ಬೆಳ್ಳಾರೆ: ಭುವಿಯನ್ನು ಹಸುರಾಗಿಸಲು ಕಾಕಿಧಾರಿಗಳು ಕೈ ತುಂಬಾ ಕೆಸರು ಮಾಡಿಕೊಂಡರು. ಬೆಳ್ಳಂ ಬೆಳಗ್ಗೆ ಪೊಲೀಸ್ ಠಾಣೆ ಸುತ್ತಲೂ ಗಿಡ ನೆಡುವ ಮೂಲಕ ಬೆಳ್ಳಾರೆಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದರು.
ಸುಳ್ಯ ಸರ್ಕಲ್ ಇನ್ಸ್‌ಪೆಕ್ಟರ್ ಆರ್. ಸತೀಶ್ ಕುಮಾರ್ ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪಿ ಎಸ್ ಐ ಈರಯ್ಯ ಮತ್ತು ಸಿಬ್ಬಂದಿಗಳು ಉತ್ಸಾಹದಿಂದ ಪಾಲ್ಗೊಂಡು ವಿವಿಧ ಜಾತಿಯ ಗಿಡಗಳನ್ನು ನೆಟ್ಟರು. ಪ್ರತಿ ವರ್ಷವೂ ಬೆಳ್ಳಾರೆ ಠಾಣೆಯಲ್ಲಿ ಗಿಡ ನೆಡುವ ಮೂಲಕ ವನ ಮಹೋತ್ಸವ ವನ್ನು ಆಚರಿಸುತ್ತಾರೆ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಭುವಿಯನ್ನು ಹಸುರಾಗಿಸಲು ಖಾಕಿಧಾರಿಗಳ ಕೈ ಕೆಸರಾಯಿತು !"