ಸುಳ್ಯ: ಬೊಬ್ಬೆಕೇರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆವಿಧ್ಯಾರ್ಥಿ ಸಂಘ ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಇವುಗಳ ಸಹಭಾಗಿತ್ವದಲ್ಲಿ ಚಿಣ್ಣರ ಮಂಟಪ ಪೂರ್ವ ಪ್ರಾಥಮಿಕ ತರಗತಿಗಳ ಪ್ರಾರಂಭೋತ್ಸವದ ಪೂರ್ವ ಆಗಮಿಸಿದ ಶಾಸಕ ಎಸ್.ಅಂಗಾರ ರಿಗೆ ೧ ನೇ ತರಗತಿಯಿಂದ ಆಂಗ್ಲಮಾಧ್ಯಮ ವಿಭಾಗ ಪ್ರಾರಂಭಿಸಲು ಹಾಗೂ ಶಾಲೆಗೆ ಹೊಸ ಕಟ್ಟಡ ರಚಿಸಲು ಅನುದಾನ ಒದಗಿಸುವಂತೆ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ.ಅಧ್ಯಕ್ಷ ಜಯರಾಮ ನಾವೂರು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ಪೈಕ, ಕಾರ್ಯದರ್ಶಿ ಪ್ರವೀಣ್ ನಾವೂರು,ಕೋಶಾಧಿಕಾರಿ ಸುಕುಮಾರ ಕಲ್ಪಡ, ಮುಖ್ಯ ಶಿಕ್ಷಕ ಸೋಮಪ್ಪ ಗೌಡ, ಗ್ರಾ.ಪಂ.ಅಧ್ಯಕ್ಷೆ ಮಾಧವಿ ಕೋಡಂದೂರು,ಉಪಾಧ್ಯಕ್ಷೆ ಕಮಲಾಕ್ಷಿ, ಸದಸ್ಯರಾದ ಗಣೇಶ್ ಉದುನಡ್ಕ , ಬಾಬು ದರ್ಖಾಸ್ತು,ವೀರಪ್ಪ ಉದ್ಲುಡ್ಕ , ಹಾಲು ಸೊಸೈಟಿ ಅಧ್ಯಕ್ಷ ರಾಮಣ್ಣ ಮೂಡೈಮಜಲು, ಚಾರ್ವಕ ಸಹಕಾರಿ ಸಂಘದ ನಿರ್ದೇಶಕ ಅನಂತ ಬೈಲಂಗಡಿ ಮತ್ತಿತರರು ಉಪಸ್ಥಿತರಿದ್ದರು.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಬೊಬ್ಬೆಕೇರಿ ಶಾಲೆಗೆ ಅನುದಾನ ಒದಗಿಸಲು ಶಾಸಕರಿಗೆ ಮನವಿ"