ಮಡಪ್ಪಾಡಿ : ಮಹಾತ್ಮಗಾಂಧಿ ಗ್ರಾಮ ಸೇವಾ ತಂಡ ಮಡಪ್ಪಾಡಿ ಇದರ 180 ನೇ ವಾರದ ಶ್ರಮದಾನ ಭಾನುವಾರ ಮುಂಜಾನೆ ನಡೆಯಿತು.
ಮಡಪ್ಪಾಡಿ ಶಾಲೆ ಆವರಣದಲ್ಲಿ ಮರಗಳ ಗೆಲ್ಲು ಸವರಿ ಅಡಿಕೆ ಗಿಡಗಳಿಗೆ ಸೊಪ್ಪು ಮಾಡಲಾಯಿತು. ತಂಡದ ಸದಸ್ಯ ಪೂಂಬಾಡಿ ಗಂಗಯ್ಯ ಗೌಡರು ಶಾಲಾ ಆವರಣದಲ್ಲಿ ನೆಟ್ಟು ಬೆಳೆಸಿದ 100 ಮಂಗಳ ಅಡಿಕೆ ಗಿಡಗಳ ನಿರ್ವಹಣೆಯನ್ನು ಮಹಾತ್ಮಗಾಂಧಿ ಗ್ರಾಮ ಸೇವಾ ತಂಡ ಕಳೆದ ಎರಡೂವರೆ ವರ್ಷಗಳಿಂದ ನಿರ್ವಹಿಸುತ್ತಿದ್ದು ಈಗ ಹಿಂಗಾರ ಬಿಡಲು ಸಿದ್ದವಾಗುತ್ತಿದೆ.ಮುಂದಿನ ದಿನಗಳಲ್ಲಿ ಇದರಿಂದ ಶಾಲೆಗೆ ಪ್ರಯೋಜನವಾಗುವುದಲ್ಲಿ ಸಂದೇಹವಿಲ್ಲ. ಗ್ರಾಮದ ಸ್ವಚ್ಛತೆ ಜೊತೆಗೆ ಶಾಲೆಗೆ ಒಂದು ಸೇವೆ ಮಹಾತ್ಮಗಾಂಧಿ ಗ್ರಾಮ ಸೇವಾ ತಂಡದಿಂದ ಆಗಿದೆ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಮಡಪ್ಪಾಡಿಯಲ್ಲಿ 180 ನೇ ವಾರದ ಶ್ರಮದಾನ"