ
ಅಡಿಕೆಯಿಂದ ಹಲಸಿನತ್ತ “ಸಂತೋಷ” ಪಯಣ – ನೀರಿನ ಕೊರತೆಯ ಸವಾಲನ್ನು ಅವಕಾಶವಾಗಿಸಿದ ಕೃಷಿಕ
July 5, 2026
5:47 PM
by: ಮಹೇಶ್ ಪುಚ್ಚಪ್ಪಾಡಿ
ಬಾಳ ಮಧ್ಯಾಹ್ನದ ಲಹರಿ
July 5, 2026
3:10 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 05-07-2026 | ರಾಜ್ಯದಲ್ಲಿ ಮಳೆ ಇಳಿಮುಖದತ್ತ? ಜುಲೈ 8–10 ರಿಂದ ಹವಾಮಾನದಲ್ಲಿ ಬದಲಾವಣೆ ಸಾಧ್ಯತೆ
July 5, 2026
2:32 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror