ಬೆಳ್ಳಾರೆ: ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯ ಹಿದಾಯತುಲ್ ಇಸ್ಲಾಂ ಮದರಸದಲ್ಲಿ ಮಿಹ್‍ರಜಾನುನ್ನಿಹಾಯ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.
ಮಸೀದಿಯ ಮುದರ್ರಿಸ್ ತಾಜುದ್ದೀನ್ ರಹ್ಮಾನಿ ದುವಾಃ ನೀಡಿ ಉದ್ಘಾಟಿಸುವುದರೊಂದಿಗೆ ಝಿಯಾರತ್‍ಗೆ ಚಾಲನೆ ನೀಡಿದರು. ರೇಂಜ್ ಮಟ್ಟ, ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳನ್ನು ಬೀಳ್ಕೊಡಲಾಯಿತು. ಎಸ್‍ಕೆಎಸ್‍ಬಿವಿ ವಿದ್ಯಾರ್ಥಿ ತಂಡದಿಂದ ಇಶಲ್‍ನೈಟ್, ಬುರ್ದಾ ಮಜ್ಲಿಸ್, ಅಹ್‍ಲನ್ ರಮಲಾನ್ ಕಾರ್ಯಕ್ರಮಗಳು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಸೀದಿ ಉಪಾಧ್ಯಕ್ಷ ಯು.ಹೆಚ್ ಅಬೂಬಕ್ಕರ್ ವಹಿಸಿದರು. ವೇದಿಕೆಯಲ್ಲಿ ಹಾಜಿ ಕೆ ಮಮ್ಮಾಲಿ, ಬಶೀರ್ ಬಿ.ಎ, ಬಶೀರ್ ಯು.ಪಿ, ಜಮಾಲುದ್ದೀನ್ ಕೆ.ಎಸ್, ಮುಸ್ತಾಫಾ ಕಲ್ಲಪಣೆ, ಕೆ.ಎ ಬಶೀರ್ ಉಪಸ್ಥಿತರಿದ್ದರು. ಸುಲೈಮಾನ್ ಮುಸ್ಲಿಯಾರ್ ಸ್ವಾಗತಿಸಿ, ಹಸೈನಾರ್ ಮುಸ್ಲಿಯಾರ್ ವಂದಿಸಿದರು. ಸದರ್‍ಮುಅಲ್ಲಿಂ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ ಪ್ರಸ್ತಾವನೆಗೈದರು. ಝೈನುದ್ದೀನ್ ಮುಸ್ಲಿಯಾರ್ ಕಾರ್ಯಕ್ರಮ ನಿರೂಪಿಸಿದರು.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಬೆಳ್ಳಾರೆ ಮದರಸದಲ್ಲಿ ಪ್ರತಿಭಾ ಪುರಸ್ಕಾರ"