ಬೆಳ್ಳಾರೆ : ಬೆಳ್ಳಾರೆ ಪೊಲೀಸ್ ಠಾಣೆಯ ವತಿಯಿಂದ ಹಿರಿಯ ನಾಗರೀಕರ ಸಭೆ ನಡೆಯಿತು. ಠಾಣಾಧಿಕಾರಿ ಈರಯ್ಯ ಡಿ.ಎನ್ ಮಾಹಿತಿ ನೀಡಿ, ಮನೆಗೆ ಬರುವ ಅಪರಿಚಿತ ವ್ಯಕ್ತಿಗಳು, ಚಿನ್ನ ಪಾಲೀಶ್ ಮಾಡುವವರು, ಅನಾಮಧೇಯ ಕರೆ, ಬ್ಯಾಂಕ್ ಖಾತೆ ವಿವರ ಕೇಳುವ, ಎ.ಟಿ.ಎಂ ಸಂಖ್ಯೆ ಕೇಳುವವರ ಬಗ್ಗೆ ಜಾಗ್ರತೆ ವಹಿಸಲು ಸೂಚಿಸಿದರು. ಮನೆ ಮನೆಗಳಿಗೆ ಹಾಸಿಗೆ ದುರಸ್ಥಿ ನೆಪದಲ್ಲಿ, ಗುಜುರಿ ವ್ಯಾಪಾರಿ ಹೆಸರಿನಲ್ಲಿ ಬರುವ ವ್ಯಕ್ತಿಗಳ ಬಗ್ಗೆ ಎಚ್ಚರವಿರುವಂತೆ ಸಲಹೆ ನೀಡಿದರು.
ಹಿರಿಯ ನಾಗರೀಕರ ಗುರುತಿನ ಚೀಟಿ ಸೌಲಭ್ಯದ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಲಾಯಿತು. ಪ್ರೊಬೇಷನರಿ ಸಬ್‍ಇನ್‍ಸ್ಪೆಕ್ಟರ್ ಆಂಜನೇಯ ರೆಡ್ಡಿ ಸೇರಿದಂತೆ ಠಾಣೆಯ ಸಿಬಂದಿಗಳು, ಸುತ್ತಮುತ್ತಲಿನ ಊರುಗಳ ಹಿರಿಯ ನಾಗರೀಕರು ಉಪಸ್ಥಿತರಿದ್ದರು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement